ಗಣೇಶ ಹಬ್ಬಕೆ ಬಿಡುಗಡೆ ಮಾಡಿದ ಕ್ರಾಂತಿ ಸಿನಿಮಾ ಪೋಸ್ಟರ್ ಗೆ ಅಸಮಾಧಾನ ವ್ಯಕ್ತ ಪಡಿಸಿದ ಡಿ ಬಾಸ್ ಫ್ಯಾನ್ಸ್. ಯಾಕೆ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ಬಹುತೇಕ ಪ್ರಮಾಣದ ಚಿತ್ರೀಕರಣವನ್ನು ಮುಗಿಸಿದ್ದು ರಾಜ್ಯೋತ್ಸವ ಸಂಭ್ರಮವಾಗಿ ಬಿಡುಗಡೆ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಯಜಮಾನ ಚಿತ್ರದ ಅದೇ ತಂಡವೇ ಕ್ರಾಂತಿ ಸಿನಿಮಾವನ್ನು ನಿರ್ಮಾಣ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾಯಕನಾಗಿ, ಶೈಲಜಾ ನಾಗ ರವರು ನಿರ್ಮಾಪಕರಾಗಿ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ.
ಕೇವಲ ಇಷ್ಟು ಮಾತ್ರವಲ್ಲದೆ ಬುಲ್ ಬುಲ್ ಸಿನಿಮಾದ ನಂತರ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಬರೋಬ್ಬರಿ ಎಂಟು ವರ್ಷಗಳ ನಂತರ ಡಿ ಬಾಸ್ ರವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಷಕ ನಟರಾಗಿ ಕ್ರೇಜಿಸ್ಟಾರ್ ರವಿಚಂದ್ರ ಹಾಗೂ ಸುಮಲತಾ ಅಂಬರೀಶ್ ರವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈಗ ಗಣೇಶ ಚತುರ್ಥಿ ಹಬ್ಬದ ವಿಶೇಷವಾಗಿ ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಈ ಪೋಸ್ಟರ್ ಈಗ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಯಾಕೆಂದರೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕ್ರಾಂತಿ ಸಿನಿಮಾದ ಘನತೆಗೆ ತಕ್ಕಂತೆ ಪೋಸ್ಟರ್ ಡಿಸೈನ್ ಮಾಡಿಲ್ಲ ಪೋಸ್ಟರ್ ಡಿಸೈನ್ ಕಳಪೆ ಮಟ್ಟದ್ದಾಗಿದೆ ಎಂಬುದಾಗಿ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದರೂ ಕೂಡ ಪೋಸ್ಟರ್ ಡಿಸೈನ್ ಮೇಲೆ ಶನಿವಾದ ರಿಲೀಸ್ ಡೇಟ್ ಹಾಕಿಲ್ಲ ಎನ್ನುವ ಕೋಪವೂ ಕೂಡ ಅಭಿಮಾನಿಗಳಲ್ಲಿದೆ. ಹೀಗಾಗಿ ಚಿತ್ರದ ಪ್ರಮೋಷನ್ ಚಟುವಟಿಕೆಗಳ ಮೇಲೆ ಚಿತ್ರತಂಡ ಸ್ವಲ್ಪ ನಿಗ ವಹಿಸಬೇಕು ಎಂಬುದಾಗಿ ಅಭಿಮಾನಿಗಳು ಚಿತ್ರತಂಡಕ್ಕೆ ಬಿಸಿ ಮುಟ್ಟಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಅಭಿಮಾನಿಗಳು ಸಿನಿಮಾವನ್ನು ಯಾವ ಲೆವೆಲ್ ನಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿದೆ. ಚಿತ್ರತಂಡವು ಕೂಡ ಇದಕ್ಕೆ ಸರಿಹೊಂದುವಂತೆ, ಅಪ್ಡೇಟ್ಗಳನ್ನು ಬಿಡುಗಡೆ ಮಾಡಬೇಕು ಎನ್ನುವುದು ಅಭಿಮಾನಿಗಳ ಕೋರಿಕೆಯಾಗಿದೆ.