55 ವರ್ಷದ ಮುದುಕನನ್ನು ಪ್ರೀತಿ ಮಾಡಿದ 18 ರ ಹುಡುಗಿ: ನನ್ನನ್ನು ಭೇಟಿಯಾಗಬೇಡ ಎನ್ನುತ್ತಲೇ ಇವರು ಮಾಡಿದ್ದೇನು ಗೊತ್ತೇ??

12

ನಮಸ್ಕಾರ ಸ್ನೇಹಿತರೆ ಎಲ್ಲರೂ ಕೂಡ ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ ಪ್ರೀತಿ ಕುರುಡು ಎಂಬುದಾಗಿ ಹೇಳುತ್ತಾರೆ. ಆದರೆ ಅದು ಇಂದಿನ ನೈಜ ಘಟನೆಯ ಕಥೆಯನ್ನು ಕೇಳಿದ ನಂತರ ಖಂಡಿತವಾಗಿ ನೀವು ಕೂಡ ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ 18 ವರ್ಷದ ಹುಡುಗಿ ಒಬ್ಬಳು 55 ವರ್ಷದ ಪುರುಷನನ್ನು ಮದುವೆಯಾಗಿದ್ದಾಳೆ. ಅಂದರೆ ತಂದೆಯ ವಯಸ್ಸಿನ ವ್ಯಕ್ತಿಯನ್ನು ಆಕೆ ಮದುವೆಯಾಗಿದ್ದಾಳೆ ಎಂದು ಹೇಳಬಹುದು.

ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಪಾಕಿಸ್ತಾನದ ಮೂಲದ ಫಾರೂಖ್ ಹಾಗೂ ಮುಸ್ಕಾನ್ ಎನ್ನುವ ಇಬ್ಬರು ಸಂಗೀತದ ಮೂಲಕ ಪ್ರೀತಿಯಲ್ಲಿ ಬಿದ್ದ ಕಥೆ ಇದು. ಮುಸ್ಕಾನ್ ಹಾಡಿರುವ ಒಂದು ಹಾಡಿನ ಮೂಲಕ ಫಾರೂಕ್ ಆಕೆಯ ಪ್ರೀತಿಗೆ ಬಿದ್ದಿದ್ದಾನೆ. ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಬಾಬಿ ಡಿಯೋಲ್ ನಟನೆಯ ಸಿನಿಮಾ ನ ಮಿಲೊ ಹಮ್ ಸೇ ಜ್ಯಾದ ಎನ್ನುವ ಹಾಡು ಇಬ್ಬರನ್ನು ಪ್ರೀತಿಗೆ ಬೀಳಿಸಿ ಮನೆಯವರ ವಿರೋಧದ ನಡುವೆಯೂ ಕೂಡ ಮದುವೆಯಾಗುವಂತೆ ಮಾಡಿದೆ. ಇಬ್ಬರೂ ಕೂಡ ಅಕ್ಕ ಪಕ್ಕದ ಮನೆಯಲ್ಲಿಯೇ ಇದ್ದರು ಮೊದಮೊದಲಿಗೆ ವಯಸ್ಸಿನ ಅಂತರದಿಂದ ಇವರಿಬ್ಬರೂ ಒಬ್ಬರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮುಸ್ಕಾನ್ ಹಾಡುತ್ತಿದ್ದ ಹಾಡು ಎನ್ನುವುದು ಫಾರೂಕ್ ಆಕೆಯ ಪ್ರೀತಿಗೆ ಬೀಳುವಂತೆ ಮಾಡುತ್ತದೆ. ಫಾರೂಕ್ ನ ಸಂಗೀತ ಪ್ರೀತಿಯು ಕೂಡ ಮುಸ್ಕಾನ್ ಳನ್ನು ಅವನ ಪ್ರೀತಿಗೆ ಬೀಳುವಂತೆ ಮಾಡುತ್ತದೆ.

ಮುಸ್ಕಾನ್ ಮನೆಗೆ ಬಂದು ಫಾರೂಖ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಆ ಸಂದರ್ಭದಲ್ಲಿ ಫಾರೂಕ್ ಕೂಡ ಮದುವೆ ಆಗಿರುವುದಿಲ್ಲ. ಹೀಗಾಗಿ ಇವರಿಬ್ಬರ ನಡುವಿನ ಪ್ರೀತಿ ಮದುವೆ ಮಾತುಕತೆವರೆಗೂ ಹೋಗಿತ್ತು ಆದರೆ ಮನೆಯವರು ಇವರಿಬ್ಬರ ಮದುವೆಯನ್ನು ತಿರಸ್ಕರಿಸಿದ್ದರು. ಹೇಗಿದ್ದರೂ ಕೂಡ ಮನೆಯವರ ವಿರೋಧದ ನಡುವೆಯೂ ಫಾರೂಕ್ ಹಾಗೂ ಮುಷ್ಕಾನ್ ಇಬ್ಬರು ಕೂಡ ಪ್ರೀತಿಸಿ ಈಗ ಮದುವೆಯಾಗಿದ್ದಾರೆ. ಇತ್ತೀಚಿಗಷ್ಟೇ ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಇದರ ಕುರಿತಂತೆ ಹೇಳುವ ಮೂಲಕ ಇವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ.