ನಿಂತು ಹೋದ ಲಿಫ್ಟ್ ನಲ್ಲಿ ಎಲ್ಲರನ್ನು ರಕ್ಷಿಸಿದ ಸೆಕ್ಯೂರಿಟಿ ಗಾರ್ಡ್ ಆದರೆ ಒಳಗಡೆ ಇದ್ದ ಭೂಪ ಸೆಕ್ಯೂರಿಟಿ ಗಾರ್ಡ್ ಗೆ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೂ ಆ ಭೂಪನ ಪರಿಸ್ಥಿತಿ ಏನಾಗಿದೆ ಗೊತ್ತೇ??

21

ನಮಸ್ಕಾರ ಸ್ನೇಹಿತರೇ ಈ ಕಾಲದಲ್ಲಿ ಸಹಾಯ ಮಾಡುವವರು ಸಿಗುವುದೇ ಕಷ್ಟ ಏಕೆಂದರೆ ಇಡೀ ಪ್ರಪಂಚವೇ ತಮ್ಮ ಸ್ವಾರ್ಥದ ಬಗ್ಗೆ ಯೋಚಿಸಿ ಕೇವಲ ತಮ್ಮ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ. ಆದರೆ ಇನ್ನೊಬ್ಬ ಸಹಾಯಮಾಡಿಯೂ ಕೂಡ ಮಾಡಿಸಿಕೊಂಡ ಭೂಪನಿಂದ ಶಿಕ್ಷೆಯನ್ನು ಪಡೆದುಕೊಂಡಿದ್ದಾನೆ. ಹೌದು ಗೆಳೆಯರೇ ಇಂದು ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಹರಿಯಾಣದ ಗುರು ಗ್ರಾಮದಲ್ಲಿ. ಕ್ಲೋಸ್ ನಾರ್ತ್ ಸೊಸೈಟಿ ನಿವಾಸಿ ಆಗಿರುವ ವರುಣ್ ನಾಥ್ ಎನ್ನುವವರು ಲಿಫ್ಟ್ ನಿಂದ 14ನೇ ಮಹಡಿಯಿಂದ ಕೆಳಗೆ ಬರುತ್ತಿರಬೇಕಾದರೆ ಅನಿರೀಕ್ಷಿತವಾಗಿ ಲಿಫ್ಟ್ ಅಲ್ಲಿಯೇ ನಿಂತುಕೊಂಡಿತ್ತು.

ಕೂಡಲೇ ವರುಣ್ ನಾಥ್ ಲಿಫ್ಟ್ ನಲ್ಲಿದ್ದ ಇಂಟರ್ಕಾಮ್ ಮೂಲಕ ಸೆಕ್ಯೂರಿಟಿ ಗಾರ್ಡ್ ಅಶೋಕ್ ಕುಮಾರ್ ಅವರಿಗೆ ಈ ಬಗ್ಗೆ ಮಾಹಿತಿಯನ್ನು ತಿಳಿಸುತ್ತಾರೆ. ಅಶೋಕ್ ಕುಮಾರ್ ಕೂಡಲೇ ತಂತ್ರಜ್ಞರನ್ನು ಕರೆಸಿ, ನಾಲ್ಕರಿಂದ ಐದು ನಿಮಿಷದ ಒಳಗೆ ಲಿಫ್ಟ್ ಮತ್ತೆ ಚಲಿಸುವಂತೆ ಮಾಡಿ ವರುಣ್ ನಾಥ್ ಅವರನ್ನು ರಕ್ಷಿಸುತ್ತಾರೆ. ಆದರೆ ಆ ವರುಣ್ ನಾಥ್ ಎನ್ನುವ ಪುಣ್ಯಾತ್ಮ ಲಿಫ್ಟ್ ನಿಂದ ಹೊರಬಂದ ತಕ್ಷಣ ಅಶೋಕ್ ಕುಮಾರ್ ಅವರಿಗೆ ಧನ್ಯವಾದಗಳು ತಿಳಿಸುವ ಬದಲು ಅವರ ಕಪಾಳ ಮೋಕ್ಷವನ್ನು ಮಾಡಿದ್ದಾನೆ. ಇದರ ಕುರಿತಂತೆ ಬೇಸರವನ್ನು ವ್ಯಕ್ತಪಡಿಸಿರುವ ಸೆಕ್ಯೂರಿಟಿ ಗಾರ್ಡುಗಳು ನಾವು ಹಗಲಿರಲು ಶ್ರಮಿಸುತ್ತೇವೆ ಆದರೆ ಇವರು ನಮ್ಮನ್ನು ಗುಲಾಮರಂತೆ ನೋಡಿಕೊಳ್ಳುತ್ತಾರೆ ಎಂಬುದಾಗಿ ನಿವಾಸಿಗಳ ವಿರುದ್ಧ ಅಸಮಾಧಾನವನ್ನು ಅಳಲಿನ ಮೂಲಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ಸಿಸಿಟಿವಿ ಫೂಟೇಜ್ ಪೊಲೀಸರಿಗೆ ದೊರಕಿದ್ದು ಆತನನ್ನು ಈಗಾಗಲೇ ಬಂಧಿಸಿ ನಂತರ ಜಾಮೀನಿನ ಮೂಲಕ ಆತನನ್ನು ಬಿಡುಗಡೆಗೊಳಿಸಿ ಎಚ್ಚರಿಕೆಯನ್ನು ಕೂಡ ರವಾನಿಸಿದ್ದಾರೆ. ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಸಿಸಿಟಿವಿ ಫೂಟೇಜ್ ವೈರಲ್ ಆಗಿದ್ದು ವರುಣ್ ನಾಥ್ ವಿರುದ್ಧ ವ್ಯಾಪಕ ಅಸಮಾಧಾನಕರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.