ಸುಖ ಸುಮ್ಮನೆ ಇದ್ದ ದರ್ಶನ್ ರವರ ವಿಚಾರದಲ್ಲಿ ತಪ್ಪು ಮಾಡಿದ ಬಾಲಿವುಡ್ ನಟ ಊರ್ವಶಿ: ರೊಚ್ಚಿಗೆದ್ದ ಫ್ಯಾನ್ಸ್. ನಟಿ ಏನು ಮಾಡಿದ್ದಾರೆ ಗೊತ್ತೇ??

70

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಊರ್ವಶಿ ರೌಟೆಲಾ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಒಂದು ಕಡೆಯಲ್ಲಿ ಊರ್ವಶಿ ಅವರು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗನ ಜೊತೆಗೆ ಪರೋಕ್ಷವಾಗಿ ಹಗ್ಗಜಗಾಟದಲ್ಲಿದ್ದಾರೆ. ಹೌದು ಗೆಳೆಯರೇ ನಟಿ ಊರ್ವಶಿರ ರೌಟೆಲ ಅವರು ರಿಷಬ್ ಪಂತ್ ಅವರ ವಿರುದ್ಧ ಪರೋಕ್ಷವಾಗಿಯೇ ಹೇಳಿಕೆ ನೀಡುವ ಮೂಲಕ ಅವರೊಂದಿಗೆ ಮುಸುಕಿನ ಗುದ್ದಾಟದಲ್ಲಿದ್ದಾರೆ. ಇಷ್ಟು ಸಾಲದೆನ್ನುವಂತೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಕೂಡ ಊರ್ವಶಿ ರೌಟೆಲ ಗುರಿಯಾಗಿದ್ದಾರೆ.

ನಿಮಗೆ ನೆನಪಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಐರಾವತ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಊರ್ವಶಿ ರೌಟೆಲಾ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಅದಾದ ನಂತರ ಊರ್ವಶಿ ರೌಟೆ ಅಲ್ಲ ಯಾವುದೇ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯ ರಾಗಿದ್ದಾರೆ. ಇತ್ತೀಚಿಗಷ್ಟೇ ದರ್ಶನ್ ಅವರಿಗೆ ಶುಭಾಶಯಗಳು ಕೋರುವ ಮೂಲಕ ದರ್ಶನ್ ಅವರ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಅರೆ ಇದೇನಿದು ದರ್ಶನ್ ರವರಿಗೆ ಶುಭಾಶಯ ಕೋರಿದ್ರೆ ಅಭಿಮಾನಿಗಳು ಯಾಕೆ ಕೋಪಗೊಳ್ಳುತ್ತಾರೆ ಎಂಬುದಾಗಿ ನೀವು ಯೋಚಿಸಬಹುದು ಅದಕ್ಕೂ ಕೂಡ ಒಂದು ಕಾರಣವಿದೆ.

ದರ್ಶನ್ ರವರ ಜನ್ಮದಿನ ಸಂಭ್ರಮಾಚರಣೆ ಇರುವುದು ಫೆಬ್ರವರಿ 16ರಂದು. ಆದರೆ ಊರ್ವಶಿ ರೌಟೆಲ ಅವರು ಆಗಸ್ಟ್ 29ರಂದು ದರ್ಶನ್ ರವರಿಗೆ ಜನ್ಮದಿನದ ಶುಭಾಶಯಗಳು ಕೋರುವ ಮೂಲಕ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ. ನೆಟ್ಟಿಗರು ಕೂಡ ಈ ವಿಚಾರವಾಗಿ ಊರ್ವಶಿ ರೌಟೆಲ ಅವರಿಗೆ ಚೀಮಾರಿ ಹಾಕಿದ್ದಾರೆ. ಸುಮ್ಮನೆ ತಿಳಿಯದಿದ್ದರೂ ಕೂಡ ಬೇಕಾಬಿಟ್ಟಿಯಾಗಿ ಶುಭಾಶಯ ಕೋರಬೇಡಿ ಎಂಬುದಾಗಿ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.