ಪುಷ್ಪ 2 ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಎರಡನೇ ಭಾಗದಲ್ಲಿ ವಿಲ್ಲನ್ ಯಾರು ಗೊತ್ತೇ??ದೊಡ್ಡ ಟ್ವಿಸ್ಟ್ ಕೊಟ್ಟ ಚಿತ್ರ ತಂಡ.

18

ನಮಸ್ಕಾರ ಸ್ನೇಹಿತರೇ ಸುಕುಮಾರ್ ನಿರ್ದೇಶನದಲ್ಲಿ ಹಾಗೂ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕ ಮಂದಣ್ಣ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ಪುಷ್ಪ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಪಂಚ ಭಾಷೆಗಳಲ್ಲಿ ಬರೋಬ್ಬರಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇತ್ತೀಚಿಗಷ್ಟೇ ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರಿಕರಣದ ಮುಹೂರ್ತ ಪೂಜೆ ಮಾಡಲಾಗಿತ್ತು. ಈಗಾಗಲೇ ಪುಷ್ಪ ಚಿತ್ರದ ಎರಡನೇ ಭಾಗದ ಚತ್ರಿಕರಣದಲ್ಲಿ ಹಲವಾರು ಸ್ಕ್ರಿಪ್ಟ್ ಬದಲಾವಣೆಗಳು ಮತ್ತು ಪಾತ್ರದ ಬದಲಾವಣೆಗಳನ್ನು ಕೂಡ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ನೀವು ಈಗಾಗಲೇ ಮೊದಲ ಭಾಗದಲ್ಲಿ ಗಮನಿಸುವುದಾದರೆ ವಿಲನ್ ಪಾತ್ರದಲ್ಲಿ ಧನಂಜಯ್, ಅಜಯ್, ಅನಸೂಯ ಭಾರದ್ವಾಜ್, ಸುನೀಲ್ ಹಾಗೂ ಪಹಾದ್ ಫಾಸೀಲ್ ಸೇರಿದಂತೆ ಇನ್ನು ಕೆಲವು ಪ್ರಮುಖ ಕಲಾವಿದರು ಕಾಣಿಸಿಕೊಂಡಿದ್ದರು. ಇನ್ನು ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಪಾತ್ರಕ್ಕೆ ಸಹಾಯ ಮಾಡುವ ರಾಜಕಾರಣಿ ಪಾತ್ರದಲ್ಲಿ ರಾವ್ ರಮೇಶ್ ರವರು ಕೂಡ ಕಾಣಿಸಿಕೊಂಡಿದ್ದರು. ಪುಷ್ಪ ಚಿತ್ರ ಎರಡನೇ ಭಾಗದಲ್ಲಿ ಡಾಲಿ ಧನಂಜಯ್ ಅವರ ಪಾತ್ರಕ್ಕೆ ಇನ್ನಷ್ಟು ಮಹತ್ವವನ್ನು ನೀಡಲಾಗುತ್ತದೆ ಎಂಬುದಾಗಿ ಕೇಳಿ ತಿಳಿದು ಬಂದಿದೆ.

ಇನ್ನು ಚಿತ್ರತಂಡದ ಒಳ ಮೂಲಗಳಿಂದ ಕೇಳಿ ಬಂದಿರುವ ಸುದ್ದಿಗಳ ಪ್ರಕಾರ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಮತ್ತೊಬ್ಬ ವಿಲ್ಲನ್ ಅನ್ನು ಕೂಡ ಪುಷ್ಪನ ಎದುರಿಗೆ ತಂದು ನಿರ್ದೇಶಕರು ನಿಲ್ಲಿಸಲಿದ್ದಾರೆ ಎಂಬುದಾಗಿ ಕೇಳಿ ಬಂದಿದೆ. ಮಾಹಿತಿಗಳ ಪ್ರಕಾರ ಖ್ಯಾತ ತೆಲುಗು ವಿಲನ್ ಪಾತ್ರಧಾರಿ ಆಗಿರುವ ಆದಿ ಪಿನಿಶೆಟ್ಟ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದು ಸುದ್ದಿ. ಕೆಲವು ಸಮಯಗಳ ಹಿಂದೆ ಕೇಳಿ ಬಂದ ಸುದ್ದಿ ಪ್ರಕಾರ ವಿಜಯ್ ಸೇತುಪತಿ ಕೂಡ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೇಳಿ ಬಂದಿತ್ತು ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುದು ಚಿತ್ರತಂಡವೇ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹೇಳಬೇಕು.