ತಗ್ಗೆದೆಲೇ ಎನ್ನುತ್ತಿರುವ ಸಮಂತಾ, ಕೊನೆಗೂ ಹಠ ಹಿಡಿದು ಸಂಭಾವನೆ ಏರಿಕೆ: ಈ ಬಾರಿ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದ??

29

ನಮಸ್ಕಾರ ಸ್ನೇಹಿತರೇ ವಿವಾಹ ವಿಚ್ಛೇದನ ಆದಾಗಿನಿಂದಲೂ ಕೂಡ ಸಮಂತ ಅವರ ಜನಪ್ರಿಯತೆ ಹಾಗೂ ಚಿತ್ರರಂಗದಲ್ಲಿ ಅವರ ಬೇಡಿಕೆ ಎನ್ನುವುದು ಆಕಾಶವನ್ನು ತಲುಪಿದೆ. ಅದರಲ್ಲೂ ವಿಶೇಷವಾಗಿ ಪುಷ್ಪ ಸಿನಿಮಾದಲ್ಲಿ ಅವರು ಐಟಂ ಡಾನ್ಸ್ ಮಾಡಿದಾಗಿನಿಂದಲೂ ಕೂಡ ಅವರ ಅವಶ್ಯಕತೆ ಬಹುತೇಕ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಮಂತ ತಮ್ಮ ಸಂಭಾವನೆಯನ್ನು ಸಡನ್ನಾಗಿ ದೊಡ್ಡದಾಗಿ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಯಶೋಧ ಹಾಗೂ ಶಾಕುಂತಲ ಸಿನಿಮಾಗಳಲ್ಲಿ ನಟಿಸಿರುವ ಸಮಂತ ಅವರು ಈ ಎರಡು ಸಿನಿಮಗಳಿಗಾಗಿ ಬರೋಬ್ಬರಿ 2.5 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಲಿಸ್ಟಿನಲ್ಲಿ ಈ ಸಂಭಾವನೆಯ ಮೂಲಕ ನಟಿ ಸಮಂತಾ ಕೂಡ ಕಾಣಿಸಿಕೊಳ್ಳುತ್ತಾರೆ. ಐಟಂ ಡ್ಯಾನ್ಸ್ ಗಾಗಿಯೇ ಸಮಂತಾ ಬರೋಬ್ಬರಿ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಅದರಲ್ಲೂ ತಮ್ಮ ಮುಂದಿನ ಸಿನಿಮಾಗಳಿಗಾಗಿ ಸಮಂತ ಅವರು ಇಟ್ಟಿರುವ ಬೇಡಿಕೆಯ ಸಂಭಾವನೆ ಬಗ್ಗೆ ತಿಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಹಿಂದಿಯ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ನಟಿಸಿದ ಮೇಲಂತೂ ಸಮಂತ ಅವರ ಬೇಡಿಕೆಯ ಜನಪ್ರಿಯತೆ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಹೆಚ್ಚಾಗಿದೆ.

ಹೀಗಾಗಿ ತಮ್ಮ ಮುಂದಿನ ಸಿನಿಮಾಗಳಿಗೆ ಸಮಂತ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದು ಯಾರು ಏನೇ ಹೇಳಿದರೂ ಕೊಡು ತಮ್ಮ ಸಂಭಾವನೆಯನ್ನು ಕಡಿಮೆ ಮಾಡುವುದಿಲ್ಲ ಎಂಬುದಾಗಿ ಆಚಲರಾಗಿ ನಿಂತಿದ್ದಾರೆ. ಹೌದು ಗೆಳೆಯರೇ, ಸಮಂತ ತಮ್ಮ ಮುಂದಿನ ಸಿನಿಮಾಗಳಿಗಾಗಿ 3.5 ಕೋಟಿ ರೂಪಾಯಿ ಸಂಭಾವನೆಯನ್ನು ಫಿಕ್ಸ್ ಮಾಡಿದ್ದಾರೆ. ಇದಕ್ಕಿಂತ ಕಡಿಮೆ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಸಮಂತ ಈಗಾಗಲೇ ತಮ್ಮ ಸಿನಿಮಾಗಳಿಗೆ ಸಹಿ ಮಾಡಲು ಬರುತ್ತಿರುವ ನಿರ್ಮಾಪಕರಿಗೆ ತಿಳಿ ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆಯ ಬೇಡಿಕೆಯನ್ನು ಇಟ್ಟಿರುವ ಸಮಂತ ಅವರ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.