ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಉತ್ತಮವಾಗಿ ಆಡಲು ಕಾರಣ ಏನು ಗೊತ್ತೇ? ಪಂದ್ಯಕ್ಕೂ ಮುನ್ನ ಎಬಿಡಿ ರವಾನಿಸಿದ ಸಂದೇಶ ಏನು ಗೊತ್ತೇ??

5,625

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಐದು ವಿಕೆಟ್ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ಕೊನೆಯ ಹಂತದವರೆಗೂ ಕೂಡ ಯಾರು ಗೆಲ್ಲುತ್ತಾರೆ ಎಂಬುದನ್ನು ವಹಿಸಲು ಸಾಧ್ಯವಾಗಿರಲಿಲ್ಲ ಅಂತಹ ರೋಮಾಂಚನ ಭರಿತ ಪಂದ್ಯವಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 147 ರನ್ನುಗಳ ಗುರಿಯನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿತ್ತು. ಇದನ್ನು ಬೆನ್ನತ್ತಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಕೆಎಲ್ ರಾಹುಲ್ ರವರ ಡಕೌಟ್ ಆಘಾತ ಕಾದಿತ್ತು. ಆದರೆ ತಂಡವನ್ನು ಆರಂಭಿಕ ಕ್ರಮಾಂಕದಲ್ಲಿ ಸಂಭಾಳಿಸಿದ್ದು ನಮ್ಮ ವಿರಾಟ್ ಕೊಹ್ಲಿ.

ತಮ್ಮ 100ನೇ ಅಂತರಾಷ್ಟ್ರೀಯ ಟಿ 20 ಪಂದ್ಯದಲ್ಲಿ ಅದು ಕೂಡ ಪಾಕಿಸ್ತಾನದ ವಿರುದ್ಧದ ಪ್ರಮುಖ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಉತ್ತಮವಾಗಿ ಆಡಲು ಕಾರಣ ಏನು ಗೊತ್ತೇ? ಪಂದ್ಯಕ್ಕೂ ಮುನ್ನ ಎಬಿಡಿ ರವಾನಿಸಿದ ಸಂದೇಶ ಏನು ಗೊತ್ತೇ??ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು 34 ಎಸತೆಗಳಲ್ಲಿ ಜವಾಬ್ದಾರಿಯುತ 35 ರನ್ನುಗಳನ್ನು ಬಾರಿಸಿ ತಂಡ ಮುನ್ನಡೆಯಲ್ಲಿ ಇರುವಂತೆ ಮಾಡುತ್ತಾರೆ. ಇನ್ನು ಈ ಪಂದ್ಯ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಕರಿಯರ್ ನ 100ನೇ ಟಿ ಟ್ವೆಂಟಿ ಪಂದ್ಯ ಆಗಿತ್ತು. ಕಳೆದ ಮೂರು ವರ್ಷಗಳಿಂದ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ವಿರಾಟ್ ಕೊಹ್ಲಿ ನಿನ್ನೆ ಲಯಕ್ಕೆ ಮರಳಿ ಬಂದಿದ್ದರು. ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಲಯಕಿ ಮರಳಿ ಬರುತ್ತಾರೆ ಎಂದು ಅಂದಾಜಿಸಿದ್ದ ಮಾಜಿ ಕ್ರಿಕೆಟಿಗರ ಭವಿಷ್ಯವನ್ನು ವಿರಾಟ್ ಕೊಹ್ಲಿ ನಿಜ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಅತ್ಯಂತ ಆಪ್ತ ಸ್ನೇಹಿತ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಎಬಿಡಿ ವಿಲಿಯರ್ಸ್ ರವರು ಪಂದ್ಯದ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಸಂದೇಶವನ್ನು ನೀಡಿದ್ದರು. ನನ್ನ ಅತ್ಯಂತ ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಎಲ್ಲಾ ಮಾದರಿಯ ಕ್ರಿಕೆಟ್ ಫಾರ್ಮ್ಯಾಟ್ಗಳಲ್ಲಿ 100 ಪಂದ್ಯಗಳನ್ನು ಸಂಪೂರ್ಣಗೊಳಿಸಿರುವ ಮೊದಲ ಕ್ರಿಕೆಟಿಗ ಎಂದು ಅನಿಸಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮ 100ನೇ ಅಂತರಾಷ್ಟ್ರೀಯ ಟಿ 20 ಪಂದ್ಯವನ್ನು ನಾವೆಲ್ಲರೂ ವೀಕ್ಷಿಸುತ್ತಿದ್ದೇವೆ ಶುಭವಾಗಲಿ ಎಂಬುದಾಗಿ ಹಾರೈಸಿದ್ದರು. ಖಂಡಿತವಾಗಿ ಇಲ್ಲಿ ಎಬಿಡಿ ವಿಲಿಯರ್ಸ್ ರವರ ಹಾರೈಕೆಯು ಕೂಡ ಫಲಿಸಿದೆ ಎಂಬುದಾಗಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.