ಏಷ್ಯಾ ಕಪ್ ಗಾಗಿ ದುಬೈ ಗೆ ತೆರಳಿರುವ ಭಾರತ ತಂಡ ತಂಗಿರುವ ಹೋಟೆಲ್ ನಲ್ಲಿ ಒಂದು ರಾತ್ರಿಗೆ ಬೆಲೆ ಎಷ್ಟು ಗೊತ್ತೇ?? ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

13

ನಮಸ್ಕಾರ ಸ್ನೇಹಿತರೆ ಈಗಾಗಲೇ ಏಷ್ಯಾ ಕಪ್ ಪ್ರಾರಂಭವಾಗಿದ್ದು ಮೊದಲ ಪಂದ್ಯದಲ್ಲಿ ಶ್ರೀಲಂಕಾ ಆಫ್ಘಾನಿಸ್ತಾನ ತಂಡವನ್ನು ಎದುರಿಸಿದೆ. ಇನ್ನು ಎರಡನೆಯ ಪಂದ್ಯದಲ್ಲಿ ಅಂದರೆ ಆಗಸ್ಟ್ 28ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರುಬದರಾಗಲಿವೆ. ಏಷ್ಯಾಕಪ್ ನಲ್ಲಿ ನಡೆಯಲಿರುವ ಈ ಹಣಾಹಣಿ ಎಲ್ಲರ ದೃಷ್ಟಿಕೋನವನ್ನು ತನ್ನತ್ತ ಸೆಳೆದುಕೊಂಡಿದೆ. ಈಗಾಗಲೇ ಟೂರ್ನಿಯಾ ಮುನ್ನವೇ ಹಲವಾರು ದಿನಗಳ ಕಾಲ ಈ ಅರಬ್ಬರ ನಾಡಿನ ಪಿಚ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಾಕ್ಟೀಸ್ ಅನ್ನು ಮಾಡಿರುವ ಕಾರಣದಿಂದಾಗಿ ಖಂಡಿತವಾಗಿ ಈ ಬಾರಿ ಭಾರತ ತಂಡವೇ ಗೆಲ್ಲಲಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುವಂತೆ ಆಗಿದೆ.

ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ಕಿಂಗ್ ಕೊಹ್ಲಿ ಅವರ ಪ್ರಾಕ್ಟೀಸ್ ಅನ್ನೋದು ನೆಕ್ಸ್ಟ್ ಲೆವೆಲ್ ನಲ್ಲಿ ಕಂಡು ಬರುತ್ತಿದೆ. ಕೇವಲ ಎಷ್ಟೇ ಮಾತ್ರವಲ್ಲದೆ ಮ್ಯಾಚ್ ವಿನ್ನರ್ ಆಟಗಾರರು ಈ ಬಾರಿ ತಂಡದಲ್ಲೇ ಇದ್ದಾರೆ ಹೀಗಾಗಿ ಖಂಡಿತವಾಗಿ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಭಾರತ ತಂಡ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ಭಾರತವನ್ನು ಹೊರತುಪಡಿಸಿ ಈ ಬಾರಿ ಏಷ್ಯಾ ಕಪ್ ನಲ್ಲಿ ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಹಾಂಕಾಂಗ್ ದೇಶಗಳು ಕೂಡ ಭಾಗವಹಿಸುತ್ತಿವೆ. ಇನ್ನು ಇಷ್ಟು ಮಾತ್ರವಲ್ಲದೆ ಈ ಏಷ್ಯಾ ಕಪ್ ಎನ್ನುವುದು ಮತ್ತೊಂದು ವಿಚಾರಕ್ಕಾಗಿಯೂ ಕೂಡ ಸುದ್ದಿ ಆಗುತ್ತಿದೆ. ಹೌದು ಗೆಳೆಯರೇ ಬೇರೆಲ್ಲ ತಂಡಗಳು ಬಿಸಿನೆಸ್ ಬೇ ಹೋಟೆಲ್ ನಲ್ಲಿ ವಾಸ್ತವ್ಯವನ್ನು ಹೂಡಿದೆ.

ಆದರೆ ಟೀಮ್ ಇಂಡಿಯಾ ಮಾತ್ರ ಐಶರಾಮಿ ಪಾಮ್ ಜುಮೇರಾ ರೆಸಾರ್ಟ್ ನಲ್ಲಿ ತಂಗಿದೆ. ಇದರ ಒಳಗಡೆ 3ಡಿ ಹಾಗೂ 4 ಡಿ ಎಕ್ಸ್ ಥಿಯೇಟರ್ ಗಳು, ಒಳಗೆ ಶಾಪಿಂಗ್ ಮಾಡುವುದಕ್ಕೆ ಶಾಪ್ ಗಳು ಸೇರಿದಂತೆ ಎದುರಿಗೆ ಅದರದ್ದೇ ಆದ ಬೀಚ್ ಕೂಡ ಇದೆ. ಇಷ್ಟೆಲ್ಲಾ ಐಷಾರಾಮಿ ಸೌಲಭ್ಯವನ್ನು ಹೊಂದಿರುವ ರೆಸಾರ್ಟ್ ನಲ್ಲಿ ಇರೋದು ಕೇವಲ ಭಾರತ ಕ್ರಿಕೆಟ್ ತಂಡ ಮಾತ್ರ. ಇದರ ಸಾಮಾನ್ಯ ಒಂದು ದಿನದ ರೆಂಟ್ ಬೆಲೆ ರೂ.30,000 ಆಗಿದೆ. ಸೀಸನ್ ಸಂದರ್ಭದಲ್ಲಿ 50 ರಿಂದ 80,000 ಕೂಡ ಇರುತ್ತವೆ. ಬಿಸಿಸಿಐ ಅನ್ನು ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬುದಾಗಿ ಯಾಕೆ ಹೇಳುತ್ತಾರೆ ಎಂದು ಇದರ ಮೂಲಕ ನೀವು ಅರ್ಥೈಸಿಕೊಳ್ಳಬಹುದಾಗಿದೆ.