ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ. ಅವರಿಬ್ಬರ ನಡುವೆ ಇನ್ನು ನಿಂತಿಲ್ಲ ಸಮರ: ಸಂಬಂಧ ಉತ್ತಮವಾಗಿಲ್ಲ.
ನಮಸ್ಕಾರ ಸ್ನೇಹಿತರೆ ಭಾರತ ಕ್ರಿಕೆಟ್ ತಂಡ ಆಗಸ್ಟ್ 28ರಂದು ಅಂದರೆ ಇಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಮೊದಲಿನಿಂದಲೂ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸಾಂಪ್ರದಾಯಿಕ ಎದುರಾಳಿಗಳಾಗಿ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಳೆದ ಬಾರಿ ಪಾಕಿಸ್ತಾನ ತಂಡ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಇದೆ ದೇಶದಲ್ಲಿ ಸೋತ ನಂತರ ಈ ಬಾರಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ಪಂದ್ಯ ಸೇಡಿನ ಪಂದ್ಯ ಎಂಬುದಾಗಿ ಎಲ್ಲಾ ಕಡೆ ಬಿಂಬಿತವಾಗಿದೆ.
ಇದಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಆಗಿರುವ ದಾನಿಶ್ ಕನೇರಿಯಾ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಒಂದು ಆಶ್ಚರ್ಯಕರ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹೌದು ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಇಂದಿಗೂ ಕೂಡ ಎಲ್ಲವೂ ಸರಿ ಇಲ್ಲ ಎಂಬುದಾಗಿ ದಾನಿಶ್ ಕನೇರಿಯಾ ಹೇಳಿದ್ದಾರೆ. ಈ ಹಿಂದೆ ರವಿ ಶಾಸ್ತ್ರಿ ಅವರು ಕೋಚ್ ಆಗಿದ್ದಾಗ ವಿರಾಟ್ ಕೊಹ್ಲಿ ಅವರ ಜೊತೆಗೆ ಅವರ ಸಂಬಂಧ ತುಂಬಾ ಚೆನ್ನಾಗಿತ್ತು ಹಾಗೂ ಅವರು ತಪ್ಪು ಮಾಡಿದಾಗಲೆಲ್ಲ ಅವರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಆದರೆ ರಾಹುಲ್ ದ್ರಾವಿಡ್ ಕೋಚ್ ಆದ ನಂತರ ವಿರಾಟ್ ಕೊಹ್ಲಿ ಅವರಿಗೆ ತಪ್ಪು ಮಾಡಿದ ನಂತರ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿ ದಾನಿಶ್ ಹೇಳಿದ್ದಾರೆ. ವೈಫಲ್ಯದ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರಿಗೆ ರಾಹುಲ್ ದ್ರಾವಿಡ್ ಅವರಿಂದ ಅಷ್ಟೊಂದು ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ದಾನಿಶ್ ಕನೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ಈ ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ, ಅದರಲ್ಲಿ ವಿಶೇಷವಾಗಿ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್ ಅನ್ನು ಕಬಳಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನದ ಬೌಲರ್ಗಳಿಗೆ ವಿರಾಟ್ ಕೊಹ್ಲಿ ಅವರು ಸಿಂಹ ಸ್ವಪ್ನದಂತೆ ಕಾಡಲಿದ್ದಾರೆ ಎಂಬುದಾಗಿ ದಾನಿಶ್ ಕನೇರಿಯಾ ಹೇಳಿಕೆಯನ್ನು ನೀಡಿದ್ದಾರೆ.