ಇಲ್ಲಿಂದ ಹೋಗಿ,ದುಬೈ ನಲ್ಲಿ ಮನೆ ಖರೀದಿ ಮಾಡಿ ಅಂಬಾನಿ ಪುತ್ರ: ಬೆಲೆ ಕೇಳಿದರೆ ತಲೆ ತಿರುಗಿ ಬೀಳ್ತಿರಾ. ಎಷ್ಟು ಮತ್ತು ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ 11ನೇ ಸ್ಥಾನದಲ್ಲಿರುವ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್ ಹೊಡೆತನದ ಮುಖೇಶ್ ಅಂಬಾನಿ ಅವರು ಒಂದಲ್ಲ ಒಂದು ಕಾರಣಕ್ಕಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಆಡಂಬರದ ಜೀವನವನ್ನು ಅವರು ಇಷ್ಟಪಡದಿದ್ದರೂ ಕೂಡ ಅವರು ಖರೀದಿಸುವ ವಸ್ತುಗಳು ಸಾಮಾನ್ಯರು ಖರೀದಿಸುವುದಕ್ಕೆ ಇಡೀ ಜೀವನದಲ್ಲಿ ಕೂಡ ಸಾಧ್ಯವಾಗುವುದಿಲ್ಲ. ಇನ್ನು ನಿಮಗೆಲ್ಲರಿಗೆ ತಿಳಿದಿರುವ ಹಾಗೆ ಮುಕೇಶ್ ಅಂಬಾನಿ ಅವರ 93 ಬಿಲಿಯನ್ಗೂ ಅಧಿಕ ಆಸ್ತಿಯ ವಾರಿಸುದಾರರಾಗಿ ಅವರ ಮಕ್ಕಳಿಗೆ ಈಗಾಗಲೇ ಕ್ರಮೇಣವಾಗಿ ಅಧಿಕಾರವನ್ನು ಹಸ್ತಾಂತರ ಮಾಡಲಾಗುತ್ತಿದೆ.
ಅವರ ಸಾಮ್ರಾಜ್ಯದ ಹಲವಾರು ವ್ಯಾಪಾರ ವ್ಯವಹಾರಗಳ ಮುಂದಿನ ಅಧಿಕಾರವನ್ನು ತಮ್ಮ ಮಕ್ಕಳಿಗೆ ಈಗಾಗಲೇ ನೀಡಿದ್ದು ಜವಾಬ್ದಾರಿಗಳ ಅರಿವನ್ನು ಕೂಡ ಮೂಡಿಸಿದ್ದಾರೆ ಎಂಬುದಾಗಿ ಕೆಲವು ಮೂಲಗಳ ವರದಿಯ ಪ್ರಕಾರ ತಿಳಿದು ಬಂದಿದೆ. ಅದರಲ್ಲೂ ಇಂದು ನಾವು ಅವರ ಪುತ್ರ ಆಗಿರುವ ಅನಂತ ಅಂಬಾನಿ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮುಕೇಶ್ ಅಂಬಾನಿ ಹಾಗೂ ನೀತು ಅಂಬಾನಿ ಅವರ ಪುತ್ರ ಆಗಿರುವ ಅನಂತ್ ಅಂಬಾನಿ ಅವರನ್ನು ನೀವು ಹಲವಾರು ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಪ್ರೋತ್ಸಾಹ ನೀಡಲು ಕ್ರೀಡಾಂಗಣಕ್ಕೆ ಬಂದಿರುವ ದೃಶ್ಯಗಳಲ್ಲಿ ನೋಡಿರಬಹುದು. ಅವರು ಈಗ ದುಬೈನ ಪಾಮ್ ಜುಮೇರಾದಲ್ಲಿ ಖರೀದಿಸಿರುವ ಐಶು ರಾಮಿ ಮನೆಯ ವಿಚಾರವಾಗಿ ಈಗ ದೊಡ್ಡ ಮಟ್ಟದಲ್ಲಿ ಇಂಟರ್ನ್ಯಾಷನಲ್ ಸುದ್ದಿ ಆಗುತ್ತಿದ್ದಾರೆ.

ಹೌದು ಮುಕೇಶ್ ಅಂಬಾನಿ ಅವರು ತಮ್ಮ ಪುತ್ರ ಅನಂತ್ ಅಂಬಾನಿಗಾಗಿ ದುಬೈನ ಈ ಐಷಾರಾಮಿ ಪ್ರದೇಶದಲ್ಲಿ ಅತ್ಯಂತ ದುಬಾರಿ ವಿಲ್ಲಾ ವನ್ನು ಖರೀದಿಸಿ ಕೊಟ್ಟಿದ್ದಾರಂತೆ. 10 ಬೆಡ್ರೂಮ್, ಸ್ಪಾ, ಇಂಡೋರ್ ಹಾಗೂ ಔಟ್ ಡೋರ್ ಪೂಲ್ ಗಳು ಕೂಡ ಇಲ್ಲಿವೆ. ಮನೆಯನ್ನು ಖರೀದಿಸಿದ ನಂತರವೂ ಕೂಡ ನವೀಕರಣಕ್ಕಾಗಿ ಕೂಡ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆಯಂತೆ. ತಮ್ಮ ಪುತ್ರ ಅನಂತ್ ಅಂಬಾನಿ ಗಾಗಿ ಮುಕೇಶ್ ಅಂಬಾನಿ ಅವರು ಈ ದುಬೈನ ಬೀಚ್ ಸೈಡ್ ವಿಲ್ಲಾ ವನ್ನು ಬರೋಬ್ಬರಿ 80 ಮಿಲಿಯನ್ ಡಾಲರ್ ನೀಡಿ ಖರೀದಿಸಿದ್ದಾರೆ. ಇದು ಈಗ ಅಧಿಕೃತವಾಗಿ ಹೊರ ಬರದಿದ್ದರೂ ಕೂಡ ಖರೀದಿದಾರರು ಯಾರು ಎಂಬುದು ಈಗಾಗಲೇ ಎಲ್ಲಾ ಕಡೆ ವೈರಲ್ ಆಗಿದೆ.