ಕೊಹ್ಲಿ ರೋಹಿತ್ ಮರೆತು ಬಿಡಿ, ಪಾಕ್ ತಂಡಕ್ಕೆ ಶತ್ರುವಾಗಿ ಕಾಡುವ ಯುವ ಆಟಗಾರ ಯಾರು ಗೊತ್ತೇ?? ಈತನೇ ಪಂದ್ಯ ಗೆಲ್ಲಿಸುವುದು.

31

ನಮಸ್ಕಾರ ಸ್ನೇಹಿತರೆ ಈಗಾಗಲೇ ಏಷ್ಯಾ ಕಪ್ ಪ್ರಾರಂಭ ಆಗಿದ್ದು ನಾಳೆ ಅಂದರೆ ಆಗಸ್ಟ್ 28ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡ ಸಾಕಷ್ಟು ವಿಚಾರಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಇದೊಂದು ನೆಕ್ಸ್ಟ್ ಲೆವೆಲ್ ಹೈ ವೋಲ್ಟೇಜ್ ಪಂದ್ಯ ಎಂದು ಹೇಳಬಹುದಾಗಿದೆ. ಈ ಮ್ಯಾಚ್ ಅನ್ನು ಸ್ಟೇಡಿಯಂ ನಲ್ಲಿ ನೋಡಲು ಸಹಸ್ರಾರು ಮಂದಿ ಕಾತರರಾಗಿದ್ದಾರೆ. ವೀಕ್ಷಣೆಯ ವಿಚಾರದಲ್ಲಿ ಇದು ಎಲ್ಲಾ ದಾಖಲೆಗಳನ್ನು ಕೂಡ ಮುರಿಯಲಿದೆ ಎಂದು ಲೆಕ್ಕ ಹಾಕಬಹುದಾಗಿದೆ. ಇನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ಗಳಿಗೆ ಪಾಕಿಸ್ತಾನ ತಂಡದ ಬೌಲರ್ಗಳ ಪರೀಕ್ಷೆ ಎದುರಾಗಲಿದೆ.

ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರವರು ಮತ್ತೆ ತಮ್ಮ ಫಾರ್ಮ್ ಗೆ ಮರಳಿ ಬರುವುದು ಪಕ್ಕ ಎಂಬುದಾಗಿ ಮಾಜಿ ಕ್ರಿಕೆಟಿಗ ಸಬಾ ಕರೀಂ ಹೇಳಿದ್ದಾರೆ. ಈಗಾಗಲೇ ಪಾಕಿಸ್ತಾನ ತಂಡದ ವಿರುದ್ಧ ಹಾಡಿರುವ ಅನುಭವವನ್ನು ಹೊಂದಿರುವ ಈ ಮೂರು ಕ್ರಿಕೆಟಿಗರು ಈ ಪ್ರಮುಖ ಪಂದ್ಯಾವಳಿಯ ಸಂದರ್ಭದಲ್ಲಿ ಖಂಡಿತವಾಗಿ ಗಮನಾರ್ಹ ಪ್ರದರ್ಶನವನ್ನು ನೀಡಲಿದ್ದಾರೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರೆಲ್ಲರಿಗಿಂತ ವಿಶೇಷವಾಗಿ ಈ ಒಬ್ಬ ಭಾರತೀಯ ಯುವ ಆಟಗಾರ ಖಂಡಿತವಾಗಿ ಪಾಕಿಸ್ತಾನ ವಿರುದ್ಧ ಪಂದ್ಯಾಟದಲ್ಲಿ ಹಾಗೂ ಏಷ್ಯಾ ಕಪ್ ಟೂರ್ನಮೆಂಟ್ ಮಿಂಚುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂಬುದಾಗಿ ಕರೀಂ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಿ ಬೌಲರ್ ಗಳನ್ನು ಶತ್ರುವಿನಂತೆ ಅಟ್ಟಾಡಿಸುವ ಆಟಗಾರ ಇನ್ಯಾರು ಅಲ್ಲ ಸೂರ್ಯಕುಮಾರ್ ಯಾದವ್ ಎನ್ನುವುದಾಗಿ ಅವರು ಸ್ಕೈ ಮೇಲೆ ತಮ್ಮ ಭರವಸೆಯನ್ನು ತೋರಿಸಿದ್ದಾರೆ. ಇತ್ತೀಚಿನ ವಿದೇಶಿ ಸರಣಿಗಳಲ್ಲಿ ಸೂರ್ಯಕುಮಾರ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೇರಿದಂತೆ ಏಷ್ಯಾ ಕಪ್ ನಲ್ಲಿ ಅವರು ನಿರ್ಭೀತಿಯಿಂದ ಆಡಲಿದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.