ಕನ್ನಡದ ಕೋಟ್ಯಧಿಪತಿ ಮಾಡಲು ಅಪ್ಪು ಇಲ್ಲ, ಅವರಂತೆ ನಿರೂಪಣೆ ಮಾಡುವ ಕನ್ನಡದ ಯಾಕೈಕ ನಟ ಯಾರು ಗೊತ್ತೇ?? ಇವರಿಗಿಂತ ಬೆಸ್ಟ್ ಮತ್ತೊಬ್ಬರು ಇಲ್ಲ.
ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ ಕಿರುತೆರೆಯ ಹಲವಾರು ಸ್ಪೆಷಲ್ ಪ್ರೋಗ್ರಾಮ್ ಗಳಲ್ಲಿ ಅತ್ಯಂತ ಸ್ಪೆಷಲ್ ಎಂದೇನಿಸಿಕೊಂಡಿರುವ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ. ಇಲ್ಲಿ ಹಲವಾರು ಪ್ರತಿಭಾನ್ವಿತರು ಹಾಗೂ ನಿಜವಾಗಲೂ ಸಹಾಯ ಬೇಕಾದವರಿಗೆ ಅವಕಾಶವನ್ನು ನೀಡಲಾಗುತ್ತದೆ. ಒಂದು ಕಾಲದಲ್ಲಿ ಕನ್ನಡ ಕಿರುತೆರೆಯ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಂತಹ ಕಾರ್ಯಕ್ರಮವು ಕೂಡ ಇದಾಗಿತ್ತು. ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಈ ಕಾರ್ಯಕ್ರಮದ ನಿರೂಪಣೆ ಆಹ್ವಾನ ಹೋದಾಗ ಮೊದಮೊದಲಿಗೆ ಅಪ್ಪು ನಿರಾಕರಿಸಿದ್ಧರಂತೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಿರ್ವಹಣೆ ಮಾಡಿದ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ ಅಪ್ಪು ಅವರು ಕೂಡ ಅಷ್ಟೇ ಗೌರವಯುತವಾಗಿ ಹಾಗೂ ಎಲ್ಲರೂ ಮೆಚ್ಚಿಕೊಳ್ಳುವ ರೀತಿಯಲ್ಲಿ ನಡೆಸಿಕೊಟ್ಟಿದ್ದರು.
ಮೊದಲ ಹಾಗೂ ಎರಡನೇ ಸೀಸನ್ ಗಳನ್ನು ಸುವರ್ಣ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರೂಪಕನಾಗಿ ಮಾಡಿಕೊಟ್ಟಿದ್ದರು. ನಂತರ ಮೂರನೇ ಸೀಸನ್ ನಲ್ಲಿ ಈ ಕಾರ್ಯಕ್ರಮವನ್ನು ಅಪ್ಪು ಅವರ ಅನುಪಸ್ಥಿತಿಯಲ್ಲಿ ರಮೇಶ್ ಅರವಿಂದ್ ರವರು ಮಾಡಿಕೊಟ್ಟಿದ್ದರು. ನಂತರ ಅಪ್ಪು ನಾಲ್ಕನೇ ಸೀಸನ್ಗೆ ಮತ್ತೆ ಪೋಸ್ಟ್ ಆಗಿ ಮರಳಿ ಬರುತ್ತಾರೆ. ಆದರೆ ಐದನೇ ಸೀಸನ್ ಪ್ರಾರಂಭ ಆಗುವ ಮುನ್ನವೇ ಪುನೀತ್ ರಾಜಕುಮಾರ್ ರವರು ಬಾರದ ಲೋಕಕ್ಕೆ ತೆರಳಿರುತ್ತಾರೆ. ಹೀಗಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಐದನೇ ಸೀಸನ್ ಅನ್ನು ಅಪ್ಪು ಅವರಷ್ಟೇ ಚೆನ್ನಾಗಿ ಯಾರು ನಡೆಸಿಕೊಡಬಹುದು ಎನ್ನುವ ಚರ್ಚೆಗಳು ನಡೆಯುತ್ತಿದೆ.

ಕಿರುತೆರೆ ಪ್ರೇಕ್ಷಕರು ಹಾಗೂ ಈ ಕಾರ್ಯಕ್ರಮವನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿರುವ ಎಲ್ಲರೂ ಕೂಡ ಹೇಳುತ್ತಿರುವ ಒಂದೇ ಒಂದು ಉತ್ತರ ಎಂದರೆ ಅದು ರಮೇಶ್ ಅರವಿಂದ್ ರವರು. ರಮೇಶ್ ಅರವಿಂದ್ ಅವರು ಈಗಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಹಾಗೂ ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಜ್ಞಾನ ಅವರಲ್ಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಐದನೇ ಆವೃತ್ತಿ ಬಂದರೆ ಅದಕ್ಕೆ ರಮೇಶ್ ಅರವಿಂದ್ ರವರೆ ನಿರೂಪಕನಾಗಿ ಆಯ್ಕೆ ಆಗಬೇಕು ಎಂಬುದಾಗಿ ಎಲ್ಲರೂ ಕೂಡ ತಮ್ಮ ಮನದ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವೊಂದು ಸುದ್ದಿಗಳ ಪ್ರಕಾರ ಅತಿ ಶೀಘ್ರದಲ್ಲಿಯೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಐದನೇ ಸೀಸನ್ ಪ್ರಾರಂಭ ಆಗಲಿದೆ ಎಂಬುದಾಗಿ ಮಾತನಾಡುತ್ತಿದ್ದಾರೆ.