ಇಡೀ ದೇಶದಲ್ಲಿಯೇ ದುಬಾರಿ ಶಾಲೆಯಲ್ಲಿ ಓದುತ್ತಿರುವ ಐಶ್ವರ್ಯ ಮಗಳು: ಒಂದು ತಿಂಗಳ ಶುಲ್ಕ ಎಷ್ಟು ಗೊತ್ತೇ?? ತಿಳಿದರೆ ತಲೆ ತಿರುಗುತ್ತದೆ.
ನಮಸ್ಕಾರ ಸ್ನೇಹಿತರೆ ವಯಸ್ಸು 48 ಆಗಿದ್ದರೂ ಕೂಡ ಇಂದಿಗೂ 25ರ ಹರಿಹರ ಯುವತಿಯಂತೆ ಕಾಣಿಸಿಕೊಳ್ಳುವ ಮಂಗಳೂರು ಮೂಲದ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಚಿಕ್ಕ ವಯಸ್ಸಿನ ಆರಾಧ್ಯ ಎನ್ನುವ ಮಗಳನ್ನು ಕೂಡ ಹೊಂದಿದ್ದಾರೆ. ಬಚ್ಚನ್ ಮನೆತನದ ಸೊಸೆ ಎಂದರೆ ಕೇಳಬೇಕು ಬಾಲಿವುಡ್ ನಲ್ಲಿ ಇವರ ಚರ್ಚೆ ಜೋರಾಗಿಯೇ ಇರುತ್ತದೆ. ತಮ್ಮ ವಯಸ್ಸಿಗಿಂತ ಚಿಕ್ಕವರಾಗಿದ್ದರು ಕೂಡ ಅಮಿತಾಬ್ ಬಚ್ಚನ್ ಅವರ ಮಗನಾಗಿರುವ ಅಭಿಷೇಕ್ ಬಚ್ಚನ್ ಅವರನ್ನು ಐಶ್ವರ್ಯ ರೈ ಮದುವೆಯಾಗುತ್ತಾರೆ.
ಅದೆಲ್ಲ ಈಗ ಹಳೆ ಸುದ್ದಿ, ಸದ್ಯ ಮಗಳ ವಿಚಾರದ ಕುರಿತಂತೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಐಶ್ವರ್ಯ ರೈ ಚಿತ್ರರಂಗದಿಂದ ಕೊಂಚಮಟ್ಟಿಗೆ ವಿರಾಮ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಭುವನ ಸುಂದರಿಯಾಗಿ ಹೆಸರನ್ನು ಸಂಪಾದಿಸಿರುವ ಐಶ್ವರ್ಯ ರೈ ಈಗ ಚಿತ್ರರಂಗಕ್ಕೆ ಬಂದರೂ ಕೂಡ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಅರ್ಹತೆಯನ್ನು ಹೊಂದಿದ್ದಾರೆ. ವಯಸ್ಸು ಎಷ್ಟು ಹೆಚ್ಚಾದರೂ ಕೂಡ ಇಂದಿಗೂ ನಾಯಕಿಯ ಪಟ್ಟವನ್ನು ಅಲಂಕರಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಕೆಲವು ಬೆರಳಿಕೆಯ ನಟಿಯರಲ್ಲಿ ಐಶ್ವರ್ಯ ರೈ ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ.

ಹತ್ತು ವರ್ಷದ ಆರಾಧ್ಯ ಬಚ್ಚನ್ ರವರನ್ನು ತಂದೆ ತಾಯಿ ಇಬ್ಬರು ಕೂಡ ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಸೇರಿದ್ದಾರೆ ಅಲ್ಲಿ, ನೀರಿನಂತೆ ಹಣವನ್ನು ವಿದ್ಯೆಗಾಗಿ ಖರ್ಚು ಮಾಡುತ್ತಿದ್ದಾರೆ. ಹೌದು ಮಿತ್ರರೇ ಆರಾಧ್ಯ ಬಚ್ಚನ್ ಅವರು ವಿದ್ಯಾಭ್ಯಾಸ ಮಾಡುತ್ತಿರುವುದು ಪ್ರತಿಷ್ಠಿತ ದೀರುಬಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ. ಇನ್ನು ಆರಾಧ್ಯ ಬಚ್ಚನ್ ಶಿಕ್ಷಣಕ್ಕಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಇಬ್ಬರು ಖರ್ಚು ಮಾಡುತ್ತಿರುವುದು ಪ್ರತಿ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂಪಾಯಿ. ಇದು ನಿಜಕ್ಕೂ ಕೂಡ ಅತ್ಯಂತ ದುಬಾರಿ ಆಗಿದ್ದು ಈ ಮೊತ್ತ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.