ಏಷ್ಯಾ ಕಪ್ ಗೂ ಮುನ್ನವೇ ಭವಿಷ್ಯ ನುಡಿದ ಶೇನ್ ವಾಟ್ಸನ್- ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಹೇಳಿದ್ದೇನು ಗೊತ್ತೇ??

36

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಏಷ್ಯಾ ಕಪ್ ಟೂರ್ನಮೆಂಟ್ ನ ಎರಡನೇ ಪಂದ್ಯದಲ್ಲೇ ಮುಖಮುಖಿ ಆಗ್ತಿರೋದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಅನಾದಿಕಾಲದಿಂದಲೂ ಇವೆರಡು ತಂಡಗಳ ನಡುವಿನ ಪಂದ್ಯ ಎನ್ನುವುದು ಸಾಕಷ್ಟು ಹೈ ವೋಲ್ಟೇಜ್ ಮೂವ್ಮೆಂಟ್ ಗಳನ್ನು ಕ್ರಿಯೇಟ್ ಮಾಡುತ್ತದೆ. ಅದರಲ್ಲೂ ಈ ಬಾರಿ ಭಾರತೀಯ ಕ್ರಿಕೆಟ್ ತಂಡ ಹೊಸ ನಾಯಕ ಅಂದರೆ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಏಷ್ಯಾ ಕಪ್ ನಲ್ಲಿ ಕಣಕಳಿಯಲಿದೆ.

ಕಳೆದ ಟಿ20 ವಿಶ್ವಕಪ್ ನಲ್ಲಿ ಸೋತಿರುವ ಸೇಡನ್ನು ಇಲ್ಲಿ ತೀರಿಸಿಕೊಳ್ಳಲೇ ಬೇಕೆನ್ನುವ ಹವಣಿಕೆಯಲ್ಲಿದೆ. ಇನ್ನು ಈ ಬಾರಿ ಏಷ್ಯಾ ಕಪ್ ಅನ್ನು ಯಾರು ಗೆಲ್ಲಬಹುದು ಎನ್ನುವ ಕುರಿತಂತೆ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯ ಮೂಲದ ಮಾಜಿ ಕ್ರಿಕೆಟಿಗ ಆಗಿರುವ ಶೇನ್ ವಾಟ್ಸನ್ ರವರು ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬುದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಟೀಮ್ ಇಂಡಿಯಾ ವನ್ನು ಪಾಕಿಸ್ತಾನ ತಂಡ ಸೋಲಲು ಪ್ರಯತ್ನಿಸಬಹುದು ಆದರೆ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಬಲಿಷ್ಠವಾಗಿ ಕಾಣಿಸುತ್ತಿದ್ದು ಗೆಲ್ಲುವ ಫೇವರಿಟ್ ತಂಡವಾಗಿದೆ ಎಂಬುದಾಗಿ ಹೇಳಿದ್ದಾರೆ.

ಅದರಲ್ಲೂ ನೇರ ನೇರವಾಗಿ ಆಗಸ್ಟ್ 28ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರೇ ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಗೆಲ್ಲುವ ತಂಡವಾಗಿರಲಿದ್ದಾರೆ ಎಂಬುದಾಗಿ ಶೇನ್ ವಾಟ್ಸನ್ ಹೇಳಿದ್ದಾರೆ. ಆದರೆ ಇವುಗಳ ನಡುವೆಯೂ ಕೂಡ ಭಾರತೀಯ ಕ್ರಿಕೆಟ್ ತಂಡ ಶೇನ್ ವಾಟ್ಸನ್ ಅವರ ಗೆಲ್ಲುವ ನೆಚ್ಚಿನ ತಂಡ ಎಂಬುದಾಗಿ ಹೇಳಿದ್ದಾರೆ. ಟಿ ಟ್ವೆಂಟಿ ಫಾರ್ಮೆಟ್ ನಲ್ಲಿರುವ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಗೆದ್ದು ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಮುನ್ನವೇ ಉತ್ತಮ ತಯಾರಿಯನ್ನು ನಡೆಸುವ ಸಿದ್ಧತೆಯನ್ನು ಮಾಡಿಕೊಂಡಿದೆ.