ನಾನೇ ಎಲ್ಲಾ ನನ್ನಿಂದಾನೆ ಎಲ್ಲಾ ಎಂದು ಬೀಗುತ್ತಿದ್ದ ವಿಜಯ್ ದೇವಕೊಂಡಾಗೆ ಬಿಗ್ ಶಾಕ್: ಲೈಗೆರ್ ಮೊದಲ ದಿನ ಕಲೆಕ್ಷನ್ ಎಷ್ಟು ಗೊತ್ತೇ??

91

ಯುವ ಉದಯೋನ್ಮುಖ ನಟ ಆಗಿರುವ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ನಿನ್ನೆಯಷ್ಟೇ ವಿಶ್ವದಾದ್ಯಂತ ಸಾವಿರಾರು ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಡುಗಡೆಗು ಮುನ್ನವೇ ಈ ಸಿನಿಮಾದ ವಿರುದ್ಧ ಬಾಯ್ಕಾಟ್ ಟ್ರೆಂಡ್ ಜೋರಾಗಿ ನಡೆಯುತ್ತಿತ್ತು. ಹೀಗಾಗಿ ಬಿಡುಗಡೆಗು ಮುನ್ನವೇ ಲೈಗರ್ ಸಿನಿಮಾದ ಮೇಲೆ ಕೆಟ್ಟ ಇಂಪ್ರೆಶನ್ ಪ್ರೇಕ್ಷಕರಲ್ಲಿ ಹರಡಿತ್ತು ಎಂದರ ತಪ್ಪಾಗಲಾರದು.

ಇನ್ನು ನಿನ್ನೆ ಚಿತ್ರಮಂದಿರಗಳಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ದೇಶ ವಿದೇಶಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗೆ ಒಳಗಾಗಿದೆ. ಬಾಕ್ಸಿಂಗ್ ಹಿನ್ನೆಲೆಯನ್ನು ಹೊಂದಿರುವ ಈ ಸಿನಿಮಾ ಸಾಕಷ್ಟು ಕಳಪೆ ಮಟ್ಟದ ರೇಟಿಂಗ್ ಅನ್ನು ಐ ಎಂ ಡಿ ಬಿ ಸೇರಿದಂತೆ ಹಲವಾರು ಕಡೆಗಳಲ್ಲಿ ಪಡೆದುಕೊಂಡಿದೆ. ಅದರಲ್ಲೂ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಅಂತೂ ನಿಜಕ್ಕೂ ಕೂಡ ಶೋಚನೀಯವಾಗಿದೆ.

ಹೌದು ದೊಡ್ಡ ಮಟ್ಟದಲ್ಲಿ ಬಿಡುಗಡೆಯನ್ನು ಕಂಡಿದ್ದ ಲೈಗರ್ ಸಿನಿಮಾ ಮೊದಲ ದಿನ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಗಳಿಸಿದ್ದು ಕೇವಲ 15 ರಿಂದ 20 ಕೋಟಿ ಮಾತ್ರ. ನಾನೇ ಎಲ್ಲಾ ನನ್ನಿಂದಲೇ ಎಲ್ಲಾ ಎಂದು ಮರೆಯುತ್ತಿದ್ದ ವಿಜಯ ದೇವರು ಕೊಂಡ ಅವರ ಗೆಲುವಿಗೆ ಈ ಚಿತ್ರ ಹಾಗೂ ಜನರು ತಡೆಗೋಡೆಯನ್ನು ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರುಕೊಂಡ ನಡೆದುಕೊಂಡಿರುವ ರೀತಿಗೆ ಸಿನಿಮಾ ಪ್ರೇಕ್ಷಕ ಮಹಾಪ್ರಭುಗಳು ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಇತ್ತೀಚಿಗೆ ಬಾಲಿವುಡ್ ಸಂಸ್ಕೃತಿಗೆ ಒಗ್ಗಿಕೊಂಡಿದ್ದೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.