ಟಾಪ್ ನಟನಾಗಿ ಡ್ಯಾನ್ಸರ್ ಆಗಿ ಮೆರೆಯುತ್ತಿದ್ದ ವಿನೋದ್ ರಾಜ್ ರವರನ್ನು ಮೂಲೆ ಗುಂಪು ಮಾಡಿದ್ದು ಯಾರು ಎಂಬುದನ್ನು ಬಹಿರಂಗವಾಗಿ ತಿಳಿಸಿದ ಲೀಲಾವತಿ ಅಮ್ಮ. ಯಾರು ಅಂತೇ ಗೊತ್ತೇ??

154

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆ ಇದ್ದರೂ ಕೂಡ ಮೂಲೆಗುಂಪಾಗಿರುವ ಹಲವಾರು ಕಲಾವಿದರಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಆಗಿರುವ ಲೀಲಾವತಿ ಅಮ್ಮನವರ ಮಗ ವಿನೋದ್ ರಾಜ್ ಕೂಡ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನೃತ್ಯ ಹಾಗೂ ಪರ್ಫಾರ್ಮೆನ್ಸ್ ಮೂಲಕ ಎಲ್ಲರನ್ನು ಕೂಡ ಮಂತ್ರ ಮುಗ್ಧರನ್ನಾಗಿ ಮಾಡಿದ್ದರು.

ವಿನೋದ್ ರಾಜ್ ಎಂದರೆ ಡ್ಯಾನ್ಸ್ ಡ್ಯಾನ್ಸ್ ಎಂದರೆ ವಿನೋದ್ ರಾಜ್ ಎನ್ನುವಷ್ಟರಮಟ್ಟಿಗೆ ತಮ್ಮ ಡ್ಯಾನ್ಸ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದರು. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟನಾಗಿ ಬೆಳೆಯುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ವಿನೋದ್ ರಾಜ್ ರವರು ಇಷ್ಟೊಂದು ಯಶಸ್ಸಿನ ನಂತರವೂ ಕೂಡ ಹೇಳ ಹೆಸರಿಲ್ಲದಂತೆ ಕನ್ನಡ ಚಿತ್ರ ರಂಗದಿಂದ ಮರೆಯಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂದರೆ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಮಾರಿ ಅಸಹಾಯಕರು ನೆರವಿಗೆ ಬಂದಾಗ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ರವರು ದೊಡ್ಡ ಮಟ್ಟದಲ್ಲಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದರು. ಇದೇ ಸಂದರ್ಭದಲ್ಲಿ ನಡೆದ ಸಂದರ್ಶನ ಒಂದರಲ್ಲಿ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದಿಂದ ಮರೆಯಾಗುವುದಕ್ಕೆ ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾರೆ.

ಗಾಂಧಿನಗರದ ಮಂದಿ ಹಾಗೂ ಕೆಲವು ನಿರ್ಮಾಪಕರ ಗುಂಪು ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಿಂದ ದೂರ ಆಗುವುದಕ್ಕೆ ಕಾರಣ ಎಂಬುದಾಗಿ ಲೀಲಾವತಿ ಅಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಯಾಕೆ ಆತನನ್ನು ಚಿತ್ರರಂಗದಿಂದ ದೂರ ಆಗುವಂತೆ ಮಾಡಿದ್ದೀರಿ, ಅವನು ನನ್ನ ಮಗ ಎಂದು ಕಾರಣಕ್ಕಾಗಿಯೇ ಎಂಬುದಾಗಿ ಪ್ರಶ್ನೆ ಕೂಡ ಹಾಕಿದ್ದಾರೆ. ನಿಜಕ್ಕೂ ಕೂಡ ಅಂದಿನ ದಿನಗಳಲ್ಲಿ ವಿನೋದ್ ರಾಜ್ ಅವರಿಗೆ ಅವಕಾಶವನ್ನು ನೀಡಿದ್ದರೆ ದೊಡ್ಡಮಟ್ಟದ ನಾಯಕ ನಟನಾಗಿ ಬೆಳೆಯುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.