ಏಷ್ಯಾ ಕಪ್ ನಲ್ಲಿ ಕೊಹ್ಲಿ ಬಳಸುವ ಬ್ಯಾಟ್ ಬೆಲೆ ಎಷ್ಟು ಗೊತ್ತೇ?? ಕಿಂಗ್ ಕೊಹ್ಲಿ ಇಷ್ಟು ದುಡ್ಡು ಕೊಡುತ್ತಿರುವುದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ವಿರಾಟ್ ಕೊಹ್ಲಿ ಅವರು ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಪಾದ್ಬಾಂಧವನಾಗಿ ಸೋಲುವ ಪಂದ್ಯಗಳನ್ನು ಕೂಡ ಒಬ್ಬರೇ ಗೆಲ್ಲಿಸಿ ಕೊಡುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದಲೂ ಕೂಡ ಅವರ ಬ್ಯಾಟಿನಿಂದ ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನ ತಂಡದ ಪರವಾಗಿ ಬರುತ್ತಿಲ್ಲ ಎನ್ನುವುದು ನಿಜಕ್ಕೂ ಕೂಡ ಅಭಿಮಾನಿಗಳಿಗೆ ಸೇರಿದಂತೆ ಕ್ರಿಕೆಟ್ ಸಮರ್ಥಕರಿಗೆ ಬೇಸರವನ್ನು ತರಿಸಿದೆ. ಅದರಲ್ಲೂ ವಿಶೇಷವಾಗಿ ಟಿ ಟ್ವೆಂಟಿ ಫಾರ್ಮ್ಯಾಟ್ ನಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಿ ಬರಲೇಬೇಕು ಎನ್ನುವ ಕಾರಣಕ್ಕಾಗಿ ಜಿಂಬಾಬ್ವೆ ಪ್ರವಾಸದಲ್ಲಿ ಆಯ್ಕೆ ಮಾಡದೆ ಅವರಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ ನೇರವಾಗಿ ಏಷ್ಯಾ ಕಪ್ ನಲ್ಲಿ ಆಡುವುದಕ್ಕೆ ಆಯ್ಕೆ ಮಾಡಲಾಗಿದೆ.
ಹೀಗಾಗಿ ಇದೆ ಆಗಸ್ಟ್ 27ರಿಂದ ಪ್ರಾರಂಭ ಆಗಲಿರುವ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ರವರು ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಇದೇ ಆಗಸ್ಟ್ 28ರಂದು ಏಷ್ಯಾ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಟೂರ್ನಮೆಂಟನ್ನು ಆರಂಭಿಸಲಿದೆ. ಇದು ವಿರಾಟ್ ಕೊಹ್ಲಿ ಅವರ ಬದುಕಿನ ಅಂದರೆ ಟಿ ಟ್ವೆಂಟಿ ಇಂಟರ್ನ್ಯಾಷನಲ್ ಫಾರ್ಮ್ಯಾಟ್ ನ 100ನೇ ಪಂದ್ಯ ಆಗಿರುತ್ತದೆ. ಈ ವಿಶೇಷ ಪಂದ್ಯವನ್ನು ವಿರಾಟ್ ಕೊಹ್ಲಿ ಅವರು ಆಡಲು ವಿಶೇಷ ಬ್ಯಾಟ್ ಅನ್ನು ಅವರ ಸ್ಪೊನ್ಸರ್ ಆಗಿರುವ ಎಂ ಆರ್ ಎಫ್ ಸಂಸ್ಥೆ ನೀಡುತ್ತಿದೆ. ಸಾಮಾನ್ಯವಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರು ವಿಶೇಷ ಪ್ರದರ್ಶನವನ್ನು ನೀಡುತ್ತಾರೆ.

ಅದರಲ್ಲೂ ಈ ಬಾರಿ 100ನೇ ಟಿ ಟ್ವೆಂಟಿ ಇಂಟರ್ನ್ಯಾಷನಲ್ ಪಂದ್ಯ ಆಗಿರುವ ಹಿನ್ನೆಲೆಯಲ್ಲಿ ಎಂ ಆರ್ ಎಫ್ ಸಂಸ್ಥೆ ನೀಡುತ್ತಿರುವ ಗೋಲ್ಡನ್ ಎಡಿಷನ್ ಬ್ಯಾಟ್ ನಲ್ಲಿ ವಿರಾಟ್ ಕೊಹ್ಲಿ ರವರು ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಮತ್ತೆ ಲಯಕ್ಕೆ ಮರಳಿ ಬರಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದು ಈ ಬ್ಯಾಟ್ ಬೆಲೆ ಈಗ ಎಲ್ಲರ ಹುಬ್ಬೇರಿಸುತ್ತಿದೆ. ಹೌದು ಮಿತ್ರರೇ ಗೋಲ್ಡನ್ ಎಡಿಷನ್ ಆಗಿರುವ ಈ ವಿಶೇಷ ಬ್ಯಾಟ್ ನ ಬೆಲೆ ಬರೋಬ್ಬರಿ 22,000 ಆಗಿದೆ. ಆಗಸ್ಟ್ 28 ರಂದು ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ಪ್ರದರ್ಶನ ನೀಡಬಹುದೆಂಬುದಾಗಿ ಎಲ್ಲರೂ ಕಾತುರರಾಗಿದ್ದಾರೆ.