ಎನ್ಟಿಆರ್ ರವರನ್ನು ಅಮಿತ್ ಷಾ ಭೇಟಿಯಾದ ತಕ್ಷಣವೇ ಆಂಧ್ರ ರಾಜಕೀಯ ತಲ್ಲಣ: ಎನ್ಟಿಆರ್ ಗೆ ಲಕ್ಷ್ಮಿ ಪಾರ್ವತಿ ಕೊಟ್ಟ ಸಲಹೆ ಏನು ಗೊತ್ತೇ??

34

ನಮಸ್ಕಾರ ಸ್ನೇಹಿತರೆ ರಾಜಕೀಯ ಹಾಗೂ ಸಿನಿಮಾ ರಂಗಗಳು ಮೊದಲಿನಿಂದಲೂ ಕೂಡ ಒಂದೇ ಸಮುದ್ರದಲ್ಲಿ ತೇಲುತ್ತಿರುವ ಎರಡು ಹಡಗುಗಳಂತೆ ಅವಿನಾಭಾವ ಸಂಬಂಧಗಳನ್ನು ಬೆಸೆದುಕೊಂಡು ಬಂದಿವೆ. ಇನ್ನು ಇಂದಿನ ಮಾತನಾಡಲು ಹೊರಟಿರುವುದು ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ಜೂನಿಯರ್ ಎನ್ಟಿಆರ್ ಹಾಗೂ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ಭೇಟಿಯ ಕುರಿತಂತೆ.

ಆರ್ ಆರ್ ಆರ್ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರ ಪರ್ಫಾಮೆನ್ಸ್ ನೋಡಿ ಅಮಿತ್ ಶಾ ಅವರು ಆಂಧ್ರಪ್ರದೇಶಕ್ಕೆ ಬಂದು ಜೂನಿಯರ್ ಎನ್ಟಿಆರ್ ಅವರನ್ನು ಭೇಟಿ ಮಾಡಿ ಈ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಆದರೆ ನಿಜವಾಗಿ ಹೇಳಬೇಕೆಂದರೆ ಕೆಲವರು ಸಿನಿಮಾ ವಿಚಾರವನ್ನು ಹೊರತುಪಡಿಸಿ ಇಲ್ಲಿ ಬೇರೆಯದೆ ಮಾತುಕತೆ ನಡೆದಿದೆ ಎಂಬುದಾಗಿ ಹೇಳುತ್ತಿದ್ದಾರೆ. ಇದನ್ನು ಬಿಜೆಪಿ ಪಕ್ಷದ ಮೂಲಗಳು ಹಾಗೂ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಇರುವಂತಹ ಬೇರೆ ಪಕ್ಷದ ಮೂಲಗಳು ಕೂಡ ಇದನ್ನೇ ಚರ್ಚಿಸುತ್ತಿವೆ. ಅಮಿತ್ ಶಾ ಹಾಗೂ ಜೂನಿಯರ್ ಎನ್ಟಿಆರ್ ರವರ ಭೇಟಿ ರಾಜಕೀಯ ಕಾರಣಕ್ಕಾಗಿ ಕೂಡ ನಡೆದಿದೆ ಎಂಬುದಾಗಿ ಮಾತುಕತೆ ಎಲ್ಲಾ ಕಡೆ ಹರಡುತ್ತಿದೆ.

ಇದರ ಬಗ್ಗೆ ಎನ್ಟಿಆರ್ ಅವರ ಎರಡನೇ ಪತ್ನಿ ಆಗಿರುವ ಲಕ್ಷ್ಮಿ ಪಾರ್ವತಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಲಕ್ಷ್ಮೀ ಪಾರ್ವತಿ ಅವರು ಜೂನಿಯರ್ ಎನ್ಟಿಆರ್ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಹಾಗೂ ಟಿಡಿಪಿ ಪಕ್ಷದ ಅಧಿಕಾರವನ್ನು ಎತ್ತಿ ಕೊಳ್ಳಬೇಕು ಯಾಕೆಂದರೆ ಎನ್ ಟಿ ಆರ್ ಅವರಿಗೆ ಮೋಸ ಮಾಡಿ ಚಂದ್ರ ಬಾಬು ನಾಯ್ಡು ಟಿಡಿಪಿ ಪಕ್ಷದ ಅಧಿಕಾರವನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ ಅವರನ್ನು ಕೆಳಗಿಳಿಸಿ ಟಿಡಿಪಿ ಪಕ್ಷದ ನಾಯಕನ ಹುದ್ದೆಯನ್ನು ಜೂನಿಯರ್ ಎನ್ಟಿಆರ್ ತೆಗೆದುಕೊಳ್ಳಬೇಕು ಎಂಬುದಾಗಿ ಹೇಳಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ಸೆನ್ಸೇಷನಲ್ ಸುದ್ದಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ಹಂತಕ್ಕೆ ತಲುಪಬಹುದು ಎಂಬುದರ ಕಾಯುವಿಕೆ ಪ್ರತಿಯೊಬ್ಬ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ವ್ಯಕ್ತಿಗಳಲ್ಲಿ ಜೋರಾಗಿ ಮನೆ ಮಾಡಿ.