ರವಿಚಂದ್ರನ್ ರವರ ಮಗನ ಮದುವೆಯಲ್ಲಿ ಡಿ ಬಾಸ್ ಗೆ ನಡೆಯಿತೇ ಅನುಮಾನ?? ಫ್ಯಾನ್ಸ್ ರೊಚ್ಚಿಗೆದ್ದಿದ್ದು ಯಾಕೆ ಗೊತ್ತೇ??

15,795

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಹಿರಿಯ ಮಗ ಆಗಿರುವ ಮನೋರಂಜನ್ ರವಿಚಂದ್ರನ್ ಅವರ ಮದುವೆ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಡೆದಿದೆ. ಈ ಮದುವೆಗೆ ಚಿತ್ರರಂಗ ಹಾಗೂ ಹಲವಾರು ಕ್ಷೇತ್ರಗಳ ಗಣ್ಯಾತಿ ಗಣ್ಯರು ಆಗಮಿಸಿ ವಧುವರರಿಗೆ ಆಶೀರ್ವದಿಸಿದ್ದರು. ನಮ್ಮ ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮನೆಯ ಸಮಾರಂಭ ಎಂದರೆ ಖಂಡಿತವಾಗಿ ಗ್ರಾಂಡ್ ಆಗಿರಲೇಬೇಕು.

ಈ ಹಿಂದೆ ತಮ್ಮ ಮಗಳ ಮದುವೆ ಮಾಡಿದ್ದ ಸಂದರ್ಭದಲ್ಲಿ ಕೂಡ ಇಡೀ ಭಾರತೀಯ ಚಿತ್ರರಂಗದ ಲೆಜೆಂಡರಿ ಸೆಲಬ್ರೆಟಿಗಳು ಬರುವ ಹಾಗೆ ಕೂಡ ಮಾಡಿದ್ದರು. ಇನ್ನು ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಹಾಗೂ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟ ಮನೋರಂಜನ್ ರವಿಚಂದ್ರನ್ ರವರ ಮದುವೆಗೂ ಕೂಡ ಏನು ಕಡಿಮೆ ಸೆಲೆಬ್ರಿಟಿಗಳು ಬಂದಿರಲಿಲ್ಲ. ಮನೋರಂಜನ್ ರವಿಚಂದ್ರನ್ ಅವರ ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಆಗಮಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸುಮಲತಾ ಅಂಬರೀಶ್ ಅಭಿಷೇಕ್ ಅಂಬರೀಶ್ ಅವರೊಂದಿಗೆ ಮದುವೆಗೆ ಆಗಮಿಸಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋದಲ್ಲಿ ಕಾಣಿಸಿಕೊಂಡ ದೃಶ್ಯದ ಪ್ರಕಾರ ಅಭಿಮಾನಿಗಳು ಕ್ರೇಜಿಸ್ಟಾರ್ ರವಿಚಂದ್ರನ್ ರವರು ದರ್ಶನ್ ರವರನ್ನು ಕಡೆಗಣಿಸಿದ್ದಾರೆ ಎಂಬುದಾಗಿ ಆಕ್ರೋಷವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ಆದರೆ ಇಲ್ಲಿ ಅಭಿಮಾನಿಗಳು ಅಂದುಕೊಂಡ ಹಾಗೆ ಏನೂ ಕೂಡ ನಡೆದಿಲ್ಲ. ಸ್ಟೇಜ್ ಮೇಲೆ ಬರುವಾಗ ದರ್ಶನ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಕೂಡ ಒಟ್ಟಿಗೆ ಬರುತ್ತಾರೆ. ಕೇವಲ ಎಷ್ಟು ಮಾತ್ರವಲ್ಲದೆ ದರ್ಶನ್ ರವರು ಪ್ರೀತಿಯಿಂದ ರವಿಚಂದ್ರನ್ ರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾರು ಹೊತ್ತಿಸುವ ಗಾಳಿ ಸುದ್ದಿಯ ಕಿಡಿಗೆ ಅಭಿಮಾನಿಗಳು ರೊಚ್ಚಿಗೆಳುವುದು ನಿಜಕ್ಕೂ ಕೂಡ ಕೆಲವೊಮ್ಮೆ ಅನಗತ್ಯ ಎಂದನಿಸುತ್ತದೆ ಇದು ಕೂಡ ಅದೇ ವರ್ಗಕ್ಕೆ ಸೇರಿದೆ.