ಅನಿರುಧ್ ರವರನ್ನು ಹೊರಹಾಕುತ್ತಿರುವ ಧಾರವಾಹಿ ತಂಡಕ್ಕೆ ಬಿಗ್ ಶಾಕ್: ಕಠಿಣ ನಿರ್ಧಾರ ತೆಗೆದುಕೊಂಡ ಮಹಾಪ್ರಭು. ಏನಾಗಿದೆ ಗೊತ್ತೇ??

296

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರನ್ನು ತೆಗೆದಿರುವ ವಿಚಾರ ನಿಮೆಲ್ಲರಿಗೂ ತಿಳಿದೇ ಇದೆ. ನಿರ್ಮಾಪಕ ಆರೂರು ಜಗದೀಶ್ ಹಾಗೂ ಅನಿರುದ್ಧ್ ರವರ ನಡುವಿನ ವೈ ಮನಸ್ಸು ಇದಕ್ಕೆ ಕಾರಣ ಎಂಬುದು ಈಗಾಗಲೇ ವಾಹಿನಿ ಸುದ್ದಿಗಳ ಮೂಲಕ ಜಗಜ್ಜಾಗಿರಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಲೋಕವನ್ನೇ ಅಲುಗಾಡಿಸಿದ ವಿಚಾರ ಎಂಬುವುದರಲ್ಲಿ ಎರಡು ಮಾತಿಲ್ಲ.

ಮನೆಯ ಒಳಗಿನ ಜಗಳವನ್ನು ಈಗ ಧಾರವಾಹಿ ತಂಡ ಜಗತ್ತಿಗೆ ತೋರಿಸಿದಂತಾಗುತ್ತಿದೆ. ಧಾರವಾಹಿಯಿಂದ ಅನಿರುದ್ಧ ರವರನ್ನು ಹೊರಗಿಟ್ಟು ಕಿರುತೆರೆಯಿಂದ ಕೂಡ ಎರಡು ವರ್ಷ ಬ್ಯಾನ್ ಮಾಡಬೇಕು ಎನ್ನುವುದಾಗಿ ನಿರ್ಮಾಪಕ ಆರೂರು ಜಗದೀಶ್ ರವರು ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಅನಿರುದ್ಧ್ ರವರ ಅಭಿಮಾನಿಗಳು ಅದರಲ್ಲಿ ವಿಶೇಷವಾಗಿ ಮಹಿಳಾ ಅಭಿಮಾನಿಗಳು ಧಾರವಾಹಿ ತಂಡದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 20ನೇ ಸಂಚಿಕೆಯಲ್ಲಿ ನಡೆದಿರುವ ಮನಸ್ಥಾಪಗಳನ್ನು 700 ಸಂಚಿಕೆ ಮುಗಿದ ನಂತರ ಹೇಳುತ್ತಿರುವುದು ನಿಜಕ್ಕೂ ಕೂಡ ಅಸಮಂಜಸ ಎಂಬುದಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅನಿರುದ್ಧ ಅವರ ಮಹಿಳಾ ಸಂಘದ ಅಭಿಮಾನಿಗಳು ತಮ್ಮ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ನೀವು ಆರೂರು ಜಗದೀಶ್ ರವರು ಮೊದಲೇ ಸ್ಕ್ರಿಪ್ಟ್ ಕೇಳುತ್ತಿದ್ದರು ಎಂಬುದಾಗಿ ಅನಿರುದ್ಧ್ ಅವರ ಮೇಲೆ ಆರೋಪವನ್ನು ಮಾಡಿದ್ದರು. ಒಬ್ಬ ನಟ ದೃಶ್ಯಕ್ಕೂ ಮುನ್ನ ಸ್ಕ್ರಿಪ್ಟ್ ಕೇಳುವುದರಲ್ಲಿ ತಪ್ಪೇನಿದೆ ಎಂಬುದಾಗಿ ಕೂಡ ಮಹಿಳಾ ಅಭಿಮಾನಿಗಳು ಈ ಆರೋಪ ಕೂಡ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಧಾರವಾಹಿಗೆ ಅನಿರುದ್ಧ ಅವರು ವಾಪಸ್ ಬರಲೇಬೇಕು ಈ ಮೂಲಕ ಅವರಿಗೆ ನ್ಯಾಯ ಸಿಕ್ಕಿದಂತಾಗುತ್ತದೆ ಎಂಬುದಾಗಿ ಕೂಡ ಮಹಿಳಾ ಅಭಿಮಾನಿಗಳು ಹೇಳಿದ್ದಾರೆ. ಧಾರವಾಹಿ ತಂಡದ ವಿರುದ್ಧ ಧ್ವನಿಯೆತ್ತಿದರೆ ಯಾವುದೇ ನಟ ನಟಿಯರಿಗೂ ಕೂಡ ವಾರ್ನಿಂಗ್ ರೀತಿಯಲ್ಲಿ ಈ ಘಟನೆ ನಡೆದಿದೆ ಇದು ನಿಜಕ್ಕೂ ಕೂಡ ಅನ್ಯಾಯ ಎಂಬುದಾಗಿ ಹೇಳಿದ್ದು ನಿರ್ಮಾಪಕರ ವಿರುದ್ಧವಾಗಿ ಆಕ್ರೋಶವನ್ನು ಪ್ರೇಕ್ಷಕ ಮಹಾಪ್ರಭುಗಳು ದೊಡ್ಡದಾಗಿಯೇ ಎತ್ತಿ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಬೆಳವಣಿಗೆ ಹಂತವನ್ನು ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ.