ಮುಂದಿನ 7 ದಿನಗಳಲ್ಲಿ, ಈ 4 ರಾಶಿಚಕ್ರ ಚಿಹ್ನೆಗಳು ದೊಡ್ಡ ಹಣವನ್ನು ಪಡೆಯುತ್ತವೆ, ಶುಕ್ರ ಸಂಕ್ರಮಣ ಅದೃಷ್ಟ ಹೊತ್ತು ತಂದು ಬಡತನ ದೂರವಾಗುತ್ತದೆ
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳು ಸಾಕಷ್ಟು ಶುಭಕರವಾದ ತಿಂಗಳು ಎಂಬುದಾಗಿ ಹೇಳಲಾಗುತ್ತದೆ. ಈ ತಿಂಗಳಲ್ಲಿ ಹಲವಾರು ಪವಿತ್ರ ಹಬ್ಬಗಳು ಕೂಡ ಇವೆ. ಇನ್ನು ಶುಭಕರವಾದ ಗ್ರಹವಾಗಿರುವ ಶುಕ್ರನು ಆಗಸ್ಟ್ 7ರಂದು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸ್ಥಾನ ಪಲ್ಲಟವನ್ನು ಮಾಡಿದ್ದಾನೆ. ಈ ರಾಶಿಯಲ್ಲಿ ಆಗಸ್ಟ್ 31ರವರೆಗೆ ಶುಕ್ರ ಇಲ್ಲೇ ಇರಲಿದ್ದಾನೆ. ಈ ಸಂದರ್ಭದಲ್ಲಿ ಹಲವಾರು ರಾಶಿಯವರಿಗೆ ಶುಭಯೋಗ ಕೂಡ ಮೂಡಿ ಬರಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಗ್ರಹವು ರಾಶಿ ಬದಲಾವಣೆಯನ್ನು ಮಾಡಿದಾಗ ಅದರ ಪ್ರಭಾವ ಎನ್ನುವುದು 12 ರಾಶಿಯವರ ಮೇಲೆ ಕೂಡ ಬೀಳುತ್ತದೆ. ಕೆಲವರ ರಾಶಿಯ ಮೇಲೆ ಶುಭ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ. ಶುಕ್ರನ ರಾಶಿ ಬದಲಾವಣೆಯಿಂದಾಗಿ ನಾಲ್ಕು ರಾಶಿಯವರ ಜೀವನದಲ್ಲಿ ಸುಖ ಹಾಗೂ ಲಾಭದ ಪ್ರವಾಹ ತುಂಬಿ ತುಳುಕಲಿದೆ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ಈ ಸಂದರ್ಭದಲ್ಲಿ ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲಾಗಿದೆ ಹಾಗೂ ಬರಬೇಕಾದ ಸಾಲ ಮತ್ತು ಹಲವಾರು ದಿನಗಳಿಂದ ಅರ್ಧಕ್ಕೆ ಸಿಲುಕಿಕೊಂಡಿರುವ ಹಣ ನಿಮ್ಮ ಕೈಸೇರಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದ್ದು ನಿಮ್ಮ ಬಾಸ್ ನಿಮ್ಮ ಕೆಲಸದಿಂದ ಸಂತುಷ್ಟಗೊಳ್ಳಲಿದ್ದಾರೆ. ಅತಿ ಶೀಘ್ರದಲ್ಲೇ ಪ್ರಮೋಷನ್ ಕೂಡ ಸಿಗಬಹುದು. ವ್ಯಾಪಾರದಲ್ಲಿ ಕೂಡ ಲಾಭ ಸಾಧಿಸುವ ನೀವು ವಿದೇಶ ಪ್ರಯಾಣವನ್ನು ಕೂಡ ಮಾಡುವ ಸಾಧ್ಯತೆ ಇರುತ್ತದೆ. ಶತ್ರುಗಳು ನಿಮ್ಮ ವಿರುದ್ಧ ಏನೇ ಸಂಚುರೂಪಿಸಿದರು ಕೂಡ ಅದು ಕಾರ್ಯರೂಪಕ್ಕೆ ಬರುವುದಿಲ್ಲ.
ಕನ್ಯಾ ರಾಶಿ; ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ಪೂರ್ಣ ಯಶಸ್ವಿಯಾಗಿ ಮುಗಿಯುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶ ದೊರಕುತ್ತದೆ. ಮನೆಯಲ್ಲಿ ಅತಿ ಶೀಘ್ರದಲ್ಲಿ ಶುಭ ಕಾರ್ಯಕ್ರಮವೊಂದು ಜರುಗಲಿದೆ. ಹಳೆಯ ಅನಾರೋಗ್ಯವು ನಿಮ್ಮನ್ನು ಬಿಟ್ಟು ಹೋಗಲಿದ್ದು ಕೆಲಸದಲ್ಲಿ ಹೊಸ ಆಫರ್ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವ್ಯಾಪಾರದಲ್ಲಿ ದೊಡ್ಡ ಡೀಲ್ ಫೈನಲ್ ಆಗಲಿದೆ. ಒಟ್ಟಾರೆಯಾಗಿ ಈ ಸಂದರ್ಭ ಎನ್ನುವುದು ಸಂಪೂರ್ಣವಾಗಿ ನಿಮ್ಮ ಪರವಾಗಿ ಎಲ್ಲಾ ಯಶಸ್ವಿ ಆಗು ಹೋಗುಗಳು ನಡೆಯಲಿವೆ.

ತುಲಾ ರಾಶಿ; ಜೀವನದಲ್ಲಿರುವ ಎಲ್ಲಾ ದುಃಖಗಳು ನಿಮ್ಮನ್ನು ಬಿಟ್ಟು ಹೋಗಿ ನಿಮ್ಮ ಜೀವನದಲ್ಲಿ ಸಂತೋಷದ ಮೋಡ ಎದ್ದು ಕಾಣಲಿದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಂಭಾವ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಕೂಡ ಸಿಹಿ ಎದ್ದು ಕಾಣಲಿದೆ. ಖರ್ಚು ಎಲ್ಲಾ ಕಡಿಮೆಯಾಗಿ ನಿಮ್ಮ ಆದಾಯವು ಕೂಡ ಹೆಚ್ಚಳ ಆಗಲಿದೆ. ಹಳೆಯ ಗೆಳೆಯರ ಭೇಟಿ ಆಗಲಿದ್ದು ಇದು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದ್ದು ಪ್ರೀತಿಯಲ್ಲಿ ಕೂಡ ಸಫಲತೆಯನ್ನು ಕಾಣಲಿದ್ದೀರಿ.
ವೃಶ್ಚಿಕ ರಾಶಿ; ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಿದ್ದು ನಿಮ್ಮ ಕೆಲಸದ ಶೈಲಿಗೆ ಎಲ್ಲರೂ ನಿಮ್ಮ ಫ್ಯಾನ್ ಆಗಲಿದ್ದಾರೆ. ನಿಮ್ಮ ಆತ್ಮವಿಶ್ವಾಸದಲ್ಲಿ ಕಂಡುಬರುವ ದೃಢತೆಯ ಕಾರಣದಿಂದ ನೀವು ಮಾಡುವ ಕೆಲಸಗಳು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ಸಾಕಷ್ಟು ದಿನಗಳಿಂದ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಹಣವನ್ನು ಹೂಡಿಕೆ ಮಾಡಲು ಇದೊಂದು ಒಳ್ಳೆಯ ಸಮಯವಾಗಲಿ ಸಿಗುವ ಲಾಭ ಕೂಡ ದ್ವಿಗುಣ ವಾಗಲಿದೆ. ಯಾವುದೇ ಅನಾರೋಗ್ಯಗಳು ನಿಮ್ಮ ಹತ್ತಿರವೂ ಕೂಡ ಸುಳಿಯುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ದೂರ ದೂರದ ಪ್ರದೇಶಗಳಿಗೆ ಪ್ರವಾಸವನ್ನು ಕೂಡ ಯೋಚಿಸಬಹುದಾಗಿದೆ. ಈ ನಾಲ್ಕು ರಾಶಿಯವರು ಈ ಸಂದರ್ಭದಲ್ಲಿ ಲಾಭವನ್ನು ಪಡೆಯಲಿದ್ದಾರೆ. ಇವರಲ್ಲಿ ನಿಮ್ಮ ರಾಶಿ ಕೂಡ ಇದರ ತಪ್ಪದೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.