ಎಷ್ಟೇ ಪ್ರಾಕ್ಟೀಸ್ ಮಾಡಿದರೂ, ಏನೆಲ್ಲಾ ಬುದ್ದಿ ಹೇಳಿದರೂ ವಿಫಲವಾಗುತ್ತಿರುವ ಕೊಹ್ಲಿ ಬಗ್ಗೆ ಎಬಿಡಿ ಕೊಟ್ರು ಷಾಕಿಂಗ್ ಹೇಳಿಕೆ. ಏನು ಗೊತ್ತೇ?
ನಮಸ್ಕಾರ ಸ್ನೇಹಿತರೇ ಈಗಾಗಲೇ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ರನ್ ಮಷೀನ್ ಎಂದು ಖ್ಯಾತರಾಗಿರುವ ವಿರಾಟ್ ಕೊಹ್ಲಿ ರವರು 2019 ರಿಂದ ಯಾವುದೇ ಶತಕವನ್ನು ಬಾರಿಸಿಲ್ಲ. ಎಲ್ಲದಕ್ಕಿಂತ ಪ್ರಮುಖವಾಗಿ ಇಂಗ್ಲೆಂಡ್ ಸರಣಿಯ ನಂತರ ವಿಶ್ರಾಂತಿಯನ್ನು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ರವರು ಇದರ ನಡುವೆ ನಡೆದಿರುವಂತಹ ಯಾವುದೇ ಸರಣಿಗಳಲ್ಲಿ ಕೂಡ ಆಡಿಲ್ಲ.
ಕಳಪೆ ಫಾರ್ಮ್ ನಡುವೆ ಕೂಡ ಏಷ್ಯಾ ಕಪ್ ಗೆ ಆಯ್ಕೆ ಆಗಿರುವ ವಿರಾಟ್ ಕೊಹ್ಲಿ ರವರ ಆಯ್ಕೆಯ ವಿರುದ್ಧ ಹಲವಾರು ಪ್ರಶ್ನೆಗಳು ಕೂಡ ಎದ್ದಿವೆ. ವಿರಾಟ್ ಕೊಹ್ಲಿ ಅವರ ಕುರಿತಂತೆ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಕ್ರಿಕೆಟಿಗ ಆಗಿರುವ ಸೌತ್ ಆಫ್ರಿಕಾ ಮೂಲದ ಎಬಿ ಡಿವಿಲಿಯರ್ಸ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಕುರಿತಂತೆ ಮಾತನಾಡುತ್ತಾ ಎಬಿಡಿ ವಿಲಿಯರ್ಸ್ ರವರು ಕೆಲವೊಂದು ಮಾತುಗಳನ್ನು ಆಡಿದ್ದಾರೆ.

ವಿರಾಟ್ ಕೊಹ್ಲಿ ಅವರು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ತಮ್ಮ ಗೆಳೆಯ ಅವರ ಬಗ್ಗೆ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಫಾರ್ಮ್ ಟೆಂಪ್ರವರಿ ಕ್ಲಾಸ್ ಪರ್ಮನೆಂಟ್ ಎನ್ನುವುದಾಗಿ ಹೊಗಳಿದ್ದಾರೆ. ಈಗ ಅವರು ಕೊಂಚಮಟ್ಟಿಗೆ ತಮ್ಮ ರನ್ ಗತಿಯ ವೇಗದಲ್ಲಿ ತಗ್ಗಿದ್ದಾರೆ ನಿಜ ಆದರೆ ಏಷ್ಯಾಕಪ್ ನಲ್ಲಿ ಅವರು ಮತ್ತೆ ಮರಳಿ ಫಾರ್ಮ್ ಗೆ ಬರುತ್ತಾರೆ ಎಂಬುದಾಗಿ ಎಬಿಡಿ ವಿಲಿಯರ್ಸ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಎಬಿಡಿ ವಿಲಿಯರ್ಸ್ ರವರು ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಈ ಸಂದರ್ಶನವನ್ನು ನೋಡಿದ ನಂತರ ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟರ್ ನ ಮೇಲೆ ಮತ್ತಷ್ಟು ಭರವಸೆಯನ್ನು ಹೊಂದಲು ಪ್ರಾರಂಭಿಸಿದ್ದಾರೆ.