ನಿಮ್ಮ ಮೊಬೈಲ್ ನಲ್ಲಿ ನೆಟ್ವರ್ಕ್ ಸಿಗುತ್ತಿಲ್ಲವೇ?? ಹಾಗಿದ್ದರೆ ಜಸ್ಟ್ ಹೀಗೆ ಮಾಡಿ ಸಾಕು, ನೀವೇ ಸಾಕು ಸಾಕು ಎನ್ನುವಷ್ಟು ಸ್ಪೀಡ್ ಸಿಗುತ್ತದೆ.
ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ನೀವು ಜನಪ್ರಿಯ ಟೆಲಿಕಾಂ ಸಂಸ್ಥೆಗಳ ಜಾಹೀರಾತು ಹಾಗೂ ಹೊಸ ಹೊಸ ಯೋಜನೆಗಳನ್ನು ನೋಡಿ ಅವುಗಳ ಸಿಮ್ ಅನ್ನು ಖರೀದಿಸುತ್ತೀರಿ. ಈ ಸಂದರ್ಭದಲ್ಲಿ ಒಂದು ವೇಳೆ ನೀವು ಸ್ಲೋ ಇಂಟರ್ನೆಟ್ ಸೇವೆಯನ್ನು ಪಡೆದಾಗ ಟೆಲಿಕಾಂ ಸಂಸ್ಥೆಗಳ ಮೇಲೆ ದೂರನ್ನು ದಾಖಲಿಸಿ ಆಕ್ರೋಶ ವ್ಯಕ್ತಪಡಿಸುತ್ತೀರಿ. ಆದರೆ ನಿಜವಾಗಿ ಹೇಳಬೇಕೆಂದರೆ ಕೆಲವೊಮ್ಮೆ ನಾವು ಸಿಮ್ ಅನ್ನು ಬಳಸುವ ಕ್ರಮವೇ ಬೇರೆ ಆಗಿರುತ್ತದೆ ಅದರಿಂದ ಕಡಿಮೆ ವೇಗದ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳುತ್ತೇವೆ.
ಹೀಗಾಗಿ ಯಾವ ರೀತಿಯಲ್ಲಿ ಸಿಮ್ ಅನ್ನು ಬಳಸಿದರೆ ಸರಿಯಾದ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯಬಹುದು ಎಂಬುದನ್ನು ಇಂದಿನ ಲೇಖನಿಯಲ್ಲಿ ತಪ್ಪದೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಇಂಟರ್ನೆಟ್ ಸ್ಪೀಡ್ ಕಮ್ಮಿ ಆದಾಗ ಮೊದಲನೇ ಸಿಮ್ ಜಾಗದಲ್ಲಿ ಎರಡನೇ ಸಿಮ್ ಅನ್ನು ಹಾಗೂ ಎರಡನೇ ಸಿಮ್ ಜಾಗದಲ್ಲಿ ಮೊದಲನೇ ಸಿಮ್ ಅನ್ನು ಬದಲಾಯಿಸಬೇಕು. ಆ ಸಂದರ್ಭದಲ್ಲಿ ಕೂಡ ಕೆಲವೊಮ್ಮೆ ಇಂಟರ್ನೆಟ್ ಸ್ಪೀಡ್ ವೇಗ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಕೆಲವೊಮ್ಮೆ ಮತ್ತೊಂದು ವಿಧಾನವು ಕೂಡ ನಿಮ್ಮ ಮೊಬೈಲ್ ಫೋನ್ ನಲ್ಲಿ ಇಂಟರ್ನೆಟ್ ಸೇವೆಯ ವೇಗ ಹೆಚ್ಚಾಗುವಂತೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಅದು ಯಾವುದೆಂಬುದನ್ನು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಮೊಬೈಲ್ ಫೋನ್ ಗಳು ಇತ್ತೀಚಿನ ದಿನಗಳಲ್ಲಿ ಎರಡು ಸಿಮ್ ಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಕೆಲವರು ಕರೆಗಾಗಿ ಬಳಸುವ ಸಿಮ್ ಅನ್ನು ಮೊದಲನೆಯ ಸಿಮ್ ಇನ್ಸರ್ಟ್ ವಿಭಾಗದಲ್ಲಿ ಹಾಗೂ ಇಂಟರ್ನೆಟ್ ಗಾಗಿ ಬಳಸುವ ಸಿಮ್ ಅನ್ನು ಎರಡನೆಯ ಸಿಮ್ ಇನ್ಸರ್ಟ್ ವಿಭಾಗದಲ್ಲಿ ಹಾಕುತ್ತಾರೆ. ಇದು ಟೆಕ್ನಿಕಲಿ ಶುದ್ಧ ತಪ್ಪು ಎಂಬುದಾಗಿ ಹೇಳಬಹುದಾಗಿದೆ. ಮೊದಲನೆಯ ಸಿಮ್ ಇನ್ಸರ್ಟ್ ವಿಭಾಗದಲ್ಲಿ ಇಂಟರ್ನೆಟ್ ಗಾಗಿ ಬಳಸುವ ಸಿಮ್ ಅನ್ನು ಹಾಕಿದರೆ ಅಲ್ಲಿ ನೆಟ್ವರ್ಕ್ ಇನ್ನಷ್ಟು ಚೆನ್ನಾಗಿ ಬರುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದಾಗಿ ಅದು ಸೂಕ್ತ ಸ್ಥಳವಾಗಿದೆ. ಇನ್ನೊಂದು ವಿಧಾನ ಏನೆಂದರೆ ನಿಮ್ಮ ಮೊಬೈಲ್ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ನೆಟ್ವರ್ಕ್ ವಿಭಾಗದಲ್ಲಿ ಎಪಿಎನ್ ಅನ್ನು ರಿಸೆಟ್ ಮಾಡಿ ಆಟೋಮೆಟಿಕ್ ನೆಟ್ವರ್ಕ್ ಫೈಂಡ್ ಮಾಡಿದರೆ ನಿಮ್ಮ ನೆಟ್ವರ್ಕ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತದೆ. ನೀವು ಕೂಡ ಇಂತಹ ಸಮಸ್ಯೆಗಳಿಗೆ ಸಿಲುಕಿದಾಗ ಈ ಪರಿಹಾರ ಕ್ರಮಗಳನ್ನು ಅನುಸರಿಸಬಹುದಾಗಿದೆ.