ಸ್ಥಾನ ಪಲ್ಲಟ ಮಾಡುತ್ತಿರುವ ಬುಧ ದೇವ: ಇದರಿಂದ ಈ ರಾಶಿಗಳ ಕಷ್ಟಗಳೆಲ್ಲವೂ ಮುಗಿದು, ಶುಭ ದಿನಗಳು ಆರಂಭವಾಗುವುದು ಖಚಿತ. ಯಾರ್ಯಾರಿಗೆ ಗೊತ್ತೇ??

75

ನಮಸ್ಕಾರ ಸ್ನೇಹಿತರೇ ಆಗಸ್ಟ್ ತಿಂಗಳಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ಬುಧ ಗ್ರಹ ಇದೇ ಭಾನುವಾರದಂದು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಕಾಲಿಡಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಯವರ ಮೇಲೆ ಕೂಡ ಪರಿಣಾಮ ಬೀರಲಿದೆ.

ಆದರೆ ಇದು ಕನ್ಯಾ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದು ಅವರಿಗೆ ಹೆಚ್ಚಿನ ಲಾಭಾಂಶ ದೊರಕಲಿದೆ. ಆಗಸ್ಟ್ ತಿಂಗಳಿನಲ್ಲಿ ಬುಧ ಎರಡು ಬಾರಿ ರಾಶಿ ಪರಿವರ್ತನೆಯನ್ನು ಮಾಡುತ್ತಾನೆ ಅದರಲ್ಲಿ ಮೊದಲ ಬಾರಿಗೆ ಈಗಾಗಲೇ ಆಗಸ್ಟ್ 1ರಂದು ಬುಧ ಗ್ರಹ ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಗೆ ಕಾಲಿಟ್ಟಿದ್ದಾನೆ. ಇದಾದ ನಂತರ ಈಗ ಅಂದರೆ ಆಗಸ್ಟ್ 21ರ ಭಾನುವಾರದಂದು ಬುಧ ತನ್ನ ಸ್ವರಾಶಿ ಆಗಿರುವ ಕನ್ಯಾ ರಾಶಿಗೆ ಕಾಲಿಟ್ಟಿದ್ದಾನೆ ಎಂದು ಹೇಳಬಹುದಾಗಿದೆ. ಕನ್ಯಾ ರಾಶಿಯಲ್ಲಿ ಬುಧ ಉಚ್ಛ ಸ್ಥಾನದಲ್ಲಿರುತ್ತಾನೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಕೂಡ ಉನ್ನತಿಯನ್ನು ಕಾಣಬಹುದಾಗಿದೆ. ಶಿಕ್ಷಣ ಹಾಗೂ ಕೆಲಸದಲ್ಲಿ ಕೂಡ ಯಾವುದೇ ತೊಡಕುಗಳು ಕಾಣಿಸಿಕೊಳ್ಳುವುದಿಲ್ಲ.

ಕನ್ಯಾ ರಾಶಿಯಲ್ಲಿ ಆ ರಾಶಿಯ ಅಧಿಪತಿ ಆಗಿರುವ ಬುಧನ ಗೋಚರದಿಂದಾಗಿ ಕನ್ಯಾ ರಾಶಿ ಅವರಿಗೆ ಸಾಕಷ್ಟು ಕೆಲಸಗಳಲ್ಲಿ ಗೆಲುವು ಕಾಣಿಸಿಕೊಳ್ಳಲಿದ್ದು ಒಳ್ಳೆಯ ದಿನಗಳು ಪ್ರಾರಂಭ ಕಾಣಲಿವೆ. ಈ ಸಂದರ್ಭದಲ್ಲಿ ಕೆಲಸ ಮಾಡಲು ಆತ್ಮವಿಶ್ವಾಸ ಹೆಚ್ಚಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಲಿದೆ. ಈಗಾಗಲೇ ಕೆಲಸದಲ್ಲಿರುವವರಿಗೆ ಪ್ರಮೋಷನ್ ಹಾಗೂ ಸಂಬಳ ಹೆಚ್ಚಾಗಲಿದ್ದು ಕೆಲಸ ಹುಡುಕುತ್ತಿರುವವರಿಗೆ ಅವರ ಮನಸ್ಸಿಗೆ ಇಷ್ಟ ಆಗುವಂಥ ಕೆಲಸ ಸಿಗಲಿದೆ. ಈ ಸಂದರ್ಭದಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿರುವವರಿಗೆ ಗ್ರೀನ್ ಸಿಗ್ನಲ್ ಸಿಗಲಿದ್ದು ದಾಂಪತ್ಯ ಜೀವನದಲ್ಲಿ ಕೂಡ ಖುಷಿಯನ್ನು ಕಾಣಲಿದ್ದೀರಿ.