ಕಿಚ್ಚ ಸುದೀಪ್ ಹಾಗೂ ಉಪ್ಪಿ ಇರೋ ಕಬ್ಜಾ ಮೂವಿನಲ್ಲಿ, ಮತ್ತೊಬ್ಬ ಕನ್ನಡದ ಸೂಪರ್ ಸ್ಟಾರ್ ಎಂಟ್ರಿ! ಯಾರದು ಗೊತ್ತಾ??

56

ನಮಸ್ಕಾರ ಸ್ನೇಹಿತರೇ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿ ಹಲವಾರು ಸಮಯಗಳೇ ಕಳೆದಿದ್ದರೂ ಕೂಡ ಇದುವರೆಗೂ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡುತ್ತಿರುವುದು ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜಾ ಸಿನಿಮಾದ ಕುರಿತಂತೆ. ಕಬ್ಜಾ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರವರು ನಾಯಕನಾಗಿ ಕಾಣಿಸಿಕೊಂಡರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಭಾರ್ಗವ್ ಬಕ್ಷಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರೂ ಒಂದೇ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ಕುರಿತಂತೆ ಸಾಕಷ್ಟು ಕುತೂಹಲಗಳು ನಿರ್ಮಾಣವಾಗುವಂತೆ ಮಾಡಿದೆ. ಸ್ವಾತಂತ್ರ್ಯ ಕಾಲದ ಸಂದರ್ಭದಲ್ಲಿ ಕಥೆಯ ಹಿನ್ನೆಲೆಯನ್ನು ಒಳಗೊಂಡಿರುವ ಈ ಸಿನಿಮಾ ಸಾಕಷ್ಟು ಭರ್ಜರಿಯಾಗಿ ನಿರ್ಮಾಣ ಆಗುತ್ತಿದೆ ಎಂಬ ಸುದ್ದಿ ಇದೆ. ಸಿನಿಮಾದ ಫಸ್ಟ್ ಲುಕ್ ಟೀಸರ್ ಸೇರಿದಂತೆ ಹಲವಾರು ಚಿತ್ರದ ಕುರಿತಂತಹ ವಿಚಾರಗಳು ಈಗಾಗಲೇ ಹೊರಬಂದಿದ್ದು ಅದನ್ನು ನೋಡಿ ಸಿನಿಮಾ ಖಂಡಿತವಾಗಿ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂಬುದಾಗಿ ಹೇಳಬಹುದಾಗಿದೆ.

ಆದರೂ ಕೂಡ ನಿರ್ದೇಶಕ ಆರ್ ಚಂದ್ರು ಸೇರಿದಂತೆ ಚಿತ್ರತಂಡ ಯಾವುದೇ ರೀತಿಯಲ್ಲಿ ಚಿತ್ರದ ಕುರಿತಂತೆ ಅಧಿಕೃತ ಮಾಹಿತಿಗಳನ್ನು ಹೊರ ಹಾಕುತ್ತಿಲ್ಲ. ಅದರ ನಡುವಲ್ಲಿಯೇ ಚಿತ್ರತಂಡಕ್ಕೆ ಮತ್ತೊಬ್ಬ ಕನ್ನಡ ಸೂಪರ್ ಸ್ಟಾರ್ ಎಂಟ್ರಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಗೆಳೆಯರೇ ಕಬ್ಜಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ಜೊತೆಗೆ ಅತಿಥಿಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಈಗ ಬಲವಾಗಿ ಸದ್ದು ಮಾಡುತ್ತಿದೆ. ಓಂ ಚಿತ್ರದ ನಂತರ ಉಪೇಂದ್ರ ಅವರ ಜೊತೆಗೆ ಹಾಗೂ ದಿ ವಿಲನ್ ಸಿನಿಮಾದ ನಂತರ ಸುದೀಪ್ ರವರ ಜೊತೆಗೆ ಮತ್ತೊಮ್ಮೆ ಶಿವಣ್ಣ ಕೆಲಸ ಮಾಡಿದ ಹಾಗಾಗುತ್ತದೆ. ಇದು ಕೇವಲ ಸುದ್ದಿಯಾಗಿದ್ದು ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ ನಂತರವೇ ನಾವು ತಿಳಿದುಕೊಳ್ಳಬೇಕಾಗಿದೆ.