ನಿಮ್ಮ ಕನಸಿನಲ್ಲಿ ಈ ಪಕ್ಷಿಗಳು ಕಂಡು ಬಂದರೆ ಸಾಕು, ಅದೃಷ್ಟ ಕುಲಾಯಿಸಿ ನಿಮ್ಮ ಹಣೆಬರಹವೇ ಬದಲಾಗಲಿದೆ ಎಂದು ಅರ್ಥ

24

ನಮಸ್ಕಾರ ಸ್ನೇಹಿತರೇ, ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವೊಂದು ಪಕ್ಷಿಗಳನ್ನು ನೀವು ಕನಸಿನಲ್ಲಿ ಕಂಡರೆ ಖಂಡಿತವಾಗಿ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ನಿಮ್ಮ ಜೀವನ ಕೇವಲ ಸುಖಮಯವಾಗಿರುತ್ತದೆ ಎಂಬುದಾಗಿ ನಂಬಲಾಗುತ್ತದೆ. ಹಾಗಿದ್ದರೆ ಕನಸಿನಲ್ಲಿ ಯಾವೆಲ್ಲ ಪಕ್ಷಿಗಳನ್ನು ಕಂಡರೆ ಅದೃಷ್ಟ ನಮ್ಮ ಕೈ ಹಿಡಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೀಲಕಂಠ ಪಕ್ಷಿ; ವಿಶೇಷವಾಗಿ ಬ್ರಹ್ಮಚಾರಿಗಳು ಕನಸಿನಲ್ಲಿ ನೀಲಕಂಠ ಪಕ್ಷಿಯನ್ನು ಕಂಡರೆ ಅತಿ ಶೀಘ್ರದಲ್ಲಿ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಎಂಬ ಮುನ್ಸೂಚನೆಯಾಗಿದೆ.

ಬೇರೆಯವರು ಕೂಡ ಇಂತಹ ಪಕ್ಷಿಯನ್ನು ಕನಸಿನಲ್ಲಿ ಕಂಡರೆ ಶುಭಸೂಚಕವಾಗಿದೆ. ಹಂಸ; ಕನಸಿನಲ್ಲಿ ಹಂಸವನ್ನು ಅದರಲ್ಲಿಯೂ ಜೋಡಿಹಂಸಗಳನ್ನು ಕಾಣುವುದು ಆರ್ಥಿಕ ಪರಿಸ್ಥಿತಿ ಉತ್ತಮ ಆಗುವುದು ಹಾಗೂ ಜೀವನದಲ್ಲಿ ಸಂತೋಷ ತುಂಬಿ ಬರುವುದು ಎಂಬ ಮುನ್ಸೂಚನೆಯಾಗಿದೆ. ಒಂದುವೇಳೆ ಕನಸಿನಲ್ಲಿ ಕಪ್ಪುಹಂಸ ಕಾಣುವುದು ಅಥವಾ ಹಂಸ ಮರಣ ಹೊಂದಿದಂತೆ ಕಂಡರೆ ಅದು ಅಶುಭವಾಗಿದೆ. ಗಿಳಿ; ಉಲ್ಲೇಖಗಳ ಪ್ರಕಾರ ಕನಸಿನಲ್ಲಿ ಜೋಡಿ ಗಿಳಿಯನ್ನು ಕಾಣುವುದು ಸಾಂಸಾರಿಕ ಜೀವನದಲ್ಲಿ ಸುಖದ ಆಗಮನ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಗಿಳಿಯನ್ನು ಕಂಡರೆ ಮನೆಗೆ ಹೊಸ ಅತಿಥಿ ಆಗಮನವಾಗಲಿದೆ ಹಾಗೂ ಅವರಿಂದ ಅದೃಷ್ಟವೂ ಕೂಡ ನಿಮ್ಮ ಜೀವನಕ್ಕೆ ಆಗಮಿಸಲಿದೆ ಎಂಬ ಸಂಕೇತವಾಗಿದೆ.

ಗುಬ್ಬಚ್ಚಿ; ಕನಸಿನಲ್ಲಿ ಗುಬ್ಬಚ್ಚಿ ಹಕ್ಕಿಯ ಚಿಲಿಪಿಲಿಯನ್ನು ನೋಡುವುದು ಶುಭಸೂಚಕವಾಗಿದೆ. ಲಕ್ಷ್ಮಿ ದೇವಿಯ ಸಂಕೇತಕವಾಗಿರುವ ಗೂಬೆಯನ್ನು ಕೂಡ ನೋಡುವುದು ಸಂಪತ್ತಿನ ಆಗಮನದ ಮುನ್ಸೂಚನೆ ಎಂಬುದಾಗಿ ಭಾವಿಸಬಹುದಾಗಿದೆ. ನವಿಲು; ನವಿಲನ್ನು ಕನಸಿನಲ್ಲಿ ಕಾಣುವ ಮೂಲಕ ನೀವು ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಸಾಧಿಸಬಹುದು ಎಂಬುದಾಗಿದೆ. ಅದರಲ್ಲೂ ಕನಸಿನಲ್ಲಿ ಶನಿದೇವ ನವಿಲಿನ ಮೇಲೆ ಸವಾರಿಯಾಗಿ ಬರುವುದನ್ನು ನೋಡಿದರೆ ಖಂಡಿತವಾಗಿ ನಿಮ್ಮ ಜೀವನ ಅದೃಷ್ಟದಿಂದ ಕೂಡಿರಲಿದೆ ಎಂಬುದಾಗಿ ಸ್ವಪ್ನ ಗ್ರಂಥದಲ್ಲಿ ಉಲ್ಲೇಖಿತವಾಗಿದೆ. ನಿಮಗೆ ಪಕ್ಷಿಗಳಿಗೆ ಸೇರಿದ ಯಾವ ರೀತಿಯ ಕನಸುಗಳು ಕಾಣುತ್ತವೆ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.