ಇವರು ಮಾಡಿದ್ದೆ ರೂಲ್ಸ್: D56 ಸಿನಿಮಾ ಸೆಟ್ ನಲ್ಲಿ ಕೇಕ್ ಕಟ್ ಮಾಡಿ ಜೊತೆಗೆ ಕಿಕ್ ಕೊಟ್ಟ ದರ್ಶನ್: ಹೊಸ ರೂಲ್ಸ್ ಏನು ಗೊತ್ತೇ??

28

ನಮಸ್ಕಾರ ಸ್ನೇಹಿತರೇ ಇದೆ ವರಮಹಾಲಕ್ಷ್ಮಿಯ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಅವರ 56ನೇ ಸಿನಿಮಾದ ಮುಹೂರ್ತ ಪೂಜೆ ನಡೆದಿತ್ತು. ಈ ಸಿನಿಮಾಗೆ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವ ರಾಧನ ಅವರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಈ ಸಿನಿಮಾಗೆ ರಾಕ್ಲೈನ್ ವೆಂಕಟೇಶ್ ರವರು ನಿರ್ಮಾಪಕರಾಗಿ ಬಂಡವಾಳವನ್ನು ಹೂಡಲಿದ್ದಾರೆ. ರಾಬರ್ಟ್ ಚಿತ್ರದ ನಂತರ ಮತ್ತೊಮ್ಮೆ ತರುಣ್ ಸುಧೀರ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾಗೆ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ರಾಕ್ಲೈನ್ ವೆಂಕಟೇಶ್ ಅವರ ಸ್ಟುಡಿಯೋದಲ್ಲಿ 20 ದಿನಗಳ ಮೊದಲ ಹಂತದ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಈ ಚಿತ್ರೀಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಧನ ರವರ ದೃಶ್ಯಗಳನ್ನು ಚಿತರಿಕರಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಇನ್ನು ಇದೆ ಚಿತ್ರದ ಚಿತ್ರೀಕರಣದ ಸೆಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಾಕ್ಲೈನ್ ವೆಂಕಟೇಶ್ ತರುಣ್ ಸುಧೀರ್ ಸುಮಲತಾ ಅಂಬರೀಶ್ ಹಾಗೂ ಮಾಲಾಶ್ರೀ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಚಿತ್ರರಂಗದಲ್ಲಿ ತಮ್ಮ 25ನೇ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯ ಸಂಭ್ರಮಾಚರಣೆಯ ಪ್ರಯುಕ್ತವಾಗಿ ಕೇಕ್ ಕತ್ತ’ರಿಸಿದ್ದಾರೆ.

ಇದೇ ಸಂದರ್ಭದಲ್ಲಿ ದರ್ಶನ್ ರವರ ಡಿ 56 ಸಿನಿಮಾದ ಚಿತ್ರೀಕರಣದ ಸೆಟ್ನಲ್ಲಿ ಒಂದು ಹೊಸ ರೂಲ್ಸ್ ಅನ್ನು ಕೂಡ ಪ್ರಾರಂಭಿಸಿದ್ದಾರೆ. ಹೌದು ಇದು ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಕೂಡ ಜಾರಿಗೆ ತಂದು ಯಶಸ್ವಿಯಾಗಿ ಕಾಣಿಸಿಕೊಂಡಿತ್ತು. ಡಿ 56 ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸೆಟ್ ಒಳಗೆ ಯಾರು ಕೂಡ ಮೊಬೈಲ್ ಫೋನ್ ಅನ್ನು ತರಬಾರದು ಎನ್ನುವ ನಿಯಮವನ್ನು ಡಿ ಬಾಸ್ ಜಾರಿಗೆ ತಂದಿದ್ದಾರೆ. ತರುಣ್ ಸುಧೀರ್ ಹಾಗೂ ಡಿ ಬಾಸ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು ಮತ್ತೊಂದು ಸೂಪರ್ ಹಿಟ್ ಸಿನಿಮಾಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.