ಬಹಿರಂಗ ಚಾಲೆಂಜ್ ಹಾಕಿದ ಅನಿರುದ್ಧ್: ಮಕ್ಕಳ ಮೇಲೆ ಆಣೆ ಇತ್ತು ಹೇಳಲಿ, ಎಂದು ಓಪನ್ ಚಾಲೆಂಜ್ ಹಾಕಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟ ಅನಿರುದ್ಧ ರವರು ಹಲವಾರು ವರ್ಷಗಳಿಂದ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಈಗ ಜೊತೆ ಜೊತೆಯಲಿ ಧಾರವಾಹಿ ಇಂದ ಅವರಿಗೆ ಗೇಟ್ ಪಾಸ್ ಸಿಕ್ಕಿದ್ದು ಮುಂದಿನ ಎರಡು ವರ್ಷಗಳ ತನಕ ಅವರು ಯಾವುದೇ ಧಾರವಾಹಿಯಲ್ಲಿ ನಟಿಸಬಾರದು ಎಂಬುದಾಗಿ ಎಲ್ಲಾ ನಿರ್ಮಾಪಕರು ನಿರ್ಧಾರ ತೆಗೆದುಕೊಂಡಿದ್ದು ಜೊತೆ ಜೊತೆಯಲಿ ಧಾರವಾಹಿಯ ನಿರ್ಮಾಪಕರಾಗಿರುವ ಆರೂರು ಜಗದೀಶ್ ಅನಿರುದ್ಧ ರವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಇದರ ಕುರಿತಂತೆ ಪ್ರತಿಕ್ರಿಯಿಸಿರುವ ಅನಿರುದ್ಧ್ ರವರು ಈ ಧಾರವಾಹಿ ನನಗೆ ಎಲ್ಲವನ್ನು ನೀಡಿದೆ. ನನಗೆ ಅಹಂಕಾರ ಇದ್ದಿದ್ದರೆ ಪಾತ್ರದಲ್ಲಿಯೇ ಕಾಣಿಸುತ್ತಿತ್ತು. ಈ ಪಾತ್ರಕ್ಕಾಗಿ 12 ಕೆಜಿ ತೂಕ ಇಳಿಸಿದ್ದೆ ಸಾಕಷ್ಟು ಕಷ್ಟ ಪಟ್ಟಿದ್ದೆ. ಪ್ರತಿಯೊಂದು ಧಾರವಾಹಿ ಚಿತ್ರೀಕರಣದಲ್ಲಿ ಭಿನ್ನಾಭಿಪ್ರಾಯ ಮೂಡುವುದು ಸರ್ವೆ ಸಾಮಾನ್ಯ ಆದರೆ ಇಲ್ಲಿ ಹೊರಗಡೆ ಹೇಳುವ ಅವಶ್ಯಕತೆ ಇರಲಿಲ್ಲ. ನಾನು ಮೊದಲೇ ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂಬುದಾಗಿ ಹೇಳಿದ್ದೆ. ಕೊನೆಯ ಕ್ಷಣದಲ್ಲಿ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೂಡ ಕೋಪ ಬರುತ್ತೆ. ಆದರೂ ಕೂಡ ನಾನು ಒಪ್ಪಿಕೊಂಡು ನಟಿಸಿದ್ದೆ ಆದರೆ ಅವರು ಅನಿರುದ್ಧ್ ಒಪ್ಪಿಕೊಳ್ಳುತ್ತಿಲ್ಲ ಎಂಬುದಾಗಿ ಆರೋಪ ಮಾಡುತ್ತಿದ್ದಾರೆ ಅವರ ಮಕ್ಕಳ ಮೇಲೆ ಆಣೆ ಇಟ್ಟು ಹೇಳಲಿ ಎಂಬುದಾಗಿ ಅನಿರುದ್ಧ್ ಹೇಳಿದ್ದಾರೆ.

ಈ ಕಡೆ ನಿರ್ಮಾಪಕ ಆರೂರು ಜಗದೀಶ್ ಅನಿರುದ್ಧ್ ಅವರಿಂದ ಧಾರವಾಹಿ ಚಿತ್ರೀಕರಣಕ್ಕೆ ಆಗುತ್ತಿದ್ದ ತೊಂದರೆಗಳನ್ನು ಆಡಿಯೋ ಬಿಡುಗಡೆ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಗೆಲುವು ಕಾಣುತ್ತಿದ್ದಂತೆ ಅನಿರುದ್ಧ್ ಹೇಗೆ ಬದಲಾದರೂ ಎಂಬುದನ್ನು ಕೂಡ ಇಲ್ಲಿ ಹೊರಹಾಕಿದ್ದಾರೆ. ಅನಿರುದ್ಧ ಅವರ ಮೇಲೆ ವಿಷ್ಣುವರ್ಧನ್ ಅವರ ಅಳಿಯ ಎನ್ನುವ ಗೌರವ ಇತ್ತು. ಮಾತ್ರವಲ್ಲದೆ ಮೊದಲು ವಿನಯವಾಗಿ ನಡೆದುಕೊಳ್ಳುತ್ತಿದ್ದರು ಹಾಗೂ ಎಲ್ಲಿ ಬೇಕಾದರೂ ಊಟ ತಿಂಡಿ ಮಾಡುತ್ತಿದ್ದರು ಆದರೆ ಇತ್ತೀಚಿಗೆ ಯಾರು ಬೇಕು ಸ್ಟಾರ್ ಹೋಟೆಲ್ನಲ್ಲೆ ತಿಂಡಿ, ಊಟ ಆಗಬೇಕು ಎನ್ನುವುದಾಗಿ ಬೇಡಿಕೆ ಇಡುತ್ತಾರೆ. ಸರ್ ಇದು ಧಾರವಾಹಿ ಚಿತ್ರೀಕರಣ ಸಿನಿಮಾ ಚಿತ್ರೀಕರಣ ಅಲ್ಲ ಎಂಬುದಾಗಿ ಹೇಳಿದ್ರು ಕೂಡ ಕೇಳಲಿಲ್ಲ ಎನ್ನುವುದಾಗಿ ಅನಿರುದ್ಧ್ ಅವರ ವಿರುದ್ಧ ನಿರ್ಮಾಪಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಕಾರ ಇಲ್ಲಿ ಯಾರದು ತಪ್ಪು ಎಂಬುದನ್ನು ನಿಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಕಾಮೆಂಟ್ ಮಾಡಿ.