ಅಭಿಮಾನಿಗಳ ಹೃದಯ ನುಚ್ಚು ನೂರು ಮಾಡಿದ ಸೋನು: ಮದುವೆ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟು ಹೇಳಿದ್ದೇನು ಗೊತ್ತೇ??

73

ನಮಸ್ಕಾರ ಸ್ನೇಹಿತರೇ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಆಗಿರುವ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಮತ್ತಷ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಅವರ ತಮ್ಮ ವೈಯಕ್ತಿಕ ಜೀವನದ ಕೆಲವೊಂದು ಬೇಡಿದ ವಿಚಾರಗಳಿಗಾಗಿಯೂ ಸುದ್ದಿಯಾಗಿದ್ದರು.

ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಸೋನು ಗೌಡ ಅವರು ರಾಕೇಶ್ ಅಡಿಗ ಅವರ ವಿಚಾರವಾಗಿ ಕೂಡ ಸುದ್ದಿಯಾಗುತ್ತಿದ್ದಾರೆ. ನಟ ರಾಕೇಶ್ ಅಡಿಗ ಅವರಿಗೆ ಸೋನು ಗೌಡ ಅವರು ನಿನ್ನ ಮೇಲೆ ನನಗೆ ಫೀಲಿಂಗ್ ಇದೆ ಎಂಬುದಾಗಿ ಓಪನ್ ಆಗಿಯೇ ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದರ ಕುರಿತಂತೆ ಪ್ರತಿಯೊಬ್ಬರೂ ಕೂಡ ಮಾತನಾಡಿಕೊಳ್ಳುವಂತಾಗಿತ್ತು. ರಾಕೇಶ್ ಅಡಿಗ ಅವರ ಮೇಲೆ ಪೂರ್ತಿ ಗೌಡ ಅವರಿಗೂ ಕೂಡ ಫೀಲಿಂಗ್ ಇದ್ದಂತೆ ಕಾಣುತ್ತದೆ. ಹೀಗಾಗಿ ಸೋನು ಗೌಡ ಅವರ ಬಳಿಗೆ ಬಂದು ಸ್ಪೂರ್ತಿಗೌಡ ಅವರು ನಿಜವಾಗಲೂ ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ ಎಂಬುದಾಗಿ ಕೇಳಿದ್ದರು. ಇದಕ್ಕೆ ಸೋನು ಶ್ರೀನಿವಾಸ ಗೌಡ ನೀಡಿರುವ ಉತ್ತರ ನಿಜಕ್ಕೂ ಕೂಡ ಜಾಣ್ಮೆಯಿಂದ ಕೂಡಿದೆ ಎಂದು ಹೇಳಬಹುದಾಗಿದೆ.

ಈ ಪ್ರಶ್ನೆಗೆ ಉತ್ತರಿಸುತ್ತಾ ಸೋನು ಶ್ರೀನಿವಾಸ ಗೌಡ ಅವರು ನನಗೆ ರಾಕೇಶ್ ಒಬ್ಬ ಒಳ್ಳೆಯ ಗೆಳೆಯ ಹಾಗಂತ ಅವನ ಜೊತೆ ನಾನು ಟೈಂಪಾಸ್ ಮಾಡುತ್ತಿಲ್ಲ ನನ್ನ ಒಬ್ಬ ಗೆಳೆಯನ ಹಾಗೆ ಅವನು ಕೂಡ ಹೀಗಾಗಿ ಆತನಿಗೆ ನಾನು ಕ್ಲೋಸ್ ಆಗಿದ್ದೇನೆ. ಇನ್ನು ಮದುವೆ ವಿಚಾರ ಬಂದ್ರೆ ಸದ್ಯಕ್ಕಂತೂ ನಾನು ಮದುವೆ ಆಗುವುದಿಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸಿದ ಮೇಲೆ ಅಂದರೆ ಆರು ಏಳು ವರ್ಷದ ನಂತರ ನಾನು ಮದುವೆಯಾಗುತ್ತೇನೆ ಅಲ್ಲಿ ತನಕ ಯಾವುದೇ ಮದುವೆ ಆಗುವುದಿಲ್ಲ ಎಂಬುದಾಗಿ ಸೋನು ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಹೋದ ನಂತರ ಖಂಡಿತವಾಗಿ ಚಿತ್ರರಂಗದಿಂದ ಅವಕಾಶ ಸಿಕ್ಕರೂ ಕೂಡ ಸಿಗಬಹುದು ಎನ್ನುವುದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.