ನಾನು ಪ್ರೀತಿ ಮಾಡಿದರೆ ಹೇಗಿರುತ್ತದೆ ಎಂದು ವಿವರಣೆ ನೀಡಿದ ಸಾನಿಯಾ: ಈ ರೀತಿ ಪ್ರೀತಿಗಾಗಿ ಸಾಯಲು ಸಿದ್ದವೆಂದ ಫ್ಯಾನ್ಸ್. ಹೇಳಿದ್ದೇನು ಗೊತ್ತೇ??

39

ನಮಸ್ಕಾರ ಸ್ನೇಹಿತರೇ ಈಗಾಗಲೇ ಓ ಟಿ ಟಿ ಅಪ್ಲಿಕೇಶನ್ ವೂಟ್ ನಲ್ಲಿ 24 ಗಂಟೆಗಳ ಕಾಲ ಪ್ರಸಾರ ಕಾಣುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ಈಗ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅವರಲ್ಲಿ ಯುವ ಉದಯೋನ್ಮುಖ ಕಿರುತರೆ ನಟಿಯಾಗಿರುವ ಸಾನಿಯಾ ಅಯ್ಯರ್ ಕೂಡ ಒಬ್ಬರಾಗಿದ್ದಾರೆ. ಇತ್ತೀಚಿಗಷ್ಟ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ಒಂದು ಘಟನೆ ಈಗ ಸಾಕಷ್ಟು ಸುದ್ದಿಯಾಗುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಕ್ಲೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಬ್ಬರೂ ಕೂಡ ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ಈಗಾಗಲೇ ಬಿಗ್ ಬಾಸ್ ಪ್ರೇಕ್ಷಕರು ಇಂತಹ ಸ್ನೇಹಿತರ ಜೋಡಿಗಳನ್ನು ಹಲವಾರು ಬಿಗ್ ಬಾಸ್ ನಲ್ಲಿ ಹಲವಾರು ಬಾರಿ ನೋಡಿದ್ದಾರೆ. ಅದೇನೆ ಇರಲಿ ಇಂದು ನಾವು ಮಾತನಾಡಲು ಬಂದಿರುವ ವಿಚಾರವನ್ನು ಮೊದಲು ನಿಮಗೆ ತಿಳಿಸುತ್ತೇವೆ ಬನ್ನಿ. ಜಶ್ವಂತ್ ಹಾಗೂ ಸಾನಿಯಾ ಇಬ್ಬರೂ ಕೂಡ ಕಿಚನ್ ರೂಮ್ನಲ್ಲಿ ಇರುತ್ತಾರೆ. ಈ ಸಂದರ್ಭದಲ್ಲಿ ಜಶ್ವಂತ್ ಡಬ್ಬಿಯ ಮುಚ್ಚಳವನ್ನು ತೆಗೆಯಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಸಾನಿಯಾ ಒಳಗಿನಿಂದ ಚಾ’ಕುವನ್ನು ತಂದು ಮುಚ್ಚಳವನ್ನು ತೆಗೆಯುವ ಎಂದು ಹೇಳಿ ಚಾ’ಕುವನ್ನು ತರಲು ಹೋಗುತ್ತಾರೆ. ಸಾನಿಯಾ ಬರುವ ಮುನ್ನವೇ ಜಶ್ವಂತ್ ಡಬ್ಬಿಯ ಮುಚ್ಚಳವನ್ನು ತೆಗೆದಿರುತ್ತಾರೆ. ಆಗ ಚಾ’ಕು ತಂದಿದ್ದು ವೆಸ್ಟ್ ಆಯ್ತು ಎಂಬುದಾಗಿ ಹೇಳುತ್ತಾರೆ‌.

ಈ ಕಡೆಯಲ್ಲಿ ಸಾನಿಯಾ ಚಾ’ಕು ತಂದಿದ್ದೀನಲ್ಲ ಏನು ಮಾಡ್ಲಿ ನಿನಗೆ ಚುಚ್ಲ ಎನ್ನುವುದಾಗಿ ಕೇಳುತ್ತಾರೆ. ಆಗ ಯಶ್ವಂತ್ ನಗುತ್ತಾ ಒಪ್ಪಿಕೊಳ್ಳುತ್ತಾರೆ. ಆಗ ಸಾನಿಯಾ ಅವರು ಚಾ’ಕುವಿನಿಂದ ನಾನು ಮುಗಿಸುವುದಿಲ್ಲ ಪ್ರೀತಿಯಿಂದ ಮುಗಿಸುತ್ತೇನೆ ಎಂಬುದಾಗಿ ನಗುತ್ತಲೇ ಹೇಳುತ್ತಾರೆ. ಈ ಮೂಲಕವೂ ಕೂಡ ಮತ್ತೊಮ್ಮೆ ಪ್ರೇಕ್ಷಕರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಾರೆ ಸಾನಿಯಾ. ಪ್ರೇಕ್ಷಕರಿಗೆ ಸಾನಿಯಾ ಇಷ್ಟ ಆಗುವ ಮತ್ತೊಂದು ವಿಚಾರ ಏನೆಂದರೆ ಮನೆಯಲ್ಲಿ ಯಾವುದೇ ಜಗಳ ಅಥವಾ ವಿವಾದ ನಡೆಯುವಂತಹ ಘಟನೆಗಳು ಎದುರಾದ ಆಗಲಿಲ್ಲ ಅವರು ಅಲ್ಲಿಂದ ಹೊರ ಹೋಗುತ್ತಾರೆ ಹಾಗೂ ತಮ್ಮ ಪಾಡಿಗೆ ತಾವಿರುತ್ತಾರೆ. ನಿಮಗೆ ಸಾನಿಯಾ ಯಾವ ಕಾರಣಕ್ಕಾಗಿ ಇಷ್ಟ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ