ಇನ್ನು ಮುಂದೆ ಮಕ್ಕಳು ಮಾಡಿಕೊಂಡು ಕೂಡ ದುಡ್ಡು ಮಾಡಬಹುದು ಇಲ್ಲಿ. 10 ಮಕ್ಕಳನ್ನು ಹೆತ್ತರೆ 13 ಲಕ್ಷ ಬಹುಮಾನ
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶ ಜನಸಂಖ್ಯೆಯಲ್ಲಿ ಚೀನಾ ಬಿಟ್ಟರೆ 2ನೇ ಸ್ಥಾನದಲ್ಲಿದೆ. ಆದರೆ ಇಲ್ಲೊಂದು ದೇಶದಲ್ಲಿ 10 ಮಕ್ಕಳನ್ನು ಹೆತ್ತರೆ ಆ ತಾಯಿಗೆ 13 ಲಕ್ಷ ರೂಪಾಯಿ ಬಹುಮಾನ ನೀಡುವ ಕ್ರಮವೊಂದನ್ನು ಜಾರಿಗೆ ತರಲಾಗಿದೆ. ಇದು ಕೇಳಲು ವಿಚಿತ್ರವಾದರೂ ಕೂಡ ಜಗತ್ತಿನ ಪ್ರತಿಷ್ಠಿತ ದೇಶ ಒಂದರ ಮಾತಾಗಿದೆ. ಹೌದು ನಾವು ಮಾತನಾಡಲು ಹೊರಟಿರುವುದು ರಷ್ಯಾ ದೇಶದ ಕುರಿತಂತೆ. ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ಎಂದು ನೋಡುವುದಾದರೆ ಅದರಲ್ಲಿ ಮೊದಲ ಸ್ಥಾನದಲ್ಲಿ ರಷ್ಯಾ ದೇಶ ಕಾಣಿಸುತ್ತದೆ.
ದೊಡ್ಡ ದೇಶ ಎಂದ ಮಾತ್ರಕ್ಕೆ ಇದರಲ್ಲಿ ನೀವು ಅರ್ಥೈಸಿಕೊಳ್ಳಬೇಕಾಗಿರುವುದು ವಿಸ್ತೀರ್ಣದಲ್ಲಿ ದೊಡ್ಡ ದೇಶ. ಮ್ಯಾಪ್ ನಲ್ಲಿ ಇಷ್ಟೊಂದು ದೊಡ್ಡದಾಗಿರುವ ದೇಶ ಜನಸಂಖ್ಯೆಯಲ್ಲಿ ಮಾತ್ರ ಕಡಿಮೆ ಇದೆ. ಇದೇ ಆಗಸ್ಟ್ 15 ರಂದು ರಷ್ಯಾ ದೇಶದ ಪ್ರೆಸಿಡೆಂಟ್ ಆಗಿರುವ ವ್ಲಾದಿಮಿರ್ ಪುತಿನ್ ರವರು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಒಂದು ವೇಳೆ ಒಂದೇ ತಾಯಿ ಹತ್ತಕ್ಕೂ ಹೆಚ್ಚಿನ ಮಕ್ಕಳನ್ನು ಹೆತ್ತರೆ ಮದರ್ ಹೀರೋಯಿನ್ ಎಂಬ ಬಿರುದನ್ನು ಕೂಡ ನೀಡಲಾಗುತ್ತದೆ ಎಂಬುದಾಗಿ ಅವರು ಘೋಷಿಸಿದ್ದಾರೆ. ಎರಡನೇ ಮಹಾಯು’ದ್ಧದ ಸಂದರ್ಭದಲ್ಲಿ ಸ್ಟಾಲಿನ್ ಕೂಡ ಈ ಪದ್ಧತಿಯನ್ನು ಜಾರಿಗೆ ತಂದಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಕಳೆದ ಹಲವಾರು ವರ್ಷಗಳಿಂದ ಜನನದ ರೇಶಿಯೋದಲ್ಲಿ ಬರೋಬ್ಬರಿ ನಾಲ್ಕು ಲಕ್ಷದಷ್ಟು ಕುಸಿತವನ್ನು ರಷ್ಯಾ ದೇಶ ಕಂಡಿದೆ. ಈ ಹಿನ್ನೆಲೆಯಲ್ಲಿ ಪ್ರೆಸಿಡೆಂಟ್ ಪುತಿನ್ ಈ ಪದ್ಧತಿಯನ್ನು ಪ್ರಾರಂಭಿಸಿದ್ದಾರೆ. ರಷ್ಯಾ ದೇಶದಲ್ಲಿ ಜನನದ ಸಂಕೇತಗತಿಯಲ್ಲಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ನಿಯಮಗಳನ್ನು ಜಾರಿಗೆ ತರುವ ಅವಶ್ಯಕತೆ ತೀರ ಇದೆ ಎಂಬುದಾಗಿ ಪುತಿನ್ ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಾಮಾರಿ ಬಂದ ಮೇಲೆ ರಷ್ಯಾದ ಜನಸಂಖ್ಯೆಯಲ್ಲಿ ಕಡಿವಾಣ ಬಿದ್ದಿದ್ದು ಪುತಿನ್ ಅವರ ಈ ಹೊಸ ಯೋಜನೆಯಿಂದಾಗಿ ರಷ್ಯಾದ ಜನಸಂಖ್ಯೆಗೆ ಮತ್ತಷ್ಟು ಚೇತರಿಕೆ ನೀಡಲು ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.