ನಾನು ಕಾಸು ತಗೊಂಡು ಸಿನಿಮಾ ಮಾಡುವ ವಂಶದಲ್ಲಿ ಹುಟ್ಟಿಲ್ಲ ಎಂದ ರವಿಚಂದ್ರನ್ ಮಗ ವಿಕ್ರಂ: ಖಡಕ್ ಆಗಿ ಉತ್ತರ ನೀಡಿದ್ದು ಯಾಕೆ ಗೊತ್ತೇ??

27

ನಮಸ್ಕಾರ ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ರವಿ ಬೋಪಣ್ಣ ಸಿನಿಮಾ ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದರು ಕೂಡ ಹೊಂ ಬ್ಯಾನರ್ ಆಗಿರುವ ಈಶ್ವರಿ ಪ್ರೊಡಕ್ಷನ್ ನಲ್ಲಿ 50ನೇ ಸಿನಿಮಾ ಆಗಿ ಇದು ಬಿಡುಗಡೆಯಾಗಿರುವುದು ನಿಜಕ್ಕೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ಆಗಿರುವ ವಿಕ್ರಂ ಕೂಡ ಸದ್ದು ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ಆಗಿರುವ ವಿಕ್ರಂ ರವರು ಇತ್ತೀಚಿಗಷ್ಟೇ ತ್ರಿವಿಕ್ರಮ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದರ್ಪಣೆ ಮಾಡಿದ್ದಾರೆ.

ಪಾಲಾರ್ಪಣ ಸಿನಿಮಾ ಆಗಿದ್ದರೂ ಕೂಡ ವಿಕ್ರಂ ರವಿಚಂದ್ರನ್ ಅವರಿಗೆ ತ್ರಿವಿಕ್ರಮ ಸಿನಿಮಾ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಯಶಸ್ಸನ್ನು ನೀಡಿಲ್ಲ ಹೀಗಾಗಿ ಅವರು ತಮ್ಮ ಮುಂದಿನ ಸಿನಿಮಾಗಳ ಆಯ್ಕೆ ಕುರಿತಂತೆ ಸಾಕಷ್ಟು ಜಾಗರೂಕರಾಗಿ ಪ್ಲಾನ್ ಮಾಡಿ ಆಯ್ಕೆ ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಇತ್ತೀಚಿಗಷ್ಟೇ ಜನ್ಮದಿನಾಚರಣೆಯನ್ನು ಕೂಡ ಆಚರಿಸಿಕೊಂಡಿರುವ ವಿಕ್ರಂ ರವರು ಸಿನಿಮಾಗಳ ಆಫರ್ ಗಳಿಗೇನು ಕಮ್ಮಿ ಇಲ್ಲ ಆದರೆ ಜನರು ಪ್ರೀತಿ ನೀಡಿದ್ದಾರೆ ಅವರ ಪ್ರೀತಿಯನ್ನು ಉಳಿಸಿಕೊಳ್ಳುವಂತಹ ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬಂದಿದ್ದು ಅವುಗಳ ಸ್ಕ್ರಿಪ್ಟ್ ಹಾಗೂ ಡೈರೆಕ್ಟರ್ ಅನ್ನು ಫೈನಲೈಸ್ ಮಾಡಬೇಕಾಗಿದೆ. ಹೀಗಾಗಿಯೇ ಸಿನಿಮಾದ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು ಎಂಬುದಾಗಿ ಅವರು ಹೇಳಿದ್ದಾರೆ.

ಅಭಿಮಾನಿಗಳು ಪ್ರೀತಿ ತೋರಿಸಿದ್ದಾರೆ ಹೀಗಾಗಿ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಬೇಕು. ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದಾವೆ ಎಂದು ಮೂರ್ನಾಲ್ಕು ಸಿನಿಮಾಗಳಲ್ಲಿ ಸೈನ್ ಮಾಡಿ ಸಿನಿಮಾ ಮಾಡಿ ದುಡ್ಡು ಮಾಡಬೇಕು ಎನ್ನುವ ವಂಶ ನಮ್ಮದಲ್ಲ ಎಂಬುದಾಗಿ ಹೇಳಿದ್ದಾರೆ. ತಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಂತೆ ವಿಭಿನ್ನ ಹಾಗೂ ಉತ್ಕೃಷ್ಟ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಹಪಹಪಿಕೆ ಕಿರಿಯ ಮಗ ವಿಕ್ರಂ ರವಿಚಂದ್ರನ್ ಅವರಲ್ಲಿ ಕೂಡ ಕಾಣಿಸುತ್ತಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.