ಬಿಗ್ ನ್ಯೂಸ್: ಏರ್ಟೆಲ್ ಗೆ ಠಕ್ಕರ್ ನೀಡಲು, ಒಂದು ವರ್ಷಕ್ಕೆ ಕಡಿಮೆ ಬೆಲೆಗೆ ಪ್ಲಾನ್ ಬಿಡುಗಡೆ ಮಾಡಿದ ಜಿಯೋ: ಗ್ರಾಹಕರೇ ಒಮ್ಮೆ ರಿಚಾರ್ಜ್ ಮಾಡಿ ಸಾಕು.
ನಮಸ್ಕಾರ ಸ್ನೇಹಿತರೆ ರಿಲಯನ್ಸ್ ವಡೆತನದ ಜಿಯೋ ಸಂಸ್ಥೆ ಪ್ರಾರಂಭ ಆದಾಗಿನಿಂದಲೂ ಕೂಡ ಭಾರತದ ಉಳಿದ ಪ್ರೈವೇಟ್ ಟೆಲಿಕಾಂ ಕಂಪನಿಗಳಿಗೆ ಸಾಕಷ್ಟು ಚಿಂತೆಯಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಜಿಯೋ ಸಂಸ್ಥೆ ಸಾಕಷ್ಟು ಜನಪ್ರಿಯ ಯೋಜನೆಗಳಿಂದ ಟೆಲಿಕಾಂ ಗ್ರಾಹಕರ ನೆಚ್ಚಿನ ಟೆಲಿಕಾಂ ಸಂಸ್ಥೆಯಾಗಿ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದೆ. ಟೆಲಿಕಾಂ ಕ್ಷೇತ್ರದ ಐವತ್ತು ಪ್ರತಿಶತಕ್ಕೂ ಅಧಿಕ ಹೆಚ್ಚಿನ ಮಾರುಕಟ್ಟೆಯನ್ನು ಜಿಯೋ ಸಂಸ್ಥೆ ತನ ಹಿಡಿತದಲ್ಲಿ ಇಟ್ಟುಕೊಂಡಿದೆ.
ಅದರಲ್ಲೂ ಜಿಯೋ ಸಂಸ್ಥೆ ತನ್ನ ನಿಕಟಸ್ಪರ್ಧಿಯಾಗಿರುವ ಏರ್ಟೆಲ್ ಸಂಸ್ಥೆಗೆ ಟಕ್ಕರ್ ಕಾಂಪಿಟೇಶನ್ ನೀಡಲು ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ ಒಂದು ಹೊಸ ಯೋಜನೆಯನ್ನು ಕೂಡ ಪರಿಚಯಿಸಿದೆ. ಹೌದು ಇತ್ತೀಚೆಗಷ್ಟೇ ಅಂದರೆ ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ಜಿಯೋ ಸಂಸ್ಥೆ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. 2999 ರೂಪಾಯಿಗಳ ರಿಚಾರ್ಜ್ ಪ್ಲಾನ್ ಇದಾಗಿದ್ದು ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಇದು ನಿಮಗೆ ಸಿಗುತ್ತದೆ. ದೈನಂದಿನ ವಾಗಿ 2.5ಜಿಬಿ ಇಂಟರ್ನೆಟ್ ಡೇಟಾ ನಿಮಗೆ ಉಪಯೋಗಿಸಲು ಸಿಗುತ್ತದೆ. ಒಟ್ಟಾರೆಯಾಗಿ 912.5ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ. ಅನ್ಲಿಮಿಟೆಡ್ ಟಾಕ್ ಟೈಮ್ ಕೂಡ ಸಿಗಲಿದೆ. ದೈನಂದಿನವಾಗಿ ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ಮಾಡಬಹುದಾಗಿದೆ.

ಕೇವಲ ಎಷ್ಟು ಮಾತ್ರವಲ್ಲದೆ ಜಿಯೋ ಅಪ್ಲಿಕೇಶನ್ ಗಳ ಮೇಲೆ ವಾರ್ಷಿಕವಾಗಿ ಉಚಿತ ಚಂದದಾರಿಕೆ ಸಿಗಲಿದೆ. 499 ರೂಪಾಯಿಗಳ ಮೌಲ್ಯದ ಒಂದು ವರ್ಷದ ಉಚಿತ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇವೆ ಕೂಡ ಉಚಿತವಾಗಿ ದೊರೆಯಲಿದೆ. ವಾರ್ಷಿಕವಾಗಿ ಒಂದು ಬಾರಿ ರಿಚಾರ್ಜ್ ಮಾಡಿಬಿಟ್ಟರೆ ಖಂಡಿತವಾಗಿ ಇದೊಂದು ಲಾಭದಾಯಕ ಪ್ರಿಪೇಯ್ಡ್ ಪ್ಲಾನ್ ಎನ್ನುವುದರಲ್ಲಿ ಯಾವುದೇ ಮಾತಿಲ್ಲ ಎಂದು ಹೇಳಬಹುದಾಗಿದೆ. ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ತಪ್ಪದೆ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.