ಇಂದಿಗೂ ಕೂಡ ರಾಮಾಚಾರಿ ಖ್ಯಾತಿಯ ನಟಿ ಸಿರಿ ರವರು ಮದುವೆಯಾದ ಒಂಟಿಯಾಗಿ ಇರುವುದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಚಿಕ್ಕವರಿದ್ದಾಗ ಕೇವಲ ಹಳೆಯ ನಟಿಯರನ್ನು ಮಾತ್ರವಲ್ಲದೆ ಮೊದಲಿನಿಂದಲೂ ಕೂಡ ಧಾರವಾಹಿಯಲ್ಲಿ ನಡೆಸಿಕೊಂಡು ಬಂದಿರುವಂತಹ ನಟಿಯರ ಕುರಿತಂತೆ ಕೂಡ ಸಾಕಷ್ಟು ಕುತೂಹಲವನ್ನು ಹೊಂದಿರುತ್ತಿದ್ದೆವು. ಸಾಯಂಕಾಲ ಆಯಿತೆಂದರೆ ಮನೆಯಲ್ಲಿ ಎಲ್ಲರೂ ಕೂಡ ಕೂತು ನೋಡುವುದು ಕೇವಲ ಧಾರವಾಹಿಯನ್ನು ಮಾತ್ರ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅಂದಿನ ಕಾಲದಿಂದಲೂ ಕೂಡ ಧಾರವಾಹಿಯಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಕೊಂಡು ಬಂದಿರುವಂತಹ ನಟಿಯೊಬ್ಬರ ಕುರಿತಂತೆ ಹೇಳಲು ಹೊರಟಿದ್ದೇವೆ.
ನಾವು ಚಿಕ್ಕವರಿದ್ದಾಗ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಅಂತಹ ಧಾರವಾಹಿಗಳು ಯಾವುವೆಂದರೆ ಒಂದು ರಂಗೋಲಿ ಹಾಗೂ ಇನ್ನೊಂದು ಬದುಕು. ಈ ಎರಡು ಧಾರವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದು ಸಿರಿ. ಇಷ್ಟೊಂದು ಜನಪ್ರಿಯರಾಗಿರುವ ಸಿರಿ ರವರಿಗೆ ಧಾರವಾಹಿಗಳಲ್ಲಿ ನಟಿಸುವ ಆಸಕ್ತಿ ಇರಲಿಲ್ಲವಂತೆ. ಸಿರಿ ರವರ ತಂದೆಯ ಸ್ನೇಹಿತರೆ ಅವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡುವ ಕುರಿತಂತೆ ಹೇಳಿದ್ದರಂತೆ. ಮೊದಲಿಗೆ ಎಸ್ ನಾರಾಯಣ್ ರವರು ನಿರ್ದೇಶಿಸಿರುವ ಅಂಬಿಕಾ ಎನ್ನುವ ಧಾರವಾಹಿಯಲ್ಲಿ 9ನೇ ತರಗತಿಯಲ್ಲಿರುವಾಗ ನಟಿಸಿದ್ದರು.

ನಂತರ ಎಲ್ಲರ ನೆಚ್ಚಿನ ರಂಗೋಲಿ ಧಾರವಾಹಿ ಪ್ರಾರಂಭವಾಗುವಾಗ ಅವರು ಪಿಯುಸಿ ಶಿಕ್ಷಣವನ್ನು ಪಡೆಯುತ್ತಿದ್ದರಂತೆ. ಪಿಯುಸಿ ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ಸಿರಿರವರು ನಾಯಕಿಯಾಗಿ ಆಯ್ಕೆಯಾಗುತ್ತಾರೆ. ಪಿಯುಸಿ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ನಾಯಕಿಯಾಗಿ ಪ್ರಬುದ್ಧ ಪಾತ್ರವನ್ನು ಪಡೆದುಕೊಂಡಿದ್ದರು ನಟಿ ಸಿರಿ. ರಂಗೋಲಿ ಧಾರಾವಾಹಿಯಿಂದಾಗಿ ಸಿರಿ ರವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಹರಡಿತು ಎಂದರೆ ಪಕ್ಕದ ತೆಲುಗು ಹಾಗೂ ತಮಿಳು ಕಿರುತೆರೆ ಕ್ಷೇತ್ರಗಳಿಂದಲೂ ಕೂಡ ಹಲವಾರು ಧಾರವಾಹಿಗಳ ಆಫರ್ ಸಿರಿ ಅವರನ್ನು ಹುಡುಕಿಕೊಂಡು ಬರುತ್ತದೆ.
ನಟಿ ಸಿರಿ ರವರು ಇದುವರೆಗೂ ಕನ್ನಡ ತಮಿಳು ಹಾಗೂ ತೆಲುಗು ಕಿರುತೆರೆ ಕ್ಷೇತ್ರಗಳು ಸೇರಿದಂತೆ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಿಜಕ್ಕೂ ಕೂಡ ಇರುವ ಮೆಚ್ಚಲೇ ಬೇಕಾದಂತಹ ವಿಚಾರ. ಪ್ರಮುಖ ಪಾತ್ರದಲ್ಲಿ ಇಷ್ಟೊಂದು ಧಾರವಾಹಿಗಳಲ್ಲಿ ನಟಿಸುವುದು ಕಷ್ಟಸಾಧ್ಯ ಕೆಲಸ. ಯಾಕೆಂದರೆ ಧಾರವಾಹಿಗಳು ವರ್ಷಾನುಗಟ್ಟಲೆ ಚಿತ್ರೀಕರಣವನ್ನು ಮುಂದುವರೆಸುತ್ತದೆ. ಕನ್ನಡ ತಮಿಳು ಹಾಗೂ ತೆಲುಗು ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದರು ಕೂಡ ಕನ್ನಡ ಕಿರುತೆರೆಯ ಪ್ರೇಕ್ಷಕರು ನಟಿ ಸಿರಿ ರವರನ್ನು ತಮ್ಮ ಮನೆಮಗಳು ಎಂಬುದಾಗಿಯೇ ಪ್ರೀತಿಸುತ್ತಾರೆ.
ಇದುವರೆಗೂ ನಟಿ ಸಿರಿ ರವರು ನಟಿಸಿರುವಂತಹ ಅದೆಷ್ಟು ದಾರವಾಯಿಗಳು ಸಾವಿರ ಸಂಚಿಕೆಯನ್ನು ಪೂರೈಸಿವೆ. ಹಲವಾರು ಸಮಯಗಳ ಕಾಲ ಕನ್ನಡ ಕಿರುತೆರೆಯಿಂದ ದೂರವಿದ್ದ ನಟಿ ಸಿರಿ ರವರು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರವಾಹಿ ಮೂಲಕ ಮತ್ತೆ ವಾಪಸ್ ಆಗಿದ್ದಾರೆ. ಕನ್ನಡ ಕಿರುತೆರೆ ಅವರ ಅಭಿಮಾನಿಗಳು ಅವರ ಪುನರಾಗಮನ ದಿಂದಾಗಿ ಸಂತೋಷಗೊಂಡಿದ್ದಾರೆ. ಕನ್ನಡ ತಮಿಳು ಹಾಗೂ ತೆಲುಗು ಧಾರವಾಹಿಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ತಮ್ಮ ಬೇಡಿಕೆಯನ್ನು ಇಲ್ಲಿಯವರೆಗೂ ಕೂಡ ಕಾಯ್ದಿರಿಸಿ ಕೊಂಡಿರುವುದು ನಿಜಕ್ಕೂ ಕೂಡ ದೊಡ್ಡ ಸಾಧನೆ ಎಂದು ಹೇಳಬಹುದಾಗಿದೆ.
ರಂಗೋಲಿ ಹಾಗೂ ಬದುಕು ಧಾರವಾಹಿಗಳನ್ನು ನೀವು ಗಮನಿಸಿರಬಹುದು ಸಿರಿ ರವರು ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಮದುಮಗಳು ಎನ್ನುವ ಧಾರವಾಹಿಯಲ್ಲಿ ಹಿಂದೆಂದೂ ನಿರ್ವಹಿಸಿದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಗೆಳೆಯರೇ ಮದುಮಗಳು ಧಾರವಾಹಿಯಲ್ಲಿ ನಟಿ ಸಿರಿ ರವರು ಘಟವಾಣಿ ಅತ್ತೆಯ ಪಾತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟಿ ಸಿರಿ ಅವರ ವೈಯಕ್ತಿಕ ಜೀವನದ ಕುರಿತಂತೆ ಬೆಳಕು ಚೆಲ್ಲೋಣ ಬನ್ನಿ.
ನಟಿ ಸಿರಿ ರವರು ಇಲ್ಲಿಯವರೆಗೂ ಕೂಡ ಮದುವೆ ಆಗದೆ ಸಿಂಗಲ್ಲಾಗಿ ಉಳಿದುಕೊಂಡಿದ್ದಾರೆ. ತಮ್ಮ ಕೆಲಸವನ್ನು ಅರ್ಥಮಾಡಿಕೊಂಡು ತಮ್ಮೊಂದಿಗೆ ಮನಸ್ಸನ್ನು ಅರ್ಥಮಾಡಿಕೊಂಡು ಜೊತೆಯಾಗಿ ಹೆಜ್ಜೆ ಹಾಕುವಂತಹ ಹುಡುಗ ಬೇಕು ಎನ್ನುವುದಾಗಿ ನಟಿ ಸಿರಿ ಅಪೇಕ್ಷೆ ಮಾಡುತ್ತಾರೆ ಅದಕ್ಕಾಗಿಯೇ ಇಲ್ಲಿವರೆಗೂ ಮದುವೆಯಾಗಿರಲಿಲ್ಲ. ಸದ್ಯಕ್ಕೆ ನಟಿ ಸಿರಿ ಮದುವೆಯಾಗುವುದಕ್ಕೆ ರೆಡಿಯಾಗಿದ್ದಾರೆ ಅಂತೆ. ಆದಷ್ಟು ಬೇಗ ಅವರ ಮನಸ್ಸಿನ ಇಚ್ಛೆಯನ್ನು ಅರಿತು ನಡೆಯುವಂತಹ ಹುಡುಗ ಸಿಗಲಿ ಎನ್ನುವುದಾಗಿ ಹಾರೈಸೋಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.