ಸ್ವಲ್ಪ ಸ್ವಲ್ಪ ಕೂಡಿಟ್ಟರು, ನಿವೃತ್ತಿಯ ಹೊತ್ತಿಗೆ 1.5 ಕೋಟಿ ರೂಪಾಯಿ ಉಳಿಸಿ ನೆಮ್ಮದಿಯ ಜೀವನವನ್ನು ಕಳೆಯುವುದು ಹೇಗೆ ಗೊತ್ತೇ?? ತಿಂಗಳಿಗೆ ಚಿಲ್ಲರೆ ಹಾಕಿ,ಕೋಟಿ ಗಳಿಸಿ.

43

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಕೇವಲ ಜನರು ದಿನಗೂಲಿಯನ್ನು ಮಾಡಿ ನಮ್ಮ ದಿನಕ್ಕೆ ಖರ್ಚಿಗಾದರೆ ಸಾಕು ಎಂಬುದಾಗಿ ಅಂದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ನಿವೃತ್ತಿಯ ನಂತರದ ಜೀವನದ ಕುರಿತಂತೆ ಕೂಡ ಯೋಚಿಸಿ ಉಳಿತಾಯವನ್ನು ಮಾಡಲು ಪ್ರಾರಂಭಿಸಿದ್ದಾರೆ. ಇಂತಹ ಜನರಿಗಾಗಿಯೇ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳು ಪರಿಚಿತವಾಗುತ್ತಿವೆ. ಈ ವಿಚಾರದಲ್ಲಿ ಬೇರೆ ಯೋಜನೆಗಳಿಗಿಂತ ಪಿಪಿಎಫ್ ಅಂದರೆ ಸಾರ್ವಜನಿಕ ಭವಿಷ್ಯ ನಿಧಿ ಸಾಕಷ್ಟು ಲಾಭಕರವಾಗಿ ಹಾಗೂ ಅಪಾಯ ಮುಕ್ತವಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕ ಯೋಜನೆಯಲ್ಲಿ ಬಡಿದರ 7.1 ದರದಲ್ಲಿದೆ.

ಬೇರೆ ಕೆಲವೊಂದು ಯೋಜನೆಗಳು ಇದಕ್ಕಿಂತ ಹೆಚ್ಚಿನ ಲಾಭವನ್ನು ನೀಡಬಹುದು ಆದರೆ ಈ ಯೋಜನೆ ಸ್ಥಿರವಾಗಿದ್ದು ಯಾವುದೇ ಅಪಾಯವನ್ನು ಹೊಂದಿಲ್ಲದೆ ಅಪಾಯರಹಿತವಾಗಿದೆ. ತಿಂಗಳಿಗೆ 12500 ರೂಪಾಯಿ ಇಂದ 1.5 ಲಕ್ಷ ರೂಪಾಯಿಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ನೀವು ನಂತರ ಒಂದು ಕೋಟಿಗೂ ಅಧಿಕ ಕಾರ್ಪಸ್ ಅನ್ನು ಪಡೆಯಬಹುದಾಗಿದೆ. 7.10 ಪ್ರತಿಶತದಷ್ಟು ಲಾಭವನ್ನು ಕೂಡ ಈ ಸಂದರ್ಭದಲ್ಲಿ ನೀವು ಪಡೆಯಬಹುದಾಗಿದ್ದು ಹೂಡಿಕೆಯ ಸಮಯವನ್ನು ಐದು ವರ್ಷಗಳಿಗಿಂತ ಹೆಚ್ಚಾಗಿ ಕೂಡ ವಿಸ್ತರಿಸಬಹುದಾಗಿದೆ. ನೀವು 25 ರಿಂದ 30 ವರ್ಷದವರಾಗಿದ್ದರೆ ಐದು ವರ್ಷಗಳ ಹೂಡಿಕೆಯ ಅವಧಿಯನ್ನು ಮೂರು ಬ್ಲಾಕ್ ಗಳಲ್ಲಿ ವಿಸ್ತರಿಸಿದರೆ. ಸದ್ಯಕ್ಕಿರುವ 7.1 ಬಡ್ಡಿದರ ಆ ಸಂದರ್ಭದಲ್ಲಿಯೂ ಕೂಡ ಇದ್ದರೆ 30 ವರ್ಷಗಳಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿ ಹೂಡಿಕೆಯನ್ನು ಮಾಡಿದರೆ ನೀವು ಮೆಚುರಿಟಿ ಸಂದರ್ಭದಲ್ಲಿ 1.54 ಕೋಟಿ ರೂಪಾಯಿಯನ್ನು ಪಡೆಯಬಹುದಾಗಿದೆ.

ಪಿಪಿಎಫ್ ಯೋಜನೆ ಅಡಿಯಲ್ಲಿ ನೀವು ಈ ರೀತಿಯ ಹೂಡಿಕೆಯನ್ನು ಮಾಡಿದರೆ ನೀವು ಹಾಕಿರುವ ಹೂಡಿಕೆಯ ಬಂಡವಾಳಕ್ಕೆ ರಕ್ಷಣೆ ಸಿಗುತ್ತದೆ ಮಾತ್ರವಲ್ಲದೆ ಈ ಯೋಜನೆಯಲ್ಲಿ ನೀವು ಗಳಿಸುವ ಬಡ್ಡಿ ಹಾಗೂ ಆದಾಯಕ್ಕೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಬೇರೆ ಯೋಜನೆಗಳಿಗೆ ನೀವು ಆದಾಯ ಹಾಗೂ ಬಡ್ಡಿಗೆ ತೆರಿಗೆಯನ್ನು ಕಟ್ಟಬೇಕಾಗುತ್ತದೆ ಆದರೆ ಇದರಲ್ಲಿ ಅವುಗಳಿಂದ ನೀವು ಮುಕ್ತವಾಗಬಹುದಾಗಿದೆ. ಒಟ್ಟಾರೆಯಾಗಿ ನೀವು ನಿವೃತ್ತಿಯನ್ನು ಹೊಂದಿದ ನಂತರ ಈ ಯೋಜನೆಯಲ್ಲಿ ಮಾಡಿದ ಹೂಡಿಕೆಯಿಂದ ಪಡೆಯುವ ಹಣದಿಂದ ಸುಖಮಯ ನಿವೃತ್ತಿಯ ಜೀವನವನ್ನು ಜೀವಿಸಬಹುದಾಗಿದೆ.