ಇದೇನಪ್ಪ ಇದು, ಹೊಸ ವರಸೆ: ದರ್ಶನ್ ಗೆ ಭಯವಾಗುತ್ತಿದೆಯಂತೆ. ಕುದ್ದು ದರ್ಶನ್ ರವರೆ ಹೀಗೆ ಹೇಳಿದ್ದೇನು ಗೊತ್ತೇ?? ನೀವು ಡಿ ಬಾಸ್ ನಿಮಗೆ ಭಯವೇ??

18

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಏನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಾರಗಳಿಗಾಗಿ ಡಿ ಬಾಸ್ ಸುದ್ದಿಯಾಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕ್ರಾಂತಿ ಸಿನಿಮಾದ ವಿಚಾರವಾಗಿ ಹಾಗೂ ಮಾಧ್ಯಮಗಳ ಬಗ್ಗೆ ಸುದ್ದಿಯಾಗುತ್ತಿದ್ದರು.

ನಂತರದ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬಗ್ಗೆ ತಪ್ಪು ಹೇಳಿಕೆಯನ್ನು ನೀಡಿದ್ದಾರೆ ಎಂಬ ಅಪ್ಪು ಅಭಿಮಾನಿಗಳ ತಪ್ಪು ಕಲ್ಪನೆಗೆ ಗುರಿಯಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದು ಕೂಡ ಸಾಕಷ್ಟು ವಿವಾ’ದಾತ್ಮಕ ರೀತಿಯಲ್ಲಿ ಈಗ ಸುದ್ದಿ ಆಗುತ್ತಿದ್ದು ಇದಾದ ನಂತರವೂ ಕೂಡ ಕೆಲವೊಂದು ವಿಚಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದರ್ಶನ್ ರವರು ಕಾಂಟ್ರ’ವರ್ಸಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ರವರು ಅಪ್ಪು ಅವರ ಮೇಲೆ ಎಷ್ಟೊಂದು ಪ್ರೀತಿ ಹಾಗೂ ಗೌರವಗಳನ್ನು ಇಟ್ಟಿದ್ದರು ಎಂಬುದು ನಮಗೆಲ್ಲ ತಿಳಿದಿದೆ. ಅದನ್ನು ಬಿಡಿ ಇತ್ತೀಚಿಗಷ್ಟೇ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಆಚರಣೆಯ ಸಂಭ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಲೇಔಟ್ ನಲ್ಲಿ ತಿರಂಗ ರಾಗ ಎನ್ನುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಭಾಗಿಯಾಗಿದ್ದಾರೆ.

ಈ ಸಂದರ್ಭದಲ್ಲಿ ದರ್ಶನ್ ರವರು ನನಗೆ ಮಾತನಾಡುವುದಕ್ಕೆ ಭ’ಯ ಆಗುತ್ತದೆ ಯಾಕೆಂದರೆ ನಾನು ಏನೇ ಮಾತನಾಡಿದರು ಕೂಡ ಅದು ಕಾಂಟ್ರವರ್ಸಿ ಆಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೇವಲ ಮಹಾತ್ಮ ಗಾಂಧೀಜಿ ಮಾತ್ರವಲ್ಲದೆ ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗವನ್ನು ನೀಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ನಾವು ಸ್ಮರಿಸಬೇಕಾಗಿದೆ ಎಂಬುದಾಗಿ ದರ್ಶನ್ ರವರು ಹೇಳಿದ್ದಾರೆ. ದರ್ಶನ್ ರವರ ಕುರಿತಂತೆ ಯಾರೇ ಕೂಡ ತಪ್ಪಾಗಿ ಅರ್ಥೈಸಿಕೊಂಡಿದ್ದರು ಕೂಡ ಅವರು ನೋಡುವುದಕ್ಕೆ ರಫ್ ಅಂಡ್ ಟಫ್ ಆಗಿದ್ದರೂ ಕೂಡ ಪ್ರತಿಯೊಬ್ಬರ ಬಗ್ಗೆ ಒಳ್ಳೆಯದನ್ನೇ ಯೋಚಿಸುವ ಹಾಗೂ ಒಳ್ಳೆಯದನ್ನೇ ಮಾಡುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದನ್ನು ನಾವೆಲ್ಲ ಅರ್ಪಿಸಿಕೊಳ್ಳಬೇಕಾಗಿದೆ.