ಮೊದಲ ಬಾರಿಗೆ ತಾಯಿಯಾಗುತ್ತಿರುವ ಬಾಲಿವುಡ್ ಖ್ಯಾತ ನಟಿ ಬಿಪಾಶಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಈ ವಯಸ್ಸಿಗೆ ಮಕ್ಕಳ??

277

ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗ ಮೊದಲಿನಿಂದಲೂ ಕೂಡ ಗ್ಲಾಮರಸ್ ನಟಿಯರಿಗೆ ಹೆಸರುವಾಸಿಯಾದ ಚಿತ್ರರಂಗ ಎಂದರು ತಪ್ಪಾಗಲಾರದು. ಯಾಕೆಂದರೆ ಮೊದಲಿನಿಂದಲೂ ಕೂಡ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಾಲಿವುಡ್ ನಟಿಯರು ಬಂದು ಹೋಗುವುದು ನಡೆಯುತ್ತಲೇ ಇತ್ತು. ಇನ್ನು ನಾವು ಅದೇ ಗ್ಲಾಮರಸ್ ನಟಿಯೊಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ, ಬಾಲಿವುಡ್ ಚಿತ್ರರಂಗದ ಗ್ಲಾಮರಸ್ ನಟಿ ಆಗಿರುವ ಬಿಪಾಶ ಬಾಸು ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ನಟಿ ಬಿಪಾಶ ಬಾಸು ರವರು 2015ರಲ್ಲಿ ಸಿನಿಮಾದ ಚಿತ್ರೀಕರಣದ ಸೆಟ್ ಒಂದರಲ್ಲಿ ಕರಣ್ ಸಿಂಗ್ ಗ್ರೋವರ್ ರವರನ್ನು ಭೇಟಿಯಾಗಿ ಇಬ್ಬರು ಕೂಡ ಪರಸ್ಪರ ಪ್ರೀತಿಸಿ 2016ರಲ್ಲಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಈ ಮದುವೆಗೆ ಅಭಿಷೇಕ್ ಬಚ್ಚನ್ ಸಲ್ಮಾನ್ ಖಾನ್ ಐಶ್ವರ್ಯ ರೈ ಸೇರದಂತೆ ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ನಟಿಯರು ಆಗಮಿಸಿದ್ದರು. 2016 ರ ನಂತರ ಬಿಪಾಶ ಬಾಸು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿ ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಅವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದರು. ಆದರೆ ಈಗ ಅಂದರೆ ಆಗಸ್ಟ್ 16ರಂದು ತಮ್ಮ ಜೀವನದ ಮಹತ್ವದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಬಿಪಾಶ ಬಾಸು ಹಾಗೂ ಅವರ ಪತಿ ಕರಣ್ ಸಿಂಗ್ ಗ್ರೋವರ್ ಸೋಶಿಯಲ್ ಮೀಡಿಯಾದಲ್ಲಿ ಭಿಪಾಷಾ ಗರ್ಭಿಣಿ ಆಗಿರುವ ಫೋಟೋಶೂಟ್ ಅನ್ನು ಹಂಚಿಕೊಂಡು ಅತಿ ಶೀಘ್ರದಲ್ಲೇ ತಾವು ತಾಯಿಯಾಗುತ್ತಿರುವ ವಿಚಾರದ ಕುರಿತಂತೆ ಸಂತೋಷದಿಂದ ಹಂಚಿಕೊಂಡಿದ್ದಾರೆ.

ಇನ್ನು ಬಿಪಾಶ ತಾಯಿ ಆಗುತ್ತಿರುವ ವಯಸ್ಸು ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಲಿವುಡ್ ಚಿತ್ರರಂಗದ ಗ್ಲಾಮರಸ್ ನಟಿ ಬಿಪಾಷ ತಮ್ಮ 43ನೇ ವಯಸ್ಸಿನಲ್ಲಿ ಈಗ ತಾಯಿಯಾಗಲು ಹೊರಟಿದ್ದಾರೆ. ಇದು ಈಗ ಎಲ್ಲಾ ಕಡೆ ಚರ್ಚೆ ಆಗುತ್ತಿದ್ದು ಈ ವಯಸ್ಸಿನಲ್ಲಿ ತಾಯಿಯಾಗುವುದು ಬೇಕಿತ್ತಾ ಎಂಬುದಾಗಿ ಕೂಡ ಕೆಲವರು ಮೂಗು ಮುರಿದಿದ್ದಾರೆ. ಅದೇನೆ ಇರಲಿ ಬಿಪಾಶ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ದಂಪತಿಗಳು ಅತಿ ಶೀಘ್ರದಲ್ಲೇ ಪೋಷಕರ ಪಟ್ಟವನ್ನೇರಲಿ ಎಂಬುದಾಗಿ ಹಾರೈಸೋಣ.