ಆಂಧ್ರಪ್ರದೇಶ ದಲ್ಲಿ ಕಣ್ಣಿನ ಆಸ್ಪತ್ರೆಗೆ ದೇಣಿಗೆ ಕೊಟ್ಟ ಪ್ರಶಾಂತ್ ನೀಲ್: ಕೊಟ್ಟಿದ್ದು ಎಷ್ಟು ಲಕ್ಷ ಗೊತ್ತೇ?? ಎದ್ದು ನಿಂತು ಸಲ್ಯೂಟ್ ಮಾಡುತ್ತೀರಿ.

10

ನಮಸ್ಕಾರ ಸ್ನೇಹಿತರೆ ಮೊಟ್ಟಮೊದಲಿಗೆ ಪ್ರಶಾಂತ್ ನೀಲ್ ರವರು ನಮ್ಮೆಲ್ಲರಿಗೂ ಪರಿಚಿತರಾಗಿದ್ದು ಉಗ್ರಂ ಚಿತ್ರದ ನಿರ್ದೇಶಕರಾಗಿ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಹೆಂಡತಿಯ ಅಣ್ಣನಾಗಿ. ಆದರೆ ಈಗ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿ ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾಗುವ ಮೂಲಕ ತಮ್ಮದೇ ಆದಂತಹ ಗುರುತನ್ನು ಹೊಂದಿದ್ದಾರೆ. ನಿಜಕ್ಕೂ ಕೂಡ ಕೇವಲ ಮೂರು ಸಿನಿಮಾಗಳ ಅವಧಿಯಲ್ಲಿ ಪ್ರಶಾಂತ್ ನೀಲ್ ರವರು ತಮ್ಮ ಬೇಡಿಕೆಯನ್ನು ಭಾರತ ಚಿತ್ರರಂಗದಾದ್ಯಂತ ಹೆಚ್ಚಿಸಿಕೊಂಡಿರುವ ಪರಿ ನೋಡಿದರೆ ನಿಜಕ್ಕೂ ಕೂಡ ಕನ್ನಡಿಗರಾಗಿ ನಮಗೆ ಹೆಮ್ಮೆ ಆಗುತ್ತದೆ.

ಹಲವಾರು ಜನರಿಗೆ ಅವರು ಆಂಧ್ರಪ್ರದೇಶದವರು ಎನ್ನುವುದು ತಿಳಿದಿರಲಿಕ್ಕಿಲ್ಲ. ಹೌದು ಫ್ರೆಂಡ್ಸ್ ಪ್ರಶಾಂತ್ ನೀಲ್ ರವರು ಆಂಧ್ರಪ್ರದೇಶದ ನೀಲಕಂಠಂಪುರಂ ನಲ್ಲಿ ಜನಿಸಿದವರು. ಇಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಿರ್ದೇಶನದ ಮೂಲಕ ಹಲ್ಚಲ್ ಸೃಷ್ಟಿಸುತ್ತಿರುವ ಪ್ರಶಾಂತ್ ನೀಲ್ ಮೂಲತಃ ತೆಲುಗು ನವರಾದರು ಕೂಡ ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದವರು. ಇನ್ನು ತಮ್ಮ ತಂದೆ ಸುಭಾಷ್ ರವರ 75ನೇ ಜನ್ಮ ಜಯಂತಿಯ ವಿಶೇಷವಾಗಿ ತಮ್ಮ ಹುಟ್ಟೂರಿನಲ್ಲಿ ಒಂದು ಮಹತ್ ಕಾರ್ಯಕ್ಕಾಗಿ ದೊಡ್ಡ ಮಟ್ಟದ ದೇಣಿಗೆ ಹಣವನ್ನು ಪ್ರಶಾಂತ್ ನೀಲ್ ರವರು ನೀಡಿದ್ದಾರೆ. ಇದನ್ನು ಅವರ ತಂದೆಯ ಸಹೋದರ ಆಗಿರುವ ಹಾಗೂ ಮಾಜಿ ಸಚಿವ ಆಗಿರುವ ಡಾ ಎನ್ ರಘುವೀರ್ ರೆಡ್ಡಿ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ರವರು ತಮ್ಮ ಹುಟ್ಟೂರಾಗಿರುವ ನೀಲಕಂಠಂಪುರಂ ನ ಕಣ್ಣಿನ ಆಸ್ಪತ್ರೆಯ ನಿರ್ಮಾಣಕ್ಕಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ ಎಂಬುದಾಗಿ ಅಧಿಕೃತವಾಗಿ ತಿಳಿದು ಬಂದಿದೆ. ಯಾರಿಗೂ ತಿಳಿಯದ ಹಾಗೆ ಜನಸೇವೆಯಲ್ಲಿ ಕೂಡ ಪ್ರಶಾಂತ್ ನೀಲ್ ರವರು ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಪ್ರಶಂಶಿಸುವ ಸಮಾಚಾರವಾಗಿದೆ. ಸದ್ಯಕ್ಕೆ ಪ್ರಭಾಸ್ ರವರ ಸಲಾರ್ ಸಿನಿಮಾವನ್ನು ನಿರ್ದೇಶಿಸುತ್ತಿರುವ ಪ್ರಶಾಂತ್ ಅನಿಲ್ ಮುಂದಿನ ದಿನಗಳಲ್ಲಿ ಜೂನಿಯರ್ ಎನ್ಟಿಆರ್ ರವರ ಸಿನಿಮಾವನ್ನು ಕೂಡ ನಿರ್ದೇಶಸಲಿದ್ದಾರೆ.