ಒಂದರ ಮೇಲೊಂದು ಸೋಲಿನಿಂದ ಕಂಗೆಟ್ಟಿರುವ ಕೀರ್ತಿ ಸುರೇಶ್ ರವರ ಕಡೆಯಿಂದ ಬಂತು ಮತ್ತೊಂದು ನಿರ್ಧಾರ. ಏನು ಗೊತ್ತೇ??

84

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಹಿಂದಿನ ಕಾಲದ ನಟಿಯರ ಹಾಗೆ ತಮ್ಮ ಅಭೂತಪೂರ್ವ ನಟನೆಯ ಮೂಲಕವೇ ಅಭಿಮಾನಿಗಳನ್ನು ಹೊಂದಿರುವ ನಟಿಯರು ಸಿಗುವುದು ಅತ್ಯಂತ ವಿರಳಾತಿ ವಿರಳ ಎಂದು ಹೇಳಿದರು ಕೂಡ ತಪ್ಪಾಗಲಾರದು. ಆದರೆ ಅಂತಹ ನಟಿಯರಲ್ಲಿ ವಿಶೇಷ ಸ್ಥಾನದಲ್ಲಿ ಈ ಒಬ್ಬ ನಟಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ತೆಲುಗಿನ ಮಹಾನಟಿ ಸಿನಿಮಾದ ಮೂಲಕ ಇತ್ತೀಚಿನ ನಟಿಯರಿಗೆ ನಟನೆ ಎಂದರೆ ಏನು ಎಂಬುದಾಗಿ ಹೇಳಿಕೊಟ್ಟವರು ನಟಿ ಕೀರ್ತಿ ಸುರೇಶ್ ಎಂದರೆ ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕು.

ಇದಕ್ಕಾಗಿ ಅವರು ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಕೀರ್ತಿ ಸುರೇಶ್ ತೆಲುಗಿಗೆ ಬಂದ ಮೇಲೆ ಅವರ ಅದೃಷ್ಟವೇ ಬದಲಾಗಿ ಹೋಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಕೀರ್ತಿ ಸುರೇಶ್ ಸಾಲು ಸಾಲು ಸೋಲುಗಳಿಂದ ಕಂಗಟ್ಟಿದ್ದಾರೆ. ಮಹೇಶ್ ಬಾಬು ಜೊತೆಗೆ ನಟಿಸಿರುವ ಸರ್ಕಾರು ವಾರಿ ಪಾಠ ಎನ್ನುವ ಸಿನಿಮಾ ಸಮಾಧಾನಕರ ಪ್ರದರ್ಶನ ನೀಡಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ. ತಮ್ಮ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಸೋಲುತ್ತಿರುವ ಹಿನ್ನೆಲೆಯಲ್ಲಿ ಕೀರ್ತಿ ಸುರೇಶ್ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವ ಹಾಗೂ ಇನ್ನಷ್ಟು ಮಹತ್ವದ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರಲಿರುವ ಸಿನಿಮಾಗೆ ನಾಯಕಿಯಾಗಿ ಕೀರ್ತಿ ಸುರೇಶ್ ಸೇರಿಕೊಂಡಿದ್ದಾರಂತೆ. ಸೂರರೈ ಪೊಟ್ರು ಸಿನಿಮಾವನ್ನು ನಿರ್ದೇಶನ ಮಾಡಿರುವ ಸುಧಾ ಕೊಂಗಾರ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೆಸರಿಡದ ಸಿನಿಮಾಾಗೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಬಲವಾದ ಮಾಹಿತಿಗಳು ಕೇಳಿ ಬರುತ್ತಿದೆ. ಪರಭಾಷೆಗಳಲ್ಲಿ ಕೂಡ ನಮ್ಮ ಕನ್ನಡದ ಹೆಮ್ಮೆಯ ಸಿನಿಮ ನಿರ್ಮಾಣ ಸಂಸ್ಥೆ ಸಿನಿಮಾಗಳನ್ನು ಮಾಡಲು ಪ್ರಾರಂಭಿಸಿದ್ದು ನಿಜಕ್ಕೂ ಕೂಡ ಕನ್ನಡಿಗರು ಹೆಮ್ಮೆಪಡುವಂತಹ ಸಂಗತಿ ಎಂದು ಹೇಳಬಹುದು. ಕೀರ್ತಿ ಸುರೇಶ್ ಅವರಿಗೂ ಕೂಡ ಬೇಕಾಗಿರುವ ಗೆಲುವು ಇವರ ಮೂಲಕವೇ ಸಿಗಲಿ ಎಂಬುದಾಗಿ ಹಾರೈಸೋಣ.