ಮದಕರಿ ನಾಯಕ ಸಿನೆಮಾವನ್ನು ಅರ್ಧಕ್ಕೂ ನಿಲ್ಲಿಸಿದ ದರ್ಶನ್, ಅದಕ್ಕೂ ಮುನ್ನವೇ D56 ಸಿನೆಮಾವನ್ನು ಆರಂಭ ಮಾಡಿದ್ದು ಯಾಕೆ ಗೊತ್ತೇ??

150

ನಮಸ್ಕಾರ ಸ್ನೇಹಿತರೇ ಇತಿಹಾಸ ಕಂಡ ಕದನ ಕಲಿ ವೀರಗಣಿ ಎಂದು ಬಿರುದಾಂಕಿತ ಮದಕರಿ ನಾಯಕರ ಜೀವನ ಚರಿತ್ರೆಯ ಕುರಿತಂತೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ನಿರ್ದೇಶನದಲ್ಲಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಸಿನಿಮಾ ಘೋಷಣೆಯಾಗಿ ಮೊದಲ ಹಂತದ ಚಿತ್ರೀಕರಣವನ್ನು ಕೂಡ ಮುಗಿಸಿತ್ತು.

ಚಿತ್ರದಲ್ಲಿ ನಾಯಕಿಯಾಗಿ ನಯನತಾರ ಕಾಣಿಸಿಕೊಳ್ಳುತ್ತಾರೆ ಪರಭಾಷೆ ಖ್ಯಾತ ನಟಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗೆಲ್ಲ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ಪಂಚಭಾಷೆ ಚಿತ್ರವಾಗಿ ರೆಡಿಯಾಗಲಿದೆ ಎಂಬುದಾಗಿ ದೊಡ್ಡ ಮಟ್ಟದಲ್ಲಿ ಬೇರೆ ಭಾಷೆಗಳಲ್ಲಿ ಕೂಡ ಸುದ್ದಿ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈ ವರ್ಷ ಬಿಡುಗಡೆ ಆಗಬೇಕಾಗಿತ್ತು.

ಆದರೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ನಟನೆಯ 56ನೇ ಸಿನಿಮಾದ ಮುಹೂರ್ತ ಪೂಜೆ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಆಗಿರುವ ರಾಕ್ಲೈನ್ ವೆಂಕಟೇಶ್ ರವರು ಈ ಸಿನಿಮಾ ವಿಳಂಬ ಆಗುತ್ತಿರುವುದಕ್ಕೆ ಕಾರಣ ಏನೆಂದು ಸಂಪೂರ್ಣ ವಿವರವಾಗಿ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಹಾಗಿದ್ದರೆ ಯಾಕೆ ಚಿತ್ರತಂಡ, ಅದರಲ್ಲಿ ವಿಶೇಷವಾಗಿ ಚಿತ್ರದ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ರವರು ಯಾಕೆ ರಾಜವೀರ ಮದಕರಿ ನಾಯಕ ಸಿನಿಮಾವನ್ನು ಅರ್ಧದಲ್ಲಿ ನಿಲ್ಲಿಸಿ, ದರ್ಶನ್ ರವರ 56ನೇ ಸಿನಿಮಾ ವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲಾಕ್ ಡೌನ್ ಗೂ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಟನೆಯ ರಾಜ ವೀರ ಮದಕರಿ ನಾಯಕ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿತ್ತು. ಒಂದೇ ಜಾಗದಲ್ಲಿ 400 ರಿಂದ 500 ಕಲಾವಿದರು ತಂತ್ರಜ್ಞರು ಹಾಗೂ ಕೆಲಸಗಾರರು ಕೆಲಸ ಮಾಡುವ ಚಿತ್ರೀಕರಣ ಅದಾಗಿತ್ತು. ಈಗ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪರಿಸ್ಥಿತಿ ಅಷ್ಟೊಂದು ಅನುಕೂಲಕರವಾಗಿಲ್ಲ ಮಹಾಮಾರಿಯ ಕಾರಣದಿಂದಾಗಿ ಯಾವ ಸಮಯದಲ್ಲಿ ಕೂಡ ಚಿತ್ರೀಕರಣ ರದ್ದಾಗಬಹುದಾದ ಪರಿಸ್ಥಿತಿ ಈಗ ಕಂಡು ಬರುತ್ತಿದೆ.

ಇದೇ ಕಾರಣಕ್ಕಾಗಿ ರಾಕ್ ಲೈನ್ ವೆಂಕಟೇಶ್ ರವರು ಈ ಚಿತ್ರೀಕರಣವನ್ನು ಮುಂದುವರಿಸುವುದು, ಅಷ್ಟೊಂದು ಸಮಾಜಸವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು ಬೇರೆ ಸಿನಿಮಾವನ್ನು ಕೈಗೆತ್ತಿಕೊಳ್ಳೋಣ ಎಂಬುದಾಗಿ ನಿರ್ಧರಿಸಿದ್ದರು. ದರ್ಶನ್ ರವರು ಈಗಾಗಲೇ ತರುಣ್ ಸುಧೀರ್ ರವರು ಹೇಳಿರುವ ಕಥೆಯನ್ನು ಮೆಚ್ಚಿ ಒಪ್ಪಿದ್ದರು ಅದನ್ನೇ ರಾಕ್ ಲೈನ್ ವೆಂಕಟೇಶ್ ರವರಿಗು ಕೂಡ ಕೇಳಲು ಸಲಹೆ ನೀಡಿದ್ದರು. ದರ್ಶನ್ ರವರೆ ಒಪ್ಪಿ ಮೆಚ್ಚಿದ್ದಾರೆ ಎಂದ ಮೇಲೆ ರಾಕ್ ಲೈನ್ ವೆಂಕಟೇಶ್ ರವರು ಕೂಡ ಕಥೆಯನ್ನು ಮೆಚ್ಚಿ ಮೊದಲ ಕೇಳುವಿಕೆಯಲ್ಲಿ ಗ್ರೀನ್ ಸಿಗ್ನಲ್ ನೀಡಿದ್ದರು.

ಹೀಗೆ ರಾಜ ವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ನಡೆಯಬೇಕಿದ್ದ ಸಂದರ್ಭದಲ್ಲಿ ಅದನ್ನು ಮುಂದುವರಿಸಲು ಸದ್ಯದ ಪರಿಸ್ಥಿತಿ ಅನಾನುಕೂಲವಾಗಿದ್ದ ಕಾರಣದಿಂದಾಗಿ ಹಾಗೂ ತರುಣ್ ಸುಧೀರ್ ರವರು ಹೇಳಿದ ಕಥೆ ಚೆನ್ನಾಗಿದ್ದ ಕಾರಣದಿಂದಾಗಿಯೇ ರಾಜ ವೀರ ಮದಕರಿ ನಾಯಕ ಸಿನಿಮಾದ ಬದಲು ದರ್ಶನ್ ರವರ 56ನೇ ಸಿನಿಮಾದ ಚಿತ್ರೀಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಹಲವಾರು ಅಭಿಮಾನಿಗಳು ರಾಜ ವೀರ ಮದಕರಿ ನಾಯಕ ಸಿನಿಮಾದ ಚಿತ್ರಿಕರಣ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎಂಬುದಾಗಿ ಭಾವಿಸಿದ್ದರು ಅವರಿಗೆ ಈ ಉತ್ತರ ಪೂರ್ಣ ಗೊಂದಲವನ್ನು ಪರಿಹರಿಸಲಿದೆ ಎಂಬುದಾಗಿ ಭಾವಿಸುತ್ತೇವೆ. ಇನ್ನು ದರ್ಶನ್ ರವರ 56ನೇ ಸಿನಿಮಾದ ನಾಯಕಿಯಾಗಿ ಮಾಲಾಶ್ರೀ ಅವರ ಮಗಳು ರಾಧನ ಅವರು ಆಯ್ಕೆಯಾಗಿದ್ದಾರೆ. ಈ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಇದ್ದು ನಿಮ್ಮ ಅಭಿಪ್ರಾಯವನ್ನು ಕೂಡ ಕಾಮೆಂಟ್ ಮೂಲಕ ತಿಳಿಸಿ.