ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ ತಯಾರಿ ನಡೆಸಿದ ಅಂಬಾನಿ. ತಿಳಿದರೆ ಇರುವ ಫೋನ್ ಬಿಸಾಕಿ ಇದನ್ನು ತೆಗೆದುಕೊಳ್ಳುತ್ತೀರಿ.

57

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರಗಳನ್ನು ಖಾಸಗಿ ಸಂಸ್ಥೆಗಳೇ ಸಂಪೂರ್ಣವಾಗಿ ಕಬ್ಜ ಮಾಡಿಕೊಂಡಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಖಾಸಗಿ ಕಂಪನಿಗಳಾಗಿರುವ ಜಿಯೋ ವಿಐ ಹಾಗೂ ಏರ್ಟೆಲ್ ಸಂಸ್ಥೆಗಳು 5ಜಿ ಸೇವೆಯನ್ನು ಈಗಾಗಲೇ ಪ್ರಯೋಗಾತ್ಮಕವಾಗಿ ಪ್ರಯೋಗಿಸಿ ಅತಿ ಶೀಘ್ರದಲ್ಲಿ ಜಾರಿಗೆ ತರಲು ಕೂಡ ಸಿದ್ಧತೆಯನ್ನು ಸಂಪೂರ್ಣವಾಗಿ ನಡೆಸಿಕೊಂಡಿವೆ ಎಂಬುದಾಗಿ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಮಾನವನಿಗೆ ಏನಿಲ್ಲವೆಂದರೂ ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಸೇವೆ ಬೇಕೇ ಬೇಕಾಗಿದೆ.

ಇನ್ನು ರಿಲಯನ್ಸ್ ಹೊಡೆತನದ ಜಿಯೋ ಸಂಸ್ಥೆ ಅತಿ ಶೀಘ್ರದಲ್ಲೇ 5ಜಿ ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದೆ. ಕೆಲವು ಮಾಹಿತಿಗಳ ಪ್ರಕಾರ ಜಿಯೋ ಸಂಸ್ಥೆ ಪರಿಚಯಿಸಲಿರುವ 5ಜಿ ಫೋನ್ ನ ಬೆಲೆ ಕೇವಲ 12000 ಮಾತ್ರ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ವರದಿಗಳ ಪ್ರಕಾರ ಈ ಫೋನಿನ ಬೆಲೆ ಕೇವಲ ಎರಡುವರೆ ಸಾವಿರ ಮಾತ್ರ ಎಂಬುದಾಗಿ ಕೂಡ ಹೇಳಲಾಗುತ್ತಿದೆ. ಈಗಾಗಲೇ ಟೆಲಿಕಾಂ ಸೇವೆಯ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದ ಮಾರುಕಟ್ಟೆಯನ್ನು ಕ್ಯಾಪ್ಚರ್ ಮಾಡಿಕೊಂಡಿರುವ ಜಿಯೋ ಸಂಸ್ಥೆ 5ಜಿ ಫೋನ್ ಗಳನ್ನು ಮಾರುಕಟ್ಟೆಗೆ ತರುವ ಮೂಲಕ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಕೂಡ ತನ್ನ ಪಾರುಪತ್ಯವನ್ನು ಸಾಧಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೆಲವೊಂದು ಸುದ್ದಿಗಳ ಪ್ರಕಾರ ಮೊದಲಿಗೆ 2500 ರೂಪಾಯಿಗಳನ್ನು ಅಡ್ವಾನ್ಸ್ ಪೇಮೆಂಟ್ ಮಾಡಿದ ನಂತರವೇ ಇಎಂಐ ಮೂಲಕ ಫೋನ್ ನ ಪಾವತಿ ಮಾಡಬಹುದಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.

ಈ ತರಹ ಮಾಡಿದರೆ ಅತ್ಯಂತ ಹಗ್ಗದ ಅದರಲ್ಲೂ ಕೂಡ 5ಜಿ ಫೋನ್ ಅನ್ನು ಪರಿಚಯಿಸಿದ ಹೆಗ್ಗಳಿಕೆಗೆ ಜಿಯೋ ಸಂಸ್ಥೆ ಪಾತ್ರವಾಗಲಿದೆ. ಕ್ಯಾಮೆರಾ ಕ್ಲಾರಿಟಿ ಬಗ್ಗೆ ಮಾತನಾಡುವುದಾದರೆ ಪ್ರೈಮರಿ ಕ್ಯಾಮೆರ 13 ಮೆಗಾ ಪಿಕ್ಸೆಲ್ ಎರಡನೇ ಲೆನ್ಸ್ ಎರಡು ಮೆಗಾ ಪಿಕ್ಸೆಲ್ ಕ್ಲಾರಿಟಿಯನ್ನು ಹೊಂದಿರುತ್ತದೆ. ಸೆಲ್ಫಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಲಾರಿಟಿಯನ್ನು ಹೊಂದಿರುತ್ತದೆ. 6.5 ಹೆಚ್ ಡಿ ಸ್ಕ್ರೀನ್ ಅನ್ನು ಹೊಂದಿದೆ. ನಾಲ್ಕು ಜಿಬಿ ರಾಮ್ ಹಾಗೂ 32 ಜಿಬಿ ಸ್ಟೋರೇಜ್ ಇರುತ್ತದೆ. ಈ ಫೋನ್ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬುದನ್ನ ಈಗಾಗಲೇ ಗ್ರಾಹಕರು ಕಾಯುತ್ತಿದ್ದಾರೆ.