ವೈವಾಹಿಕ ಜೀವನ ಸರಿ ಇಲ್ಲ ಎಂದವರಿಗೆ ಒಮ್ಮೆಲೇ ಖಡಕ್ ಉತ್ತರ ನೀಡಿದ ದರ್ಶನ್: ತಿರುಗೇಟು ಕೊಟ್ಟದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೀವನ ಎನ್ನುವುದು ಖಂಡಿತವಾಗಿ ಒಂದು ದೊಡ್ಡ ಮಟ್ಟದ ಚಾಲೆಂಜ್ ಅನ್ನು ಎದುರಿಸಿರುವ ಜೀವನ ಎಂದರೆ ತಪ್ಪಾಗಲಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಾಗಿ ಹಾಗೂ ಸಿನಿಮಾಗಳಿಗಾಗಿ ಎಷ್ಟು ದೊಡ್ಡಮಟ್ಟಿಗೆ ಸುದ್ದಿಯನ್ನು ಮಾಡಿದ್ದಾರೋ, ಈ ಹಿಂದೆ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಒಂದು ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ವೈ ಮನಸಿನ ಕಾರಣದಿಂದಾಗಿ ಇವರಿಬ್ಬರು ಬೇರೆ ಆಗುವಷ್ಟರ ಮಟ್ಟಿಗೆ ಹಾಗೂ ಡಿ ಬಾಸ್ ಜೈಲು ಪಾಲಾಗುವ ಹಾಗೂ ಕೂಡ ಆಗಿತ್ತು. ಆದರೆ ಈಗ ಇವರಿಬ್ಬರ ನಡುವೆ ಇರುವಂತಹ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರ ಕಂಡಿದ್ದು ತಮ್ಮ ಮಗನಿಗಾಗಿ ಮತ್ತೆ ದಂಪತಿಗಳಿಬ್ಬರು ಒಟ್ಟಾಗಿ ಜೀವಿಸುತ್ತಿದ್ದಾರೆ ಹಾಗೂ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಆದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡಿ ಬಾಸ್ ತಮ್ಮ ಹೆಚ್ಚಿನ ಸಮಯವನ್ನು ಸಿನಿಮಾ ಚಿತ್ರೀಕರಣದಲ್ಲಿ ಕಳೆಯುತ್ತಾರೆ ಹೀಗಾಗಿ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದಾಗಿ ಮಾತನಾಡಿಕೊಳ್ಳುವಂತಾಗಿದೆ. ಇದಕ್ಕೆ ಡಿ ಬಾಸ್ ರವರು ಸರಿಯಾದ ತಿರುಗೇಟನ್ನೇ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ತಮ್ಮ ಪತ್ನಿ ಹಾಗೂ ಪುತ್ರನನ್ನು ಕರೆದುಕೊಂಡು ಕಬಿನಿಯ ಪ್ರವಾಸಕ್ಕೆ ತೆರಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಡುತ್ತಿರುವ ಸುಳ್ಳು ಸುದ್ದಿಗಳು ಕೇವಲ ಬೋಗಸ್ ಎಂಬುದನ್ನು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಆಗದವರು ಏನು ಬೇಕಾದರೂ ಹರಡಬಹುದು ಆದರೆ ಕುಟುಂಬಕ್ಕೆ ಡಿ ಬಾಸ್ ನೀಡುವ ಮೌಲ್ಯ ಹಾಗೂ ಗೌರವ ಮತ್ತು ಪ್ರೀತಿ ನಿಜಕ್ಕೂ ಅನಂತ. ಇದನ್ನು ಅವರು ಸಾಬೀತುಪಡಿಸಬೇಕಾದ ಅಗತ್ಯ ಖಂಡಿತ ಇಲ್ಲ ಯಾಕೆಂದರೆ ಅವರ ಕುಟುಂಬಕ್ಕೆ ಅದು ತಿಳಿಯಬೇಕಾಗಿದೆ ಹಾಗೂ ಅದು ಅವರಿಗೆ ತಿಳಿದಿದೆ.