ಬಿಗ್ ಬಾಸ್ ಮನೆಯಿಂದ ಮೊದಲ ವಾರದಲ್ಲಿಯೇ ಹೊರ ಹೋಗಿರುವ ಕಿರಣ್ ರವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?? ಒಂದು ವಾರಕ್ಕೆ ಇಷ್ಟೊಂದಾ?

45

ನಮಸ್ಕಾರ ಸ್ನೇಹಿತರೇ ಯಾವಾಗ ಬಿಗ್ ಬಾಸ್ ಪ್ರಾರಂಭವಾಗುತ್ತದೆ ಎಂಬುದಾಗಿ ಪ್ರೇಕ್ಷಕರು ಕಾಯುತ್ತಿದ್ದರು ಅದೇ ಕಾಯುವಿಕೆಯಲ್ಲಿ ಆಗಸ್ಟ್ 6ರಿಂದಲೇ ಕಾರ್ಯಕ್ರಮ ಓಟಿಟಿಯಲ್ಲಿ ಕೂಡ ಪ್ರಸಾರವನ್ನು ಅದಾಗಲೇ ಪ್ರಾರಂಭಿಸಿದೆ. ಪ್ರಾರಂಭಿಸಿದ ಮೊದಲ ವಾರ ಮುಗಿದಿದ್ದು ಒಂದು ಎಲಿಮಿನೇಷನ್ ಕೂಡ ಈಗಾಗಲೇ ಆಗಿದೆ. ಸಮಯ ಎಷ್ಟು ಬೇಗ ಓಡುತ್ತಿದೆ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ಪ್ರಸಾರವನ್ನು ವೂಟ್ ಅಪ್ಲಿಕೇಶನ್ ನಲ್ಲಿ ತೋರಿಸುತ್ತಿದ್ದ ಬಿಗ್ ಬಾಸ್ ಈಗಾಗಲೇ ತನ್ನ ಮೊದಲ ವಾರದ ಎಲಿಮಿನೇಷನ್ ಅನ್ನು ಅದಾಗಲೇ ಪೂರೈಸಿದೆ.

ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಎಲಿಮಿನೇಷನ್ ವಾರದಲ್ಲಿ ಮನೆಯಿಂದ ಹೊರಹೋದ ಸ್ಪರ್ಧಿ ಎಂದರೆ ಅದು ಕಿರಣ್ ಯೋಗೇಶ್ವರ್. ಹೌದು ಕಿರಣ್ ಯೋಗೇಶ್ವರ್ ಅವರು ಮನೆಯ ಸ್ಪರ್ಧಿಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಕೂಡ ಪ್ರೇಕ್ಷಕರಿಗೆ ಅವರು ಇಷ್ಟ ಆಗಿಲ್ಲ ಎಂದು ಕಾಣಿಸುತ್ತೆ ಅದಕ್ಕೆ ಮೊದಲ ವಾರದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿ ಎಷ್ಟೇ ಉತ್ತಮವಾಗಿ ಪ್ರದರ್ಶನ ನೀಡಿದರು ಕೂಡ ಪ್ರೇಕ್ಷಕರ ಮನಸ್ಸಿಗೆ ಅವರು ಇಷ್ಟ ಆಗಿಲ್ಲ ಎಂದರೆ ಮನೆಯಲ್ಲಿ ಉಳಿದುಕೊಳ್ಳುವುದು ಕಷ್ಟ ಎಂಬುದು ಸಾಬೀತಾಗಿರುವ ವಿಚಾರ. ಅತ್ಯಂತ ಕಡಿಮೆ ವೋಟ್ ಬಂದಿರುವ ಕಾರಣ ಕಿರಣ್ ಯೋಗೇಶ್ವರ್ ರವರು ಮನೆಯಿಂದ ಹೊರಗೆ ಬರಬೇಕಾಗಿ ಬಂದಿತು.

ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಕಿರಣ್ ಯೋಗೇಶ್ವರ್ ರವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎಂಬುದರ ಕುರಿತಂತೆ ಬಿಗ್ ಬಾಸ್ ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಇದೆ. ಕಿರಣ್ ಯೋಗೇಶ್ವರ್ ಅವರಿಗೆ ವಾರಕ್ಕೆ 20000 ರೂಪಾಯಿ ಸಂಭಾವನೆಯನ್ನು ಮೊದಲೇ ನಿಗದಿಪಡಿಸಲಾಗಿತ್ತು. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಕೂಡ ಒಂದು ವಾರವೇ ಇದಕ್ಕಾಗಿ ಅವರಿಗೆ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆ. ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಮೊದಲನೇ ಸ್ಪರ್ಧಿಯಾಗಿ ಹೊರಬಂದಿದ್ದಕ್ಕೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.