ದರ್ಶನ್ ರವರ ನನಗೆ ಅದೊಂದು ದೊಡ್ಡ ಪ್ರಾಮಿಸ್ ಮಾಡಿದ್ದಾರೆ, ಕೊನೆಗೂ ಎಲ್ಲಾ ಸತ್ಯವನ್ನು ಹೊರಹಾಕಿದ ರಕ್ಷಿತ್: ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಈ ನಟ ಹಾಗೂ ನಟಿಯ ಜೋಡಿ ಎನ್ನುವುದು ಸಾಕಷ್ಟು ಸಿನಿಮಾಗಳಲ್ಲಿ ಸೂಪರ್ ಹಿಟ್ ಆಗಿತ್ತು. ಪ್ರತಿಯೊಬ್ಬರೂ ಕೂಡ ಇವರಿಬ್ಬರ ನಟನೆಯ ಸಿನಿಮಾಗಳನ್ನು ನೋಡಲು ಕಾತುರರಾಗಿರುತ್ತಿದ್ದರು. ಕನ್ನಡ ಚಿತ್ರರಂಗ ಕಂಡಂತ ಅತ್ಯಂತ ಯಶಸ್ವಿ ಹೀರೋ ಹೀರೋಯಿನ್ ಜೋಡಿ ಎಂದರು ಕೂಡ ತಪ್ಪಾಗಲಾರದು.
ಹೌದು ನಾವು ಮಾತನಾಡುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತಾ ಅವರ ಕುರಿತಂತೆ. ಒಂದು ಕಾಲದಲ್ಲಿ ಇವರಿಬ್ಬರು ನಾಯಕನಾಗಿ ಹಾಗೂ ನಾಯಕ ನಟಿಯಾಗಿ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಫಲಿತಾಂಶ ಖಂಡಿತವಾಗಿ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಎನ್ನುವುದಾಗಿ ಸಿನಿಮಾ ಪಂಡಿತರು ಮೊದಲನೇ ಲೆಕ್ಕಾಚಾರ ಹಾಕುತ್ತಿದ್ದರು. ಇನ್ನು ಸದ್ಯಕ್ಕೆ ರಕ್ಷಿತಾ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇದೇ ಸಂದರ್ಭದಲ್ಲಿ ರಕ್ಷಿತಾ ಹಾಗೂ ದರ್ಶನ್ ನಟನೆಯ ಸಿನಿಮಾ ಹಾಡಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡುವ ಪ್ರೋಮೋ ವನ್ನು ವಾಹಿನಿ ಪೋಸ್ಟ್ ಮಾಡಿತ್ತು. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಕ್ಷಿತಾ ಅವರಿಗೆ ನೀಡಿದ ಮಾತಿನ ಕುರಿತಂತೆ ರಕ್ಷಿತಾ ಅವರು ಬಹಿರಂಗಪಡಿಸಿದ್ದಾರೆ.

ದರ್ಶನ್ ರವರು ರಕ್ಷಿತಾ ಅವರಿಗೆ ನೀನು ಚೆನ್ನಾಗಿರಬೇಕು ನಿನಗೆ ಯಾವಾಗ ಕಷ್ಟ ಬಂದರೂ ಕೂಡ ನಿನ್ನ ಹೆಗಲ ಹಿಂದೆ ನನ್ನ ಕೈ ಸದಾ ಕಾಲ ಇರುತ್ತದೆ ಎಂಬುದಾಗಿ ಹೇಳಿದ್ದರಂತೆ. ಇದನ್ನು ನಟಿ ರಕ್ಷಿತಾ ಅವರು ಕಾರ್ಯಕ್ರಮದಲ್ಲಿ ಎಲ್ಲರಿಗೂ ಬಿಚ್ಚಿಟ್ಟು ಅವರ ಹಾಗೂ ದರ್ಶನ್ ರವರ ಪವಿತ್ರ ಸ್ನೇಹದ ಕುರಿತಂತೆ ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಇಬ್ಬರು ಅಂದಿನಿಂದ ಇಂದಿನವರೆಗೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿ ಕೊಳ್ಳಬೇಕಾದ ವಿಚಾರ.