ಕೋರ್ಟ್ ಆವರಣದಲ್ಲಿಯೇ ತನ್ನ ಹೆಂಡತಿಯನ್ನು ಮುಗಿಸಿದ ಪತಿರಾಯ: ವಿಚ್ಚೇದನಕ್ಕೆ ಬಂದಿದ್ದಾಗ ಆಗಿದ್ದೇನು ಗೊತ್ತೇ??

46

ನಮಸ್ಕಾರ ಸ್ನೇಹಿತರೇ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿರುವ ಒಂದು ಘಟನೆ ಈಗ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ ಎಂದರ ತಪ್ಪಾಗಲಾರದು. ಕೋರ್ಟ್ ಆವರಣದಲ್ಲಿಯೇ ಪತಿ, ಪತ್ನಿಯ ಕತ್ತನ್ನು ಸೀ’ಳಿ ಮುಗಿಸಿದ್ದಾನೆ. 32 ವರ್ಷದ ಚೈತ್ರ ಎಂಬಾಕೆಯನ್ನು ಏಳು ವರ್ಷದ ಹಿಂದೆ ಶಿವಕುಮಾರ್ ಎನ್ನುವಾತ ಮದುವೆಯಾಗಿದ್ದ.

ಇಬ್ಬರಿಗೂ ಎರಡು ಹೆಣ್ಣು ಮಕ್ಕಳಿದ್ದರು. ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ವೈಮನಸ್ಸು ಉಂಟಾದ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಶಿವಕುಮಾರ್ ವಿವಾಹ ವಿಚ್ಛೇದನಕ್ಕೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ. ಇದೇ ಸಂದರ್ಭದಲ್ಲಿ ಚೈತ್ರ ಶಿವಕುಮಾರ್ ವಿರುದ್ಧ ಜೀವನಾಂಶ ಬೇಕು ಎನ್ನುವ ಕಾರಣಕ್ಕಾಗಿ ಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದಳು. ಈ ಸಂದರ್ಭದಲ್ಲಿ ಅಲ್ಲಿನ ನ್ಯಾಯಾಧೀಶರು ಕೂಡ ಮತ್ತೆ ಇಬ್ಬರು ದಂಪತಿಗಳು ಒಟ್ಟಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬಾಳಿ ಎಂಬುದಾಗಿ ಹೇಳಿ ಮಾತನಾಡಿಕೊಂಡು ಬರಲು ಕಳುಹಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಶೌಚಾಲಯದಲ್ಲಿ ಮಗಳನ್ನು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಚೈತ್ರಾಳ ಹಿಂದೆ ಹೋದ ಶಿವಕುಮಾರ್ ಆಕೆಯನ್ನು ಚಾ’ಕುವಿನಿಂದ ಕತ್ತನ್ನು ಕೊ’ಯ್ದು ಆಕೆಗೆ ರ’ಕ್ತಸ್ರಾವ ಆಗಿರಲು ಬಿಟ್ಟು ಓಡಿ ಹೋಗಿದ್ದಾನೆ.

ಆತನನ್ನು ಬೆನ್ನೆತ್ತಿದ ಸ್ಥಳೀಯರು ಆತನನ್ನು ಕೂಡಲೇ ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಚೈತ್ರಾಳನ್ನು ಕೂಡಲೆ ಹೊಳೆನರಸೀಪುರ ಆಸ್ಪತ್ರೆಗೆ ದಾಖಲು ಮಾಡಿದರು ಕೂಡ ದಾಖಲೆಯಾದ ಕೆಲವೇ ನಿಮಿಷಗಳಲ್ಲಿ ತನ್ನ ಉಸಿರನ್ನು ಚೆಲ್ಲಿದ್ದಾಳೆ. ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದ ಮೌಲ್ಯವೇ ಇಲ್ಲದ ಹಾಗೆ ಜನರು ವರ್ತಿಸುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ಯಾವ ಕಡೆಗೆ ಹೋಗುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುವುದಂತೂ ಸುಳ್ಳಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.