ಅಂದು ಶಿವ ರಾಜ್ ಕುಮಾರ್ ಹಾಗೂ ಗೀತಾ ರವರ ಮದುವೆಯ ಪತ್ರಿಕೆಯಲ್ಲಿ ಏನೆಂದು ಹೆಸರು ಬರೆಸಿದ್ದರು ಅಣ್ಣಾವ್ರು ಗೊತ್ತೇ?? ದೊಡ್ಮನೆ ಮನೆ ವಿಚಾರ ಫುಲ್ ವೈರಲ್
ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ ದೊಡ್ಮನೆ ಎನ್ನುವುದಾಗಿ ರಾಜ್ ಕುಮಾರ್ ಅವರ ಕುಟುಂಬವನ್ನು ಕರೆಯುತ್ತಾರೆ. ಅಣ್ಣಾವ್ರು ಎಂದರೆ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಎನ್ನುವುದಾಗಿ ಎಲ್ಲರೂ ಕರೆಯುತ್ತಾರೆ. ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಯಾವ ಮಟ್ಟದ ಕೊಡುಗೆಯನ್ನು ನೀಡಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ ಇನ್ನು ಅವರ ಪತ್ನಿ ಆಗಿರುವ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ನಿರ್ವಹಕ್ಕಿಯಾಗಿ ಹಲವಾರು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುವಂತೆ ಮಾಡಿದ್ದಾರೆ. ಇಂದಿಗೂ ಅಣ್ಣಾವ್ರ ಮನೆಯ ಹೆಸರನ್ನು ಹೇಳಿಕೊಂಡು ಅವರನ್ನು ದೇವರ ಸ್ಥಾನದಲ್ಲಿ ಪೂಜೆ ಮಾಡಿಕೊಂಡು ಅನ್ನವನ್ನು ತಿನ್ನುವವರು ಸಾಕಷ್ಟು ಮಂದಿ ಇದ್ದಾರೆ.
ಇನ್ನು ಅಣ್ಣಾವ್ರ ಮನೆಯ ಮೂರು ರತ್ನಗಳ ಕುರಿತಂತೆ ಬೇರೆ ಹೆಚ್ಚೇನು ಹೇಳಬೇಕಾಗಿಲ್ಲ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅಣ್ಣಾವ್ರ ಹಿರಿಮಗ ಆಗಿರುವ ರಾಜಕುಮಾರ್ ಹಾಗೂ ಅವರ ಪತ್ನಿ ಆಗಿರುವ ಗೀತಕ್ಕ ಅವರ ಕುರಿತಂತೆ. ಗೀತಕ್ಕ ಕೂಡ ನಾಡು ಕಂಡಂತಹ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಬಂಗಾರಪ್ಪ ಅವರ ಮಗಳಾಗಿದ್ದಾರೆ. ಇಬ್ಬರ ಮದುವೆಯು ಕೂಡ 1986ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ಮದುವೆ ಕಾರ್ಡ್ ಸಾಕಷ್ಟು ವೈರಲ್ ಆಗುತ್ತಿದ್ದು ಅದರಲ್ಲಿ ಏನಿದೆ ಎಂಬುದಾಗಿ ತಿಳಿದುಕೊಳ್ಳೋಣ ಬನ್ನಿ. 1986 ರ ಮೇ 19 ರಂದು ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಕೂಡ ಮನೆಯವರ ಒಪ್ಪಿಗೆ ಮೇಲೆ ಅರೇಂಜ್ ಮ್ಯಾರೇಜ್ ಆಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ತಮ್ಮ ಮಗಳನ್ನು ನಿಮ್ಮ ಮನೆಯ ಸೊಸೆಯಾಗಿ ತಂದುಕೊಳ್ಳುತ್ತೀರ ಎಂಬುದಾಗಿ ವಿನಂತಿಸಿದ ಮೇಲೆ ಅಣ್ಣಾವ್ರು ಸಂತೋಷದಿಂದ ಹಾಗೂ ಕುಟುಂಬದವರೆಲ್ಲರೂ ಒಪ್ಪಿಗೆ ನೀಡಿ ಈ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಯಾಕೆಂದರೆ ಇದು ಮನೆಯ ಹಿರಿಯ ಮಗನ ಮದುವೆಯಾಗಿತ್ತು.

ಈ ಮದುವೆಗೆ ಮೇರು ನಟರಾದ ಕಮಲ್ ಹಾಸನ್ ಎಂಜಿರಾವ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವಾರು ಗಣ್ಯಾತಿ ಗಣ್ಯರು ಆಗಮಿಸಿ ವಧುವರರಿಗೆ ಶುಭಾಶಯವನ್ನು ಕೋರಿದ್ದರು. ಈ ಮದುವೆ ಪತ್ರಿಕೆ ಕೂಡ ಈಗಾಗಲೇ ಸಿಕ್ಕಿದ್ದು ನೀವು ಈ ಫೋಟೋದಲ್ಲಿ ಮದುವೆ ಕಾರ್ಡಿನಲ್ಲಿ ಅಣ್ಣಾವ್ರು ಏನೆಲ್ಲಾ ಬರೆಸಿದ್ದರು ಎಂಬುದನ್ನು ನೋಡಬಹುದಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಅಂದಿನ ಕಾಲದ ಅತ್ಯಂತ ಅದ್ದೂರಿ ಮದುವೆಗಳಲ್ಲಿ ಇದು ಕೂಡ ಒಂದಾಗಿ ಕಾಣಿಸಿಕೊಂಡಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.