ಎಂದಿಗೂ ಜಾಹೀರಾತು ಮಾಡದ ಡಿ ಬಾಸ್, ಮೊದಲ ಬಾರಿಗೆ ರಾಮ್ ರಾಜ್ ಜಾಹಿರಾತು ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ದಂಗಾಗ್ತೀರಾ.

19

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಕಿಂಗ್ ಸ್ಟಾರ್ ಯಶ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕಾಣಿಸಿಕೊಳ್ಳುತ್ತಾರೆ. ಈ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅತ್ಯಂತ ಕಡಿಮೆಯಾಗಿ ಕಾಣಿಸಿಕೊಳ್ಳುತ್ತಾರೆ. ಆದ್ರೂ ಒಂದು ವೇಳೆ ಡಿ ಬಾಸ್ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ಖಂಡಿತವಾಗಿ ಅವರ ಬೇಡಿಕೆ ಹಾಗೂ ಆ ಜಾಹೀರಾತಿಗಾಗಿ ಅವರು ತೆಗೆದುಕೊಳ್ಳುವ ಸಂಭಾವನೆ ಯಾವ ಮಟ್ಟದಲ್ಲಿ ಇರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ.

ಡಿ ಬಾಸ್ ರವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಡಿ ಬಾಸ್ ಮಾಧ್ಯಮಗಳ ಮುಂದೆ ಹಾಗೂ ಬೇರೆ ಬೇರೆ ಇಂಟರ್ವ್ಯೂ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಕ್ಯಾಮೆರಾ ಕಣ್ಣಿಗೆ ಬಿಟ್ಟರೆ ಬೇರೆ ಕ್ಯಾಮೆರಾ ಮುಂದೆ ಹೆಚ್ಚಾಗಿ ಡಿ ಬಾಸ್ ಕಂಡಿದ್ದು ಅತ್ಯಂತ ವಿರಳಾತಿ ವಿರಳ ಎಂದು ಹೇಳಬಹುದು. ಹೀಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡಿ ಬಾಸ್ ರವರು ಕನ್ನಡದ ಸಾಂಸ್ಕೃತಿಕ ನಟ ಎಂದರು ಕೂಡ ತಪ್ಪಾಗಲಾರದು. ಹೀಗಾಗಿ ಅವರು ಜಾಹೀರಾತಿಗಾಗಿ ಆಯ್ಕೆ ಮಾಡುವ ಬ್ರಾಂಡ್ ಕೂಡ ಅದೇ ಹಿನ್ನೆಲೆಯನ್ನು ಹೊಂದಿದೆ. ಡಿ ಬಾಸ್ ರವರು ರಾಮರಾಜ್ ಕಾಟನ್ ಪಂಚೆ ಹಾಗೂ ಒಳಉಡುಪುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಮೊದಲ ಬಾರಿಗೆ ಡಿ ಬಾಸ್ ಅವರನ್ನು ಜಾಹೀರಾತಿನಲ್ಲಿ ಕಂಡು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಈ ಜಾಹೀರಾತನ್ನು ಆಚರಿಸಿದ್ದರು. ಇನ್ನು ಈ ಜಾಹೀರಾತಿಗಾಗಿ ಡಿ ಬಾಸ್ ರವರು ಪಡೆದುಕೊಂಡಿದ್ದ ಸಂಭಾವನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯದ ಕಾರಣದಿಂದಾಗಿ ಮೂಗಿನ ಮೇಲೆ ಬೆರಳು ಇಡೋದು ಗ್ಯಾರಂಟಿ. ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆಯನ್ನು ಈ ಜಾಹೀರಾತಿಗಾಗಿ ಡಿ ಬಾಸ್ ಪಡೆದುಕೊಂಡಿದ್ದರು. ಮೊದಲನೇ ಬಾರಿಗೆ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ಕೂಡ ಅವರ ಡಿಮ್ಯಾಂಡ್ ಯಾವ ಮಟ್ಟಿಗೆ ಇದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇನ್ನು ಹೆಚ್ಚೆಚ್ಚು ಜಾಹೀರಾತಿಗಳಲ್ಲಿ ಡಿ ಬಾಸ್ ಕಾಣಿಸಿಕೊಳ್ಳಲಿ ಎಂಬುದಾಗಿ ಅವರ ಅಭಿಮಾನಿಗಳು ಹಾರೈಸುತ್ತಾರೆ.