ದಿನಾಂಕ ಮರೆಯದಿರಿ, ಮುಂದಿನ 15 ನೇ ರಂದು ಈ ರಾಶಿಯಲ್ಲಿ ಗಜ ಕೇಸರಿ ಯೋಗ: ಯಾವ್ಯಾವ ರಾಶಿಗಳಿಗೆ ಹೆಚ್ಚು ಲಾಭ ಗೊತ್ತೇ??

772

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 15ರಂದು ಶುಭ ಕಾಕತಾಳೀಯ ಕಂಡುಬರುತ್ತಿದೆ. ಇದೇ ಆಗಸ್ಟ್ 15ರಂದು ಮೀನ ರಾಶಿಯಲ್ಲಿ ಅತ್ಯಂತ ಶುಭಕರ ಎಂದು ಕರೆಯಲಾಗುವ ಗಜಕೇಸರಿ ಯೋಗ ಪರಿಣಾಮಸಲಿದೆ. ಇನ್ನು ಅದೇ ದಿನ ಗಣೇಶ ಚತುರ್ಥಿ ಕೂಡ ಇದೆ.

ಇದೇ ಆಗಸ್ಟ್ 15ರಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಗಣೇಶ ಚತುರ್ಥಿ ಇರುವುದರಿಂದ ಜನರು ವಿಘ್ನ ವಿನಾಶನ ಪೂಜೆ ಮಾಡುವುದರಿಂದ ಆತನ ಕೃಪೆಗೆ ಪಾತ್ರರಾಗಬಹುದಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಈ ಯೋಗ ಅಂದು ರಾತ್ರಿ 11.22ರ ವರೆಗೆ ಇರಲಿದೆ. ಆಗಸ್ಟ್ 15 ಎನ್ನುವುದು ಮೀನ ರಾಶಿಯವರಿಗೆ ಅತ್ಯಂತ ಶುಭದಿನ ಎಂಬುದಾಗಿ ನಂಬಲಾಗುತ್ತದೆ ಯಾಕೆಂದರೆ ಈಗಾಗಲೇ ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ವಿರಾಜಮಾನ ರಾಗಿದ್ದಾರೆ. ಇದೇ ಸಂದರ್ಭದಲ್ಲಿ ಅಂದರೆ ಆಗಸ್ಟ್ 15ರಂದು ಚಂದ್ರನ ಗೋಚಾರದಿಂದಾಗಿ ಮೀನ ರಾಶಿಯಲ್ಲಿ ಗಜಕೇಸರಿ ಯೋಗ ನಿರ್ಮಾಣವಾಗುತ್ತದೆ. ಒಂದೇ ಸಮಯದಲ್ಲಿ ಬೃಹಸ್ಪತಿ ಹಾಗೂ ಗಜಕೇಸರಿ ಯೋಗ ಒಂದೇ ರಾಶಿಯಲ್ಲಿ ಕಂಡುಬರುವುದು ಅತ್ಯಂತ ಶುಭಕರ ಎಂಬುದಾಗಿ ನಂಬಲಾಗುತ್ತದೆ. ಇನ್ನು ಗಜಕೇಸರಿ ಯೋಗದ ಬಗ್ಗೆ ಮಾತನಾಡುವುದಾದರೆ ಗಜ ಎಂದರೆ ಆನೆ ಎಂದರೆ ಶಕ್ತಿಯ ಸಂಕೇತ ಕೇಸರೀ ಎಂದರೆ ಸ್ವರ್ಣ ಎಂದರೆ ಸಮೃದ್ಧಿಯ ಸಂಕೇತ.

ಶಕ್ತಿ ಹಾಗೂ ಸಮೃದ್ಧಿ ಅಧಿಕವಾಗುವುದೇ ಗಜಕೇಸರಿ ಯೋಗದಂತಹ ಅತ್ಯಂತ ಶುಭ ಯೋಗದಲ್ಲಿ ನಡೆಯುವ ಪರಿಣಾಮವಾಗಿದೆ. ಒಟ್ಟಾರೆಯಾಗಿ ಮೀನ ರಾಶಿಯವರಿಗೆ ಆಗಸ್ಟ್ 15 ರಂದು ಬೃಹಸ್ಪತಿ ಹಾಗೂ ಚಂದ್ರನ ಸಂಯೋಜನೆಯಿಂದ ಉಂಟಾಗುವ ಗಜಕೇಸರಿ ಯೋಗ ಹಾಗೂ ಸಂಕಷ್ಟ ಚತುರ್ಥಿಯಿಂದಾಗಿ ಗಜಾನನನ ಆಶೀರ್ವಾದವು ಕೂಡ ಲಭಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೊಂದು ಅತ್ಯಂತ ಶುಭ ಹಾಗೂ ಶ್ರೇಷ್ಠವಾದ ದಿನ ಎಂದು ಹೇಳಬಹುದಾಗಿದೆ.