ಮೊನ್ನೆ ಸ್ಫೂರ್ತಿ ಲವ್, ನಿನ್ನೆ ಸೋನು ಲವ್ ಕಥೆ ಇಂದು ಸಾನಿಯಾ ಪ್ರೇಮ ಕಥೆ ಆರಂಭ. ಯಾರ ಜೊತೆ ಗೊತ್ತೇ?? ರಾಕೇಶ್ ಅಲ್ಲ, ಮತ್ಯಾರು??

58

ನಮಸ್ಕಾರ ಸ್ನೇಹಿತರೆ ಚುಟುಕು ಬಿಗ್ ಬಾಸ್ ಈಗಾಗಲೇ ಪ್ರಾರಂಭವಾಗಿ ಒಂದು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಆಗಸ್ಟ್ ಆರರಂದು ಬಿಗ್ ಬಾಸ್ ಮನೆಗೆ ಕಾಲಿಟ್ಟ ಹಲವಾರು ಕ್ಷೇತ್ರದ ಹಲವಾರು ಸೆಲೆಬ್ರಿಟಿ ಗಳು ಈಗಾಗಲೇ ಪ್ರೀತಿ ಪ್ರೇಮ ಜಗಳ ಆರೋಪ ಪ್ರತ್ಯಾರೋಪಗಳ ವಿಚಾರದಿಂದಾಗಿ ಬಿಗ್ ಬಾಸ್ ಪ್ರೇಕ್ಷಕರಿಗೆ ಮನರಂಜನೆಯನ್ನಂತೂ ನೀಡುತ್ತಿದ್ದಾರೆ. ಅದರಲ್ಲೂ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಈ ಹಿಂದಿನ ಬಿಗ್ ಬಾಸ್ ಗಳಂತೆ ಸ್ಪರ್ಧಿಗಳ ನಡುವೆ ಪ್ರೀತಿ ಕೂಡ ಆರಂಭವಾಗಿರುವುದು ಕಂಡುಬರುತ್ತದೆ. ಮೊದಲಿಗೆ ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಗೌಡ ರವರ ನಡುವೆ ಪ್ರೀತಿ ಅಲ್ಲದ ಪ್ರೀತಿ ಪ್ರಾರಂಭವಾಗಿದೆ ಎಂಬುದಾಗಿ ತಿಳಿದುಬರುತ್ತದೆ.

ಪ್ರೀತಿ ಅಲ್ಲದ ಪ್ರೀತಿ ಎಂದು ಹೇಳುವುದಕ್ಕೆ ಕಾರಣವೆಂದರೆ ಅದನ್ನು ಅವರು ಒಪ್ಪಿಕೊಳ್ಳುವುದಿಲ್ಲ ಆದರೆ ಪ್ರೇಕ್ಷಕರಾದ ನಮಗೆ ಪರದೆ ಮೇಲೆ ಅದು ಕಂಡು ಬರುತ್ತಿದೆ. ಇತ್ತೀಚಿಗಷ್ಟೇ ಸೋನು ಶ್ರೀನಿವಾಸ ಗೌಡ ಕೂಡ ರಾಕೇಶ್ ಅಡಿಗ ಅವರ ಮೇಲೆ ಫೀಲಿಂಗ್ ಇದೆ ಎಂಬುದಾಗಿ ಹೇಳಿ ಸುದ್ದಿಯಾಗಿದ್ದರು. ಇದು ಇಲ್ಲಿಗೆ ನಿಂತಿತು ಎಂದು ಭಾವಿಸಿದರೆ ಅದು ಕೂಡ ತಪ್ಪಾಗುತ್ತದೆ ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಪ್ರಾರಂಭವಾದ ಹಾಗೆ ಕಾಣುತ್ತದೆ. ಹೌದು ಗೆಳೆಯರೇ ಅದನ್ನು ಯಾರು ಅಲ್ಲ ತುಳು ಸಿನಿಮಾಗಳ ನಾಯಕ ನಟ ಹಾಗೂ ಆರ್‌ಜೆಯಾಗಿ ಕಾಣಿಸಿಕೊಂಡಿರುವ ರೂಪೇಶ್ ಶೆಟ್ಟಿ ಹಾಗೂ ಪುಟ್ಟಗೌರಿ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಹಾಗೂ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸಾನಿಯಾ ಅಯ್ಯರ್.

ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಹೈಯರ್ ಬಿಗ್ ಬಾಸ್ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕ್ಲೋಸ್ ಆಗಿ ಎಲ್ಲಾ ಸಂದರ್ಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಕೂಡ ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಅದಕ್ಕಿಂತ ಹೆಚ್ಚಾಗಿ ಇನ್ನೇನು ಇಲ್ಲ ಎಂಬುದಾಗಿ ಅದೇ ಕಾಮನ್ ಡೈಲಾಗ್ ಹೊಡೆಯುತ್ತಿದ್ದಾರೆ. ಆದರೆ ಪ್ರೇಕ್ಷಕರಿಗೆ ಇದೇನು ಎಂಬುದನ್ನು ಹೇಳಲು ಹೆಚ್ಚೆತ್ತು ಬೇಕಾಗಿಲ್ಲ ಯಾಕೆಂದರೆ ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಎಂಟು ಸೀಸನ್ ಗಳನ್ನು ಅವರು ನೋಡಿಕೊಂಡು ಬಂದಿದ್ದಾರೆ. ಇನ್ನು ಯಾವ್ಯಾವ ಲವ್ ಸ್ಟೋರಿಗಳು ಬಿಗ್ ಬಾಸ್ ಮನೆಯಲ್ಲಿ ಮೂಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದು ಇದೇ ವಾರ ಅಂತ್ಯದಲ್ಲಿ ಎಲಿಮಿನೇಷನ್ ಕೂಡ ಇದ್ದು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.