ಮಾಲಾಶ್ರೀ ಮಗಳಿಗೆ ದರ್ಶನ್ ಅವಕಾಶ ಕೊಟ್ಟಿರುವುದಕ್ಕೆ ಅಸಲಿ ಕಾರಣವಾದರೂ ಏನು?? ಯಾರ ಸೊಕ್ಕು ಮುರಿಯಲು ಈ ತಂತ್ರ??

6,096

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 56ನೇ ಸಿನಿಮಾದ ನಾಯಕಿ ಯಾರು ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದು ಬಿಟ್ಟಿದೆ. ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಟನೆಯ 56ನೇ ಸಿನಿಮಾದ ನಾಯಕಿಯಾಗಿ ನಿರ್ಮಾಪಕ ರಾಮು ಹಾಗೂ ಮಾಲಾಶ್ರೀ ಅವರ ಮಗಳಾಗಿರುವ ರಾಧನ ಅವರು ಆಯ್ಕೆಯಾಗಿದ್ದಾರೆ.

ಈ ಹೆಸರಿಡದ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ರವರು ನಿರ್ಮಾಪಕನಾಗಿ ನಿರ್ಮಾಣ ಮಾಡಲಿದ್ದಾರೆ ಹಾಗೂ ತರುಣ್ ಸುಧೀರ್ ರವರು ನಿರ್ದೇಶಕನಾಗಿ ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ದರ್ಶನ್ ರವರಿಗೆ ರಾಧನ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಮೂಡಿ ಬರುತ್ತಿವೆ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಮಾಧ್ಯಮ ಹಾಗೂ ಡಿ ಬಾಸ್ ರವರ ನಡುವೆ ಹಲವು ತಿಂಗಳುಗಳಿಂದ ಅಘೋಷಿತ ಮುನಿಸು ಹೊಗೆ ಆಡುತ್ತಿದೆ. ಹೀಗಾಗಿ ಅವುಗಳು ಡಿ ಬಾಸ್ ರವರ ಸಿನಿಮಾಗಳ ಕುರಿತಂತೆ ಯಾವುದೇ ಪ್ರಚಾರವನ್ನು ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡುತ್ತಿಲ್ಲ.

ಇನ್ನು ಈ ಕಡೆ ಡಿ ಬಾಸ್ ರವರ ಹೊಸ ಸಿನಿಮಾಗೆ ರಾಧನ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಹಲವಾರು ಚರ್ಚೆಗಳು ಹಾಗೂ ಕೆಸರೆರೆಚಾಟ ಕೂಡ ನಡೆಯುತ್ತಿದೆ. ಕೆಲವರು ಪ್ರಚಾರಕ್ಕಾಗಿ ರಾಧನ ಅವರನ್ನು ಸಿನಿಮಾಗಾಗಿ ಆಯ್ಕೆ ಮಾಡಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ತಮ್ಮದೇ ಆದಂತಹ ಹಲವಾರು ಕಾರಣಗಳನ್ನು ಇಲ್ಲಿ ಬಾಯಿಗೆ ಬಂದಂತೆ ನೀಡುತ್ತಿದ್ದಾರೆ. ಅದನ್ನು ತಿಳಿಯುವುದಕ್ಕಿಂತ ಮುಂಚೆ ರಾಧನ ಅವರ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

ನಿರ್ಮಾಪಕ ಕೋಟಿ ರಾಮು ಹಾಗೂ ನಾಯಕನಟಿ ಮಾಲಾಶ್ರೀ ಅವರ ಸುಪುತ್ರಿ ಆಗಿರುವ ರಾಧನಾ ಅವರ ನಿಜವಾದ ಹೆಸರು ಅನನ್ಯ ಎಂಬುದಾಗಿ. ರಾಮು ಅವರಿಗೂ ಕೂಡ ತಮ್ಮ ಮಗಳು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ಈ ಹಿನ್ನೆಲೆಯಲ್ಲಿ ಸಿನಿಮಾಗೆ ಹೋಗುವುದಾದರೆ ಅನನ್ಯ ಎನ್ನುವ ಹೆಸರು ಬೇಡ ರಾಧನ ಎನ್ನುವ ಹೆಸರು ಇರಲಿ ಎಂಬುದಾಗಿ ಹೇಳಿದ್ದರು. ಅದೇ ರೀತಿ ಚಿತ್ರರಂಗಕ್ಕೆ ಮುಂಬೈನಲ್ಲಿ ನಟನೆ ನೃತ್ಯ ಸೇರಿದಂತೆ ಎಲ್ಲಾ ಕೌಶಲ್ಯಗಳನ್ನು ಕಲಿತು ರಾಧನಾ ರವರು ಈಗ ಸಿನಿಮಾರಂಗಕ್ಕೆ ನಾಯಕ ನಟಿಯಾಗಿ ಎಂಟ್ರಿ ನೀಡುತ್ತಿದ್ದಾರೆ.

ಈ ಹಿಂದೆ ಗಮನಿಸಿದರೆ ಮಾಲಾಶ್ರೀ ಅವರು ಕೂಡ ಕೇವಲ 17 ವರ್ಷ ವಯಸ್ಸಿರಬೇಕಾದರೆ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದರು. ಈಗ ಅವರ ಮಗಳು ರಾಧನ 21 ವರ್ಷದವರಿರಬೇಕಾದರೆ ಡಿ ಬಾಸ್ ರವರ ಸಿನಿಮಾದಲ್ಲಿ ನಾಯಕಿಯಾಗಿ ಎಂಟ್ರಿ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮೊದಲ ಸಿನಿಮಾದಲ್ಲಿ ಡಿ ಬಾಸ್ ರವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ.

ಬೇರೆಯವರು ಮಾಲಾಶ್ರೀ ಅವರ ಮಗಳಿಗೆ ನಾಯಕಿಯಾಗಿ ಅವಕಾಶ ನೀಡಿದ್ದಾರೆ ಎಂದು ಏನು ಬೇಕಾದರೂ ಮಾತನಾಡಿಕೊಳ್ಳಲಿ ಆದರೆ ಡಿ ಬಾಸ್ ರವರು ಮಾತ್ರ ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಮಿಂಚುವ ಅವಕಾಶವನ್ನು ದೊಡ್ಡ ಮಟ್ಟದಲ್ಲಿ ನೀಡಿದ್ದಾರೆ ಎಂಬುದಾಗಿ ನಾವು ಭಾವಿಸಿಕೊಳ್ಳಬಹುದಾಗಿದೆ. ಇದೇ ಕಾರಣಕ್ಕಾಗಿ ತಾನೆ ಡಿ ಬಾಸ್ ರವರನ್ನು ಎಲ್ಲರೂ ಮೆಚ್ಚಿಕೊಳ್ಳುವುದು ಹಾಗೂ ಹೊಸ ಪ್ರತಿಭೆಗಳು ಬೆಳೆಯುವಲ್ಲಿ ಡಿ ಬಾಸ್ ರವರು ಸದಾ ಕಾಲ ತಮ್ಮ ಪ್ರೋತ್ಸಾಹವನ್ನು ನೀಡುತ್ತಾರೆ ಎಂಬುದಾಗಿ ಹೇಳುವುದು. ಡಿ ಬಾಸ್ ರವರು ತಮ್ಮ 56ನೇ ಸಿನಿಮಾದಲ್ಲಿ ರಾಧನ ಅವರಿಗೆ ನಾಯಕಿ ಆಗುವ ಅವಕಾಶವನ್ನು ನೀಡಿರುವ ಹಿನ್ನೆಲೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.